ಗಂಗಾವತಿ: ಇಲ್ಲಿನ ನಗರೇಶ್ವರ ದೇವಸ್ಥಾನದ ಸಮೀಪದ ನಿವಾಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಕಲಾವಿದ, ಖ್ಯಾತ ಶಿಲ್ಪಿ ವೆಂಕಣ್ಣ ಚಿತ್ರಗಾರ (76) ಶುಕ್ರವಾರ ಬೆಳಿಗ್ಗೆ ನಿಧನರಾದರು.

ಇವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಇವರು ಸಾಂಪ್ರದಾಯಿಕ ಕುಶಲ ಕಾರ್ಮಿಕರಾಗಿದ್ದು, 50 ವರ್ಷಕ್ಕೂ ಹೆಚ್ಚು ರಥದ ಗೊಂಬೆ, ಶಿಲ್ಪ, ಪಲ್ಲಕ್ಕಿ, ಗಣೇಶ ಮಳ ಕೆತ್ತನೆ ಮಾಡಿದ್ದಾರೆ. ಇವರು 80ಕ್ಕೂ ಹೆಚ್ಚು ರಥಗಳನ್ನು ನಿರ್ಮಾಣ ಮಾಡಿದ್ದಾರೆ. ಕೆತ್ತನೆ ಮಾಡಿದ ರಥಗಳು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಗೆ ಸರಬರಾಜು ಆಗಿವೆ. ಇವರು ಅಪರೂಪದ ಸಂಪ್ರದಾಯಿಕ ರಥ ಕೆತ್ತನೆ ಶಿಲ್ಪಿ ಆಗಿದ್ದಾರೆ.

ಇವರ ಸಾಧನೆ ಗುರುತಿಸಿ, 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಿದೆ.ಇವರ ಅಂತ್ಯಕ್ರಿಯೆ ಗಂಗಾವತಿ ನಗರದ ರುದ್ರಭೂಮಿಯ ಲ್ಲಿ ಶನಿವಾರ ಬೆಳಿಗ್ಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-35-820544804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.