ಕೊಪ್ಪಳ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಕೊಲ್ಲಿ ರಾಷ್ಟ್ರಗಳ ಮೇಲೂ ಆಗಿರುವುದರಿಂದ ಜಿಲ್ಲೆಯಲ್ಲಿ ದೊಡ್ಡ ಹೋಟೆಲ್ಗಳ ವಹಿವಾಟಿನ ಮೇಲೆ ಸಮಸ್ಯೆಯಾಗಿದ್ದು ಹಳೆಯ ವಿಷಯವಾದರೆ, ಈಗ ಬೀದಿಬದಿ ಹೋಟೆಲ್ಗಳನ್ನು ನಡೆಸುವವರು ಹಾಗೂ ಸಣ್ಣ ಹೋಟೆಲ್ಗಳಿಗೂ ಈ ಯುದ್ಧ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.

ಮಾರ್ಚ್ ಮೊದಲ ವಾರದಿಂದ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ಗಳ ಪೂರೈಕೆ ಸ್ಥಗಿತ ಮಾಡಲಾಗಿದೆ. ಅದಕ್ಕೂ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಸಿಲಿಂಡರ್ಗಳನ್ನು ಸಂಗ್ರಹಿಸಿಟ್ಟುಕೊಂಡವರಿಗೆ ಸಮಸ್ಯೆಯ ಬಿಸಿ ತಟ್ಟಿರಲಿಲ್ಲ. ನಿಧಾನವಾಗಿ ಅವರಿಗೂ ಕೊರತೆ ಉಂಟಾಗಿ ಜಿಲ್ಲಾಕೇಂದ್ರ ಸೇರಿದಂತೆ ಅನೇಕ ಹೋಟೆಲ್ಗಳ ಮಾಲೀಕರು ತಮ್ಮ ದೈನಂದಿನ ವಹಿವಾಟು ನಡೆಸಲು ಕಟ್ಟಿಗೆಗಳ ಮೊರೆ ಹೋಗಿದ್ದಾರೆ. ಅನೇಕ ಆಹಾರ ಪದಾರ್ಥಗಳನ್ನು ಕಡಿತ ಮಾಡಿದ್ದಾರೆ.

ವಿವಿಧೆಡೆ ಬೀದಿಬದಿಯಲ್ಲಿ ಸಣ್ಣ ಹೋಟೆಲ್ಗಳನ್ನು ನಡೆಸುವವರು, ಫುಟ್ಪಾತ್ನಲ್ಲಿ ಬಂಡಿ ಅಂಗಡಿಗಳನ್ನು ಇಟ್ಟುಕೊಂಡವರು ತಮ್ಮ ದಿನನಿತ್ಯದ ದುಡಿಮೆಯ ಮೇಲೆ ಬದುಕು ನಡೆಸುತ್ತಿದ್ದಾರೆ. ದೈನಂದಿನವಾಗಿ ಗಳಿಸುತ್ತಿದ್ದ ಅಲ್ಪ ಆದಾಯವೇ ಬದುಕಿನ ಬಂಡಿ ಸಾಗಿಸಲು ಅನುಕೂಲವಾಗುತ್ತಿತ್ತು. ಈಗ ನಗರದಲ್ಲಿ ಎಗ್ರೈಸ್ ಮಾರಾಟ ಮಾಡುವವರು, ಚಹಾ, ಕಾಫಿ, ಹಾಲು ಮಾರಾಟ ಮಾಡುವವರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಬಹಳಷ್ಟು ಜನ ಮಜ್ಜಿಗೆ ಮಾರಾಟ ಮಾತ್ರ ಮಾಡುತ್ತಿದ್ದರೆ, ಇನ್ನು ಕೆಲವರು ಮನೆಯಲ್ಲಿಯೇ ಚಹಾ ತಯಾರಿಸಿಕೊಂಡು ಫ್ಲಾಸ್ಕ್ನಲ್ಲಿ ಹಾಕಿಕೊಂಡು ಬಂದು ತಮ್ಮ ನಿತ್ಯದ ವ್ಯಾಪಾರದ ಬಂಡಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಬೀದಿಬದಿಯ ಕೆಲವು ಹೋಟೆಲ್ನವರು ಮತ್ತು ಎಗ್ರೈಸ್ ಬಂಡಿಯ ಮಾಲೀಕರು ಹಳೇ ಕಾಲದಲ್ಲಿ ಕಮ್ಮಾರರ ಕುಲುಮೆಯಲ್ಲಿ ಕಬ್ಬಿಣ ಕಾಯಿಸುವಂತೆ ಒಲೆ ಊರಿಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಇಲ್ಲಿನ ಬೆಂಕಿ ನಗರದಲ್ಲಿರುವ ಅಂಗಡಿಯ ಮಾಲೀಕ ಲಕ್ಷ್ಮಣ ಹಿರೇಮನಿ ಎಂಬುವರು ಬದಲಾದ ಪರಿಸ್ಥಿತಿಯ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡಿದ್ದಾರೆ.

‘ಕುಲುಮೆಯಲ್ಲಿರುವ ಕಬ್ಬಿಣ ಕಾಯಿಸುವ ಒಲೆಯನ್ನು ₹2,600 ಕೊಟ್ಟು ಖರೀದಿಸಿದ್ದೇನೆ. ಪಂಕಾಕ್ಕೆ ಸೌದೆ ಹಾಗೂ ಇದ್ದಿಲು ಹಾಕಿ ತಿರುಗಿಸಿದಾಗ ಒಲೆ ಉರಿಯುತ್ತದೆ. ಅದೇ ಒಲೆ ಉರಿಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದೇನೆ. ಬದುಕಿಗಾಗಿ ಒಂದಷ್ಟು ಸಾಲ ಮಾಡಿಕೊಂಡಿದ್ದೇನೆ. ಹೋಟೆಲ್ ಬಂದ್ ಮಾಡಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆ ಇರುವ ಕಾರಣ ಹೊಸದಾರಿ ಹುಡುಕಿಕೊಂಡಿದ್ದೇನೆ’ ಎಂದು ಲಕ್ಷ್ಮಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.