ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾ.ಪಂ. ವ್ಯಾಪ್ತಿಯ ನಿರಾಶ್ರಿತರಿಗೆ ರಾಜೀವ್ ಗಾಂಧಿ ಆಶ್ರಯ ಮನೆ ಯೋಜನೆಯಡಿ ಮಂಜೂರಾದ 21 ಮನೆಗಳು, 2016ರಲ್ಲಿ ಸೂರು ಕಳೆದುಕೊಂಡ ವಿರೂಪಾಪುರಗಡ್ಡಿ ಗ್ರಾಮಸ್ಥರಿಗೆ ಬಿಟ್ಟು, ಸಾಣಾಪುರ ಗ್ರಾಮಸ್ಥರಿಗೆ ಮಂಜೂರು ಮಾಡಿರುವುದನ್ನು ಖಂಡಿಸಿ, ಈಚೆಗೆ ವಿರೂಪಾಪುರಗಡ್ಡಿ ಗ್ರಾಮಸ್ಥರು ಗ್ರಾ.ಪಂ ಪಿಡಿಒ ವತ್ಸಲಾ ಅವರಿಗೆ ಮನವಿ ಸಲ್ಲಿಸಿದರು.

ವಿರೂಪಾಪುರಗಡ್ಡೆ ಗ್ರಾಮದ ನಿವಾಸಿ ಮಂಜುನಾಥ ಮಾತನಾಡಿ, ‘ಸಾಣಾಪುರ ಗ್ರಾ.ಪಂ ವ್ಯಾಪ್ತಿಗೆ ಬರುವ ವಿರುಪಾಪುರಗಡ್ಡಿ ಗ್ರಾಮದ ಸರ್ವೆ ನಂ.49ರ ಅರಣ್ಯ ಭೂಮಿಯಲ್ಲಿ ಸಣ್ಣ-ಪುಟ್ಟ ಮನೆ, ಗುಡಿಸಲು ನಿರ್ಮಿಸಿಕೊಂಡು ಹಲವು ಕುಟುಂಬಗಳು ಜೀವನ ನಡೆಸುತ್ತಿದ್ದವು. ಈ ಭೂಮಿಯಲ್ಲಿ ದಾಖಲೆಗಳಿಲ್ಲದೆ ಮನೆಗಳನ್ನು ನಿರ್ಮಿಸಿದ್ದಕ್ಕೆ ಹಂಪಿ ಪ್ರಾಧಿಕಾರ, ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, 72 ಮನೆಗಳನ್ನು ತೆರವುಗೊಳಿಸಲಾಯಿತು.

ಬೀದಿಗೆ ಬಿದ್ದ 72 ಕುಟುಂಬಗಳ ನ್ಯಾಯಕ್ಕಾಗಿ ತಾಲ್ಲೂಕು ಆಡಳಿತದ ಮೊರೆ ಹೋದಾಗ ಸೂರು ಕಳೆದುಕೊಂಡ ನಿರಾಶ್ರಿತರಿಗೆ ನಿವೇಶನ ಒದಗಿಸುವ ಭರವಸೆ ನೀಡಿ, ಈವರೆಗೆ ಸೂರು ಕಲ್ಪಿಸಿಕೊಟ್ಟಿರುವುದಿಲ್ಲ. ಸೂರು ಕಳೆದುಕೊಂಡ ವಿರೂಪಾಪುರಗಡ್ಡೆ ನಿವಾಸಿಗಳು, ಅಲ್ಲೆ ಸಮೀಪದ ಬಿಂಚುಕುಟ್ರಿ ಬೆಟ್ಟದಲ್ಲಿ ತಾತ್ಕಾಲಿಕ ಗುಡಿಸಲು ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಸಾಣಾಪುರ, ತಿರುಮಲಾಪುರ, ಕರಿಯಮ್ಮನಗಡ್ಡಿ ಗ್ರಾಮದ ಬಾಡಿಗೆ ಮನೆಗಳಲ್ಲಿ ನಿವಾಸ ಮಾಡುತ್ತಿದ್ದಾರೆ. ಸಾಣಾಪುರ ಗ್ರಾ.ಪಂಗೆ ರಾಜೀವ್ ಗಾಂಧಿ ಆಶ್ರಯ ಮನೆ ಯೋಜನೆಯಡಿ 21 ಮನೆಗಳು ನಿರಾಶ್ರಿತರಿಗೆ ಮಂಜೂರಾಗಿದ್ದು, ಸೂರು ಕಳೆದುಕೊಂಡ ವಿರೂಪಾಪುರಗಡ್ಡಿ ಗ್ರಾಮಸ್ಥರಿಗೆ ಬಿಟ್ಟು, ಬೇರೆ ಊರಿನಿಂದ ಬಂದು ಸಾಣಾಪುರ ಗ್ರಾಮದಲ್ಲಿ ನೆಲೆಸಿದ, ಬಾಡಿಗೆ ಮನೆಯವರಿಗೆ ಮಂಜೂರಾಗುತ್ತಿವೆ. ಕೂಡಲೇ ಆಯ್ಕೆ ಪ್ರಕ್ರಿಯೆ ನಿಲ್ಲಿಸಬೇಕು. ವಿರೂಪಾಪುರಗಡ್ಡೆ ಗ್ರಾಮಸ್ಥರಿಗೆ ನ್ಯಾಯ ಸಿಗುವವರೆಗೆ ನಿವೇಶನಗಳನ್ನು ಹಂಚುವಂತಿಲ್ಲ. ಒಂದು ವೇಳೆ ಹಂಚಿಕೆಯಾದರೆ, ಗ್ರಾ.ಪಂ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು. ಕನಕಪ್ಪ, ನಾಗಮಣಿ, ಅನುಷಾ, ಹನುಮವ್ವ, ದುರ್ಗಮ್ಮ, ಶಾರದ, ಶಂಕ್ರಮ್ಮ,ಲಕ್ಷ್ಮಿ, ಹನುಮವ್ವ, ಪರಶುರಾಮ, ರೇಣುಕಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-35-1697508559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.