ಗಂಗಾವತಿ: ‘ತಾಲ್ಲೂಕಿನ ವೆಂಕಟಗಿರಿ ಗ್ರಾಮದ ವ್ಯಾಪ್ತಿಯ ಇಟ್ಟಿಗೆ ಭಟ್ಟಿಗಳಿಗೆ ಕೊಪ್ಪಳದಿಂದ ಅಕ್ರಮವಾಗಿ ಫಲವತ್ತಾದ ಮಣ್ಣು ಸಾಗಾಣಿಕೆ ಮಾಡುತ್ತಿದ್ದು, ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಅವರ ಕಾರ್ಯವೈಖರಿ ಗಮನಿಸಿದರೆ, ಇಟ್ಟಿಗೆ ಭಟ್ಟಿಯವರೊಂದಿಗೆ ಅವರೂ ಶಾಮೀಲಾದಂತೆ ಕಂಡು ಬರುತ್ತಿದೆ’ ಎಂದು ಭೀಮ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷ ಅಜಯಕುಮಾರ ಚಲುವಾದಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ‘ಹಲವು ದಿನಗಳಿಂದ ವೆಂಕಟಗಿರಿ ಸಮೀಪದ ಇಟ್ಟಿಗೆ ಭಟ್ಟಿಗಳಿಗೆ ಕೆಲವರು ಕೊಪ್ಪಳದ ತುಂಗಭದ್ರಾ ಜಲಾಶಯದ ಹಿನ್ನಿರಿನ ಭಾಗದಿಂದ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತ್ತಿದ್ದಾರೆ. ನಿತ್ಯ ರಾತ್ರಿ ಟಿಪ್ಪರ್ಗಳು ವೆಂಕಟಗಿರಿ ಭಾಗಕ್ಕೆ ಮಣ್ಣು ಸಾಗಾಣಿಕೆ ಮಾಡಿವೆ. ನದಿಯ ಫಲವತ್ತಾದ ಮಣ್ಣನ್ನು ರೈತರ ಜಮೀನುಗಳಿಗೆ ಹಾಕಬೇಕು, ಅದು ನ್ಯಾಯ. ಆದರೆ ಕೆಲ ಪ್ರಭಾವಿಗಳು ಹಣ ಮಾಡಲು ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಕ್ರಮವಾಗಿ ಮಣ್ಣು ಸಾಗಾಣಿಕೆ ದಂಧೆ ಹಲವು ದಿನಗಳಿಂದ ನಡೆಯುತ್ತಿದೆ. ಮಾರ್ಚ್ 4ರಂದು ಸಂಘಟನೆ ಸದಸ್ಯರು ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವ ಲಾರಿ ಬಗ್ಗೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದನ್ನು ಗಮನಿಸಿದ ಲಾರಿ ಮಾಲೀಕರು ಸಂಘಟನೆ ಸದಸ್ಯರು ಹಣದ ಆಮೀಷ ಒಡ್ಡಿದ್ದಾರೆ. ಆದರೆ ಸಂಘಟನೆ ಸದಸ್ಯರು ಹಣಕ್ಕೆ ಮಣಿಯದೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಂಗಾವತಿ ಡಿವೈಎಸ್ಪಿ ಅವರು ಟಿಪ್ಪರ್ ಹಿಡಿಯಲು ನಿಮಗೆ ಯಾವ ಅಧಿಕಾರವಿದೆ ಎಂದು ಸದಸ್ಯರಿಗೆ ಧಮ್ಕಿಹಾಕಿ, ಕಳ್ಳತನ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಕೂಡಲೇ ಮೇಲಧಿಕಾರಿಗಳು ಅಕ್ರಮವಾಗಿ ಮಣ್ಣು ಸಾಗಾಣಿಕೆ ತಡೆದು, ಸಂಘಟನೆ ಸದಸ್ಯರಿಗೆ ಬೆದರಿಕೆ ಹಾಕಿದ ಡಿವೈಎಸ್ಪಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು. ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಯಮನೂರ ಮರ್ದಾನ್ ಅಲಿ, ಉಮೇಶ ನಾಯಕ, ಶಿವಕುಮಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-35-2143471228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.