ಕೊಪ್ಪಳ: 2025-26ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನೋಂದಣಿಯಾಗಿದ್ದ ಹಸಿಮೆಣಸಿನಕಾಯಿ ಬೆಳೆ ವಿಮಾ ಅರ್ಜಿಗಳನ್ನು ಮರುಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಪರಿಹಾರ ವಿತರಿಸಲು ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯ ನಡಾವಳಿ ಪ್ರಕಾರ ಮರುವಿನ್ಯಾಸಗೊಳಿಸಿದ ಆಧಾರಿತ ಬೆಳೆ ವಿಮಾ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಹಸಿಮೆಣಸಿನಕಾಯಿ ಬೆಳೆ ನೋಂದಣಿಯಾಗಿತ್ತು. ಹಸಿಮೆಣಸಿನಕಾಯಿ ಬೆಳೆ ಕ್ಷೇತ್ರ ವಾಸ್ತವಿಕ ಬಿತ್ತನೆ ಕ್ಷೇತ್ರಕ್ಕಿಂತ ಹೆಚ್ಚಿರುವುದು ಕಂಡುಬಂದಿದ್ದರಿಂದ ಅಗ್ರಿಕಲ್ಚರ್ ಇನ್ಶೂರನ್ಸ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕರು ಎಲ್ಲಾ ಅರ್ಜಿಗಳನ್ನು ಕ್ರಾಪ್ ಹೆಲ್ತ್ ಮಾನಿಟರಿಂಗ್ ಮೂಲಕ ಶೇ 100ರಷ್ಟು ಪರಿಶೀಲನೆ ಮಾಡಿದಾಗ ವಾಸ್ತವ ಗೊತ್ತಾಗಿದೆ. ಶೇ 90.42ರಷ್ಟು ನೋಂದಾಯಿತ ಪ್ರದೇಶಗಳಲ್ಲಿ ಹಸಿಮೆಣಸಿನಕಾಯಿ ಬೆಳೆಯಿಲ್ಲ ಎಂದು ಗೊತ್ತಾಗಿದೆ.

ಜಂಟಿ ಪರಿಶೀಲನೆಯಲ್ಲಿ ಕೊಪ್ಪಳ ತಾಲ್ಲೂಕಿನಲ್ಲಿ 582 ಅರ್ಜಿಗಳ ಪೈಕಿ 64 ಸರ್ವೆ ಸಂಖ್ಯೆಯಲ್ಲಿ, ಕನಕಗಿರಿ ತಾಲ್ಲೂಕಿನಲ್ಲಿ 36 ಅರ್ಜಿಗಳ ಪೈಕಿ ಮೂರರಲ್ಲಿ, ಕುಕನೂರು ತಾಲ್ಲೂಕಿನಲ್ಲಿ 762 ಅರ್ಜಿಗಳ ಪೈಕಿ 194ರಲ್ಲಿ ಯಲಬುರ್ಗಾ ತಾಲ್ಲೂಕಿನಲ್ಲಿ 260ರಲ್ಲಿ 80ರಲ್ಲಿ ಮತ್ತು ಕುಷ್ಟಗಿ ತಾಲ್ಲೂಕಿನಲ್ಲಿ 260 ಅರ್ಜಿಗಳಲ್ಲಿ 80ರಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ಒಟ್ಟು 2,286 ಅರ್ಜಿಗಳ ಪೈಕಿ 432 ಸರ್ವೆ ಸಂಖ್ಯೆಯಲ್ಲಿ ಮಾತ್ರ ಹಸಿಮೆಣಸಿನಕಾಯಿ ಬೆಳೆ ಬಿತ್ತನೆ ಕಂಡುಬಂದಿದೆ. ಇನ್ನುಳಿದ 1,854 ಸರ್ವೆ ಸಂಖ್ಯೆಯಲ್ಲಿ ನೋಂದಣಿಯಾದ ಹಸಿಮೆಣಸಿನಕಾಯಿ ಬೆಳೆ ಕಂಡು ಬಂದಿಲ್ಲ ಎಂಬುದು ಪರೀಕ್ಷೆಯ ವೇಳೆ ಸಾಬೀತಾಗಿದೆ.

ಸರ್ವೆ ವೇಳೆ ಕಂಡು ಬಂದ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯಿತಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು 10 ದಿನ ಅವಕಾಶ ಕೊಡಲಾಗಿತ್ತು. ಯಲಬುರ್ಗಾ ತಾಲ್ಲೂಕಿನಲ್ಲಿ 5 ಹಾಗೂ ಕುಕನೂರಿನಿಂದ 6 ಆಕ್ಷೇಪಣೆಗಳು ಬಂದಿದ್ದು, ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗಿದೆ.

‘ಬೆಳೆಯ ಸಮೀಕ್ಷೆ ಜಂಟಿ ಪರಿಶೀಲನಾ ವರದಿಯನ್ನು ಸಂಬಂಧಪಟ್ಟ ತಾಲ್ಲೂಕಿನ ಬೆಳೆ ಸಮೀಕ್ಷೆ ಸಮಿತಿಯೊಂದಿಗೆ ಆಯಾ ತಾಲ್ಲೂಕುಗಳ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕೈಗೊಂಡು ಅನುಮೋದನೆ ಪಡೆದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-35-58047188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.