ಕೊಪ್ಪಳ: ವಿಚಾರಣಾಧೀನ ಕೈದಿಗಳ ಮನಪರಿವರ್ತನೆಯ ಜೊತೆಗೆ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ ಕಾರಣಕ್ಕಾಗಿ ಇಲ್ಲಿನ ಜಿಲ್ಲಾ ಕಾರಾಗೃಹವು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಿಂದ ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನ ತುಮಕೂರಿನ ಪಾಲಾಗಿದೆ.

ಇಲಾಖೆ ಪೊಲೀಸ್ ಮಹಾನಿರ್ದೇ ಶಕ ಅಲೋಕಕುಮಾರ್ ಅವರು ಕೊಪ್ಪಳದ ಕಾರಾಗೃಹದ ನಿರ್ವಹಣೆ ಹಾಗೂ ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿದ್ದಾರೆ. ಕಾರಾಗೃಹದಲ್ಲಿ ಅನಿರೀಕ್ಷಿತ ತಪಾಸಣೆ, ವಿಚಾರಣಾಧೀನ ಕೈದಿಗಳ ಕೈಯಲ್ಲಿ ನಿಷೇಧಿತ ವಸ್ತುಗಳು ಸಿಗದಂತೆ ಎಚ್ಚರಿಕೆ ವಹಿಸುವ ಜೊತೆಗೆ ಕೈದಿಗಳಲ್ಲಿನ ಮನಪರಿವರ್ತನೆ ಮೂಲಕ ಇಲ್ಲಿನ ಜೈಲಿನ ಸಿಬ್ಬಂದಿ ಮಾದರಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ವರ್ಷದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವಕ್ಕೆ ವಿಚಾರಣಾಧೀನ ಕೈದಿಗಳು ತಮ್ಮ ಒಪ್ಪೊತ್ತಿನ ಉಪಾಹಾರ ತ್ಯಜಿಸಿ ಆ ಆಹಾರ ಪದಾರ್ಥವನ್ನು ಮಠಕ್ಕೆ ಅರ್ಪಿಸಿದ್ದು ಮಾದರಿಯ ಕೆಲಸವಾಗಿತ್ತು. ಇದು ಅನೇಕರ ಮೆಚ್ಚುಗೆಗೂ ಕಾರಣವಾಗಿತ್ತು.

ಜೊತೆಗೆ ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಬಂದಿಗಳಿಗೆ ಮೇಣದ ಬತ್ತಿ ತಯಾರಿಕೆ, ಪೇಪರ್ ಪಾಕೆಟ್ ತಯಾರಿಕೆ, ಅಗರಬತ್ತಿ ತಯಾರಿಕೆಯ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಕಾರಾಗೃಹದಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ಇರಿಸಲಾಗಿದ್ದು ಕಾರಾಗೃಹದ ಸಿಬ್ಬಂದಿ ಬಟ್ಟೆಯನ್ನು ಹೊಲಿಸಿ ಅದರಿಂದ ಬರುವ ಆದಾಯವನ್ನು ಕಾರಾಗೃಹ ಅಭಿವೃದ್ಧಿ ಮಂಡಳಿಗೆ ಜಮೆ ಮಾಡುವ ಯೋಜನೆ ರೂಪಿಸಲಾಗಿದೆ. ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕಾರಾಗೃಹದಲ್ಲಿ ನರ್ಸರಿ ಆರಂಭಿಸಿ ಸಸಿಗಳನ್ನು ಮಾರಾಟ ಮಾಡುವ ಯೋಜನೆ, ವಿಚಾರಣಾಧೀನ ಬಂದಿಗಳಿಗೆ ಭಾರತೀಯ ಅಂಚೆ ಇಲಾಖೆ, ಫೆಡರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳಿಗೆ ಸ್ವ ಉದ್ಯೋಗ ಮತ್ತು ಹಣಕಾಸಿನ ಶಿಸ್ತಿನ ಬಗ್ಗೆ ತರಬೇತಿ ಕೊಡಿಸಲಾಗಿದೆ.

ಬಂದಿಗಳ ಮನಸ್ಸು ನಿಗ್ರಹದಲ್ಲಿ ಇರಿಸಲು ಪ್ರತಿದಿನ ಯೋಗ, ಧ್ಯಾನ, ಸಂಜೆ ಚಿಂತನ–ಮಂಥನ, ಅಧ್ಯಾತ್ಮ ಚಿಂತನ, ಹಾಸ್ಯೋತ್ಸವ, ದೃಶ್ಯೋತ್ಸವ, ಸಂಗೀತೋತ್ಸವ, ಕ್ರೀಡೋತ್ಸವ, ಸ್ವಚ್ಛತಾ ಕೆಲಸ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಂದಿಗಳಿಗೆ ಅಕ್ಷರಭ್ಯಾಸ.. ಹೀಗೆ ಬಂದಿಗಳ ಬದುಕಿನಲ್ಲಿ ಬದಲಾವಣೆ ಚೈತನ್ಯ ಮೂಡಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ವಾರಪೂರ್ತಿ ವೇಳಾಪಟ್ಟಿ ರೂಪಿಸಿದ್ದು, ಆ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯಮಟ್ಟದ ಪ್ರಶಸ್ತಿಯ ಗರಿಮೆ ಲಭಿಸಿದೆ.

ಕಾರಾಗೃಹದಲ್ಲಿ ನಡೆಸಿದ ಚಟುವಟಿಕೆಗಳು ಮತ್ತು ಮನಪರಿವರ್ತನೆಗೆ ಮಾಡಿದ ಕೆಲಸವನ್ನು ಇಲಾಖೆ ಮೆಚ್ಚಿಕೊಂಡಿದ್ದು, ಪ್ರಶಸ್ತಿ ಲಭಿಸಿದೆ. ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ
ಅಂಬರೀಷ್ ಎಸ್. ಪೂಜಾರಿ ಜಿಲ್ಲಾ ಕಾರಾಗೃಹದ ಅಧೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.