ಮುನಿರಾಬಾದ್: ಕೊಪ್ಪಳ ತಾಲ್ಲೂಕಿನ ದೊಡ್ಡ ಗ್ರಾ.ಪಂ ಕೇಂದ್ರ ಹೊಸಹಳ್ಳಿ ಗ್ರಾಮದಲ್ಲಿ ಸಾರಿಗೆ ಬಸ್ಗಳು ನಿಲ್ಲುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 50 ಗ್ರಾಮದ ಮಧ್ಯೆ ಹಾಯ್ದು ಹೋಗಿದ್ದರೂ ಸಾರ್ವಜನಿಕರ, ವಿದ್ಯಾರ್ಥಿಗಳ ಮತ್ತು ಕೈಗಾರಿಕಾ ಕಾರ್ಮಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನೂರಾರು ಬಸ್ಗಳು ಸಂಚರಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಮೂರು ವರ್ಷಗಳ ಹಿಂದೆ ಹೆದ್ದಾರಿ ತಡೆದು ಪ್ರತಿಭಟಿಸಲಾಗಿತ್ತು. ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಕೇಂದ್ರ ಕಚೇರಿಯಿಂದ ಸೂಚನೆ ನೀಡಿ, ಗ್ರಾಮಕ್ಕೆ ಸ್ಟೇಜ್(ಹಂತ) ಸೃಷ್ಟಿಸಿ, ಎಲ್ಲಾ ಬಸ್ಗಳನ್ನು ನಿಲುಗಡೆ ಮಾಡುವಂತೆ ನಿರ್ದೇಶನ ನೀಡಲಾಗಿತ್ತು.

ಹೆದ್ದಾರಿ ವಿಸ್ತರಣೆಯ ಪೂರ್ವದಲ್ಲಿ ‘ಹೊಸಹಳ್ಳಿಕ್ರಾಸ್’ ಸ್ಟೇಜ್ ಅಸ್ತಿತ್ವದಲ್ಲಿತ್ತು. ಹೆದ್ದಾರಿ ವಿಸ್ತರಣೆಯ ನಂತರ ಹೊಸಹಳ್ಳಿ ಗ್ರಾಮಕ್ಕೆ ಸ್ಟೇಜ್ ಸೃಷ್ಟಿಸಿ, ಬಸ್ ನಿಲುಗಡೆಗೊಳಿಸಬೇಕು ಎಂದು ಕೊಪ್ಪಳ, ಬಳ್ಳಾರಿ, ಹೊಸಪೇಟೆ ಗದಗ ಮತ್ತು ವಿಜಯಪುರ ಘಟಕಗಳ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ನಿರ್ದೇಶನವಿದ್ದರೂ, ಬಸ್ಗಳು ನಿಲುಗಡೆಯಾಗುತ್ತಿಲ್ಲ. ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವಿದ್ದರೂ, ಕೆಲವು ಬಾರಿ ಮಹಿಳೆಯರು ದುಬಾರಿ ಬೆಲೆ ತೆತ್ತು ಆಟೊ ಟಾಟಾಏಸ್, ಟಂಟಂ ವಾಹನದಲ್ಲಿ ಪ್ರಯಾಣಿಸುವ ಅನಿವಾರ್ಯ ಇದೆ.

ಸಂಬಂಧಪಟ್ಟವರು ತಕ್ಷಣ ಕ್ರಮವಹಿಸಿ, ಸಾರಿಗೆ ಸಂಸ್ಥೆಯ ಬಸ್ಗಳು ನಿಲ್ಲುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಗ್ರಾಮದ ಮುಖಂಡರಾದ ಈಶಪ್ಪ ಹೊರತಟ್ನಾಳ, ಮುತ್ಕೂರಪ್ಪ, ಶರೀಫ್ ಸಾಬ್ ದೊಡ್ಮನಿ, ಖಾಜಾ ಹುಸೇನ್ ದೊಡ್ಮನಿ, ನಾಗಪ್ಪ ಈಳಿಗೇರ, ಶೇಖರ ಕುಂಬಾರ, ಭೀಮಣ್ಣ ಬೇವೂರ ಇತರರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-35-667354516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.