ಕೊಪ್ಪಳ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ತಾಲ್ಲೂಕು ಕಾರ್ಯಕರ್ತರ ಸಭೆ ನಗರದಲ್ಲಿ ಗುರುವಾರ ನಡೆಯಿತು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ರಾಜ್ಯ ಮತ್ತು ದೇಶದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷದಿಂದಾಗಿ ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಯುವಕರು ದೇಶದ ಆಸ್ತಿಯೆಂದು ಹೇಳುತ್ತಾರೆ, ಅವರ ಮೇಲೆ ಇಂದು ಮನೆ, ಸಾಮಾಜಿಕ ಜವಾಬ್ದಾರಿ ಹಾಗೂ ದೇಶದ ಕುರಿತು ಚಿಂತನೆ ಮಾಡುವ ಜವಾಬ್ದಾರಿಯಿದೆ’ ಎಂದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ ಮಾತನಾಡಿ, ‘ನಮ್ಮ ಜಿಲ್ಲೆಯಲ್ಲಿ ಇರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಸರೋಜಿನಿ ಮಹಿಷಿ ವರದಿ ಪ್ರಕಾರ ಆದ್ಯತೆ ಕೊಟ್ಟು ಕೆಲಸ ಕೊಡಬೇಕು. ಅದು ಬಿಟ್ಟು ಉತ್ತರ ಪ್ರದೇಶ, ಒಡಿಶಾ, ಛತ್ತೀಸಗಡ ಹೀಗೆ ಹೊರ ರಾಜ್ಯಗಳ ಜನರಿಗೆ ಉದ್ಯೋಗ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹5 ಸಾವಿರ ಕೋಟಿ ಬರುತ್ತಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ’ ಎಂದು ಹೇಳಿದರು. ಪ್ರಮುಖರಾದ ವಿರೇಶ ಹಿರೇಮಠ, ಲಕ್ಷ್ಮಣ ಇದ್ದರು.

ಸಮಿತಿ ರಚನೆ: ನೂತನ ತಾಲ್ಲೂಕು ಸಮಿತಿ ಸಭೆ ಆಯ್ಕೆ ಮಾಡಲಾಯಿತು ಸಂಚಾಲಕರಾಗಿ ಬಸವರಾಜ ಗರ್ಜಿನಾಳ, ಸಹ ಸಂಚಾಲಕರಾಗಿ ಗವಿಸಿದ್ದಮ್ಮ, ಅಣ್ಣಪ್ಪ ಸಮಿತಿ ಸದಸ್ಯರಾಗಿ ಯಮನೂರ ಚಳ್ಳಾರಿ, ಅಮರೇಶ ಗುರಿಕಾರ, ಶರಣಪ್ಪ ಎಮ್ಮಿ, ಖಾಜಸಾಬ, ಬಸವರಾಜ, ಗೌಸ್ ಸೈಯಾದ್, ಶಬ್ಬಿರ್, ಇಲಿಯಾಸ್ ಸರ್ದಾರ್, ಶಿವಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-35-582465813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.