ನಾರಾಯಣರಾವ ಕುಲಕರ್ಣಿ

ಕುಷ್ಟಗಿ: ಪಟ್ಟಣದವರೆಗೆ ಪೂರ್ಣಗೊಂಡಿರುವ ಗದಗ-ವಾಡಿ ನೂತನ ರೈಲು ಮಾರ್ಗದಲ್ಲಿ ರೈಲು ಸಂಚಾರ ಕಾರ್ಯಾರಂಭಗೊಂಡು ವರ್ಷವಾಗುತ್ತ ಬಂದಿದೆ. ಆದರೆ ಬೆಂಗಳೂರುವರೆಗೆ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಕಂಡುಬಂದಿದೆ.

ಕಳೆದ ವರ್ಷದ ಮೇ ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪಟ್ಟಣದಿಂದ ಹುಬ್ಬಳ್ಳಿವರೆಗಿನ ಮೊದಲ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ನೂರಾರು ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮಾರ್ಗದಲ್ಲಿ ಕೇವಲ ಒಂದು ರೈಲು ಮಾತ್ರ ಓಡುತ್ತಿದ್ದು ಜನರಿಗೆ ನೂತನ ಮಾರ್ಗದಿಂದ ಹೆಚ್ಚಿನ ಪ್ರಯೋಜನ ದೊರೆತಿಲ್ಲ. ಕುಷ್ಟಗಿಯಿಂದ ಬೆಂಗಳೂರಿಗೆ ಸದ್ಯ ನಿತ್ಯ ನೂರಾರು ಪ್ರಯಾಣಿಕರು ಬಸ್ಗಳನ್ನೇ ಅವಲಂಬಿಸಿದ್ದು ದುಬಾರಿ ದರ ಕೊಡುತ್ತಿದ್ದಾರೆ.

ಹಾಗಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಿದರೆ ಯಲಬುರ್ಗಾ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಪ್ರಯಾಣಿಕರಿಗೆ, ವ್ಯಾಪಾರ ವಹಿವಾಟು ವೃದ್ಧಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂಬದು ಇಲ್ಲಿಯ ಜನರ ಬೇಡಿಕೆಯಾಗಿದೆ.

ರೈಲ್ವೆ ಸಂಪರ್ಕ ಬೇಡಿಕೆಗೆ ಸಂಬಂಧಿಸಿದ ಹೋರಾಟ ಸಮಿತಿ ಅಧ್ಯಕ್ಷ, ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಸಮಿತಿಯ ಪ್ರಮುಖರು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಹೋದಲ್ಲೆಲ್ಲ ಭೇಟಿ ಮಾಡಿ ಎಂಟು ಹತ್ತು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಬೇಡಿಕೆಗೆ ಮಾತ್ರ ಸೋಮಣ್ಣ ಸ್ಪಂದಿಸುತ್ತಿಲ್ಲ 'ಮಾಡೋಣ ನೋಡೋಣ' ಎಂಬಂತೆ ಬರೀ ಹಾರಿಕೆ ಉತ್ತರಗಳೇ ಬಂದಿವೆ ಎಂಬ ಬೇಸರ ಸಮಿತಿಯದ್ದಾಗಿದೆ.

ರಾಜ್ಯದ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಬಾಗಲಕೋಟೆ ಮತ್ತು ಕೊಪ್ಪಳ ಸಂಸದರೂ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ, ಎಲ್ಲದಕ್ಕೂ ಕೇಂದ್ರ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಶುಕ್ರವಾರ ಬಾಗಲಕೋಟೆಗೆ ತೆರಳಿದ್ದ ರೈಲ್ವೆ ಯೋಜನೆಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮತ್ತು ಪ್ರತಿನಿಧಿಗಳು ಸೋಮಣ್ಣ ಅವರನ್ನು ಭೇಟಿ ಮಾಡಿ ಪುನಃ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಕುಷ್ಟಗಿ ಬೆಂಗಳೂರು ರೈಲು ಸಂಚಾರದ ಬೇಡಿಕೆಗೆ ಆದ್ಯತೆಯ ಅನುಸಾರ ಕ್ರಮ ಕೈಗೊಳ್ಳುತ್ತೇನೆ' ಎಂದಷ್ಟೇ ಹೇಳಿ ಸಾಗಹಾಕಿದ್ದು ಸಮಿತಿ ಪ್ರತಿನಿಧಿಗಳ ನಿರಾಶೆಗೆ ಕಾರಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-35-998408101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.