ಕೊಪ್ಪಳ: ಜಿಲ್ಲಾ ಕೇಂದ್ರದ ಸುತ್ತಲೂ ಪರಿಸರಕ್ಕೆ ಮಾಲಿನ್ಯಕ್ಕೆ ಕಾರಣವಾಗಿರುವ ಹಾಗೂ ಹೊಸದಾಗಿ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳ ನಡೆ ವಿರೋಧಿಸಿ, ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ಪ್ರಮುಖರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸಂಕಷ್ಟದಲ್ಲಿರುವ ಜನರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಅಲ್ಟ್ರಾಟೆಕ್ ಸಿಮೆಂಟ್, ಎಕ್ಸ್ಇಂಡಿಯಾ, ಭದ್ರಶ್ರೀ ಸ್ಟೀಲ್ ಸೇರಿದಂತೆ ವಿವಿಧ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಕೊಪ್ಪಳದಲ್ಲಿ 144 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರದ ಗಮನ ಸೆಳೆಯಲು ಸೋಮವಾರದ ಹೋರಾಟ ವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು.

₹54 ಸಾವಿರ ಕೋಟಿ ವೆಚ್ಚದಲ್ಲಿ ಬಲ್ಡೋಟ ವಿಸ್ತರಣೆ ಆಗುತ್ತಿದ್ದು, ಸರ್ಕಾರ ರದ್ದುಗೊಳಿಸಬೇಕು. ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಅಲ್ಲಾನಗರ, ಕಾಸನಕಂಡಿ, ಚಿಕ್ಕಬಗ ನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ, ಬಸಾಪುರ, ಬೇವಿನಹಳ್ಳಿ, ಹುಲಿಗಿ ಸೇರಿ 20 ಗ್ರಾಮಗಳ ಜನರ ಜೀವಕ್ಕೆ ಕಂಟಕವಾದ ವಿಷಾನಿಲ ಹೊರಸೂಸುವ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ತಂಡದ ವರದಿಯ ಶಿಫಾರಸಿನಂತೆ ಕಾರ್ಖಾನೆಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಜಾಗತೀಕರಣದ ಬಳಿಕ ಮಾಲಿನ್ಯ ದೇಶದ ಸಮಸ್ಯೆ ಯಾಗಿದೆ. ಆದರೆ, ಕೊಪ್ಪಳ ಜನ ಜೀವ ಉಳಿಸಿ ಬೆಳೆಸುವ ಬೇಡಿಕೆಗಾಗಿ ಹೋರಾಡುವುದು ವಿಶಿಷ್ಟವಾಗಿದೆ. ದೈತ್ಯ ಬಂಡವಾಳ ಹೂಡಿಕೆ ಮಾಡಿದಾಗ ನಾವು ಮರ ಉಳಿಸಿ ಎಂದು ಕೇಳುವುದು ತಪ್ಪಿ ಜೀವ ಉಳಿಸಿ ಎಂದು ಹೋರಾಟ ನಡೆಸುವುದು ವಿಪರ್ಯಾಸ’ ಎಂದರು.

ಮಾಜಿ ಸಂಸದ ಕೊಪ್ಪಳದ ಸಂಗಣ್ಣ ಕರಡಿ ಧರಣಿ ಬೆಂಬಲಿಸಿ ₹1 ಲಕ್ಷ ದೇಣಿಗೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸ್ಥಳಕ್ಕೆ ಭೇಟಿ ನೀಡಿದರು.

ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್, ‘ಆರೋಗ್ಯಕ್ಕೆ ಸಂಬಂಧಿಸಿದ ಸಚಿವನಾಗಿ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಸರ್ಕಾರ ನಿಮ್ಮ ಕಷ್ಟಕ್ಕೆ ನಿಲ್ಲುತ್ತದೆ’ ಎಂದು ಭರವಸೆ ನೀಡಿದರು.

ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಬಡಗಲಪುರ ನಾಗೇಂದ್ರ, ಎಚ್.ಆರ್. ಬಸವರಾಜಪ್ಪ, ಸೂರ್ಯಕಾಂತ ಗುಣಕಿಮಠ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ವೀರೇಶ ಮಹಾಂತಯ್ಮನಮಠ, ರಾಜು ಬಾಕಳೆ, ಸರೋಜಾ ಬಾಕಳೆ, ಸಾಹಿತಿ ಸಾವಿತ್ರಿ ಮುಜಮದಾರ, ಡಾ.ಮಂಜುನಾಥ ಸಜ್ಜನ್, ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಮಾಲಾ ಬಡಿಗೇರ, ಮಂಜುನಾಥ ಅಂಗಡಿ, ಶರಣಪ್ಪ ಸಜ್ಜನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-35-508919298

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.