ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ಧರಣಿ ಶುಕ್ರವಾರ 204 ದಿನಗಳನ್ನು ಪೂರ್ಣಗೊಳಿಸಿತು.

ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಕೋರಿದ ಕಾನೂನು ಅಭಿಪ್ರಾಯ ಶೀಘ್ರವಾಗಿ ಒದಗಿಸಿಕೊಡಲು ತೀರ್ಮಾನಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಇದರ ಜವಾಬ್ದಾರಿ ಹೊತ್ತುಕೊಂಡರು.

‘ಬಸಾಪುರ ಕೆರೆ ಬಲ್ಡೋಟ ಕಾರ್ಖಾನೆಗೆ 2007ರಲ್ಲಿ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿದ 1034 ಎಕರೆಗೆ ಮತ್ತು ಬಸಾಪುರ ಸರ್ವೆ ಸಂಖ್ಯೆ 143ರ 44.35 ಎಕರೆ ಕೆರೆ 2007ರಲ್ಲಿ ಇದು ಕೇವಲ ಭೂ ಮಂಜೂರಾತಿ ಮೂಲಕ ಜಿಲ್ಲಾಧಿಕಾರಿ ಮಾಡಿದ ಆದೇಶವಷ್ಟೇ ಆಗಿದೆ. ಕೆರೆ ಮಂಜೂರು ಮತ್ತು ಕೆಐಎಡಿಬಿ ಭೂಸ್ವಾಧೀನ ಇವೆರಡೂ ಬೇರೆ ಬೇರೆಯಾಗಿವೆ. ಸುಪ್ರೀಂ ಕೋರ್ಟ್ನಲ್ಲಿ ಕೆರೆ ಪ್ರಸ್ತಾವ ಇಲ್ಲ. ಆದ್ದರಿಂದ ಕೋರ್ಟ್ ಆದೇಶ ಅನ್ವಯ ಆಗುವುದಲ್ಲವೆಂದು ನಾವು ವಾದಿಸುತ್ತಲೇ ಬಂದಿದ್ದೇವೆ. ಈ ಹೇಳಿಕೆಗೆ ನಾವು ಬದ್ಧರಿದ್ದೇವೆ’ ಎಂದು ವೇದಿಕೆ ಪ್ರಮುಖರು ಹೇಳಿದ್ದಾರೆ.

ಧರಣಿಯಲ್ಲಿ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಬಸವರಾಜ ಪೂಜಾರ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಪ್ರಕಾಶಕಿ ಮಾಲಾ ಬಡಿಗೇರ, ಗಂಗಮ್ಮ ಕುರುಗೋಡು, ರಂಗಕರ್ಮಿ ಲಕ್ಷಣ ಪೀರಗಾರ, ಮೂಕಪ್ಪ ಮೇಸ್ತ್ರೀ ಬಸಾಪುರ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-35-1712872637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.