ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳದಿಂದ ಕುಣಿಕೇರಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಐಎಲ್.ಸಿ. ಕಾರ್ಖಾನೆಯವರು ರಸ್ತೆಗಾಗಿ ಭೂಮಿ ಅತಿಕ್ರಮಣ ಮಾಡಿ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿ ಸ್ಥಳೀಯ ರೈತ ರಾಮಪ್ಪ ಮುಕ್ಕುಂಪಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು.

ಈ ಮಾರ್ಗದಲ್ಲಿ ಎಲ್ಲೆಂದರಲ್ಲಿ ರಸ್ತೆಯಲ್ಲಿ ಗುಂಡಿಗಳಾಗಿದ್ದು, ಅವುಗಳನ್ನು ಮುಚ್ಚಲು ಗಟ್ಟಿಯಾಗಿಲ್ಲದ, ವಿಪರೀತ ದೂಳು ಬರುವ ಕಪ್ಪು ಮಣ್ಣು ಹಾಗೂ ಕಲ್ಲುಗಳನ್ನು ರಾಮಪ್ಪ ಹೊಲದ ಸಮೀಪದಲ್ಲಿಯೇ ಹಾಕಲಾಗಿತ್ತು. ಈ ಮಣ್ಣಿನ ಗುಂಪಿನ ಮೇಲೆ ಬುಧವಾರ ರೈತರ ಹೋರಾಟದ ಸಂಕೇತವಾಗಿ ಹಸಿರು ಧ್ವಜ ನೆಟ್ಟು ರಾಮಪ್ಪ ಪ್ರತಿಭಟನೆ ನಡೆಸುತ್ತಿದ್ದರು.

‘ಕಾರ್ಖಾನೆಯವರು ಕಳೆದುಕೊಂಡ ನನ್ನ ಭೂಮಿಗೆ ಪೂರ್ಣ ಪರಿಹಾರ ಕೊಟ್ಟಿಲ್ಲ. ಕೇಳಲು ಹೋದರೆ ದೌರ್ಜನ್ಯ ಮಾಡುತ್ತಾರೆ’ ಎಂದು ಆರೋಪಿಸಿದರು. ಇದರಿಂದಾಗಿ ಕಾರ್ಖಾನೆಗೆ ತೆರಳಬೇಕಾದ ಸರಕು ಲಾರಿಗಳು ರಸ್ತೆಯಲ್ಲಿಯೇ ನಿಂತುಕೊಂಡಿದ್ದವರು. ಸ್ಥಳಕ್ಕೆ ಬಂದ ಮುನಿರಾಬಾದ್ ಠಾಣೆಯ ಪಿಎಸ್ಐ ಸುನಿಲ್ ’ಈ ವಿಷಯ ನನ್ನ ಗಮನಕ್ಕೆ ತಂದಿದ್ದರೆ ಸಮಸ್ಯೆ ಪರಿಹರಿಸುತ್ತಿದ್ದೆ. ನೇರವಾಗಿ ಪ್ರತಿಭಟನೆಗೆ ಕುಳಿತರೆ ಹೇಗೆ’ ಎಂದು ಪ್ರಶ್ನಿಸಿದರು. ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ ವಾಹನಗಳ ಸಂಚಾರಕ್ಕೆ ಪಿಐ ಅನುಕೂಲ ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.