ಮುನಿರಾಬಾದ್: ಸಮೀಪದ ಹುಲಿಗಿಯಲ್ಲಿ ಭಾರತೀಯ ಅಂಚೆ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾನುವಾರ ಗ್ರಾ.ಪಂ ಕಚೇರಿ ಹತ್ತಿರದ ಅಂಚೆ ಇಲಾಖೆಯ ನಿವೇಶನದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಸಂಸದ ರಾಜಶೇಖರ ಹಿಟ್ನಾಳ, ಭೂಮಿ ಪೂಜೆಯಲ್ಲಿ ಪಾಲ್ಗೊಂಡು, ಕಾಲಮಿತಿಯ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ನೀಡಬೇಕು ಎಂದು ಸೂಚಿಸಿದರು.

ಕೊಪ್ಪಳ ಪ್ರಧಾನ ಅಂಚೆ ಕಚೇರಿಯ ಸಹಾಯಕ ಅಂಚೆಪಾಲಕ ಜಿ.ಎನ್. ಹಳ್ಳಿ ಮಾತನಾಡಿ, ‘ಹುಲಿಗಿಯಲ್ಲಿ ಅಂಚೆ ಕಚೇರಿ ಆರಂಭವಾಗಿ ಸುಮಾರು 30-40 ವರ್ಷಗಳೇ ಕಳೆದಿದೆ. ಅಂದಿನಿಂದ ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಲಾಖೆಯ ಸ್ವಂತ ಕಟ್ಟಡ ಹೊಂದುವ ಭಾಗ್ಯ ಒದಗಿದೆ. ಸುಮಾರು ₹52.76 ಲಕ್ಷ ವೆಚ್ಚದಲ್ಲಿ ಅಂಚೆ ಇಲಾಖೆಯ ಸಿವಿಲ್ ಎಂಜಿನಿಯರ್ಗಳು ನಿರ್ಮಾಣ ಕಾರ್ಯ ಕೈಗೊಳ್ಳುತ್ತಾರೆ. ಸುಮಾರು 6 ತಿಂಗಳಲ್ಲಿ ಕಟ್ಟಡ ಸಾರ್ವಜನಿಕರ ಅಂಚೆ ಸೇವೆಗೆ ಸಿದ್ಧವಾಗಲಿದೆ. ಹುಲಿಗಿಯ ನಂತರ ತಳಕಲ್, ಮುನಿರಾಬಾದ್, ಹನುಮ ಸಾಗರ, ಕುಕನೂರು ಹಾಗೂ ಅಳವಂಡಿ ಗ್ರಾಮಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಆರಂಭವಾಗಲಿದೆ. ಅಂಚೆ ಬ್ಯಾಂಕ್, ಪಾಸ್ ಪೋರ್ಟ್ ಸೇವೆ ಸೇರಿ ವಿವಿಧ ಸಾರ್ವಜನಿಕ ಸೇವೆಗಳನ್ನು ಒದಗಿಸುತ್ತಿದೆ’ ಎಂದರು. ಅಂಚೆ ಇಲಾಖೆ ಇನ್ಸ್ಪೆಕ್ಟರ್ ವೆಂಕಟೇಶ ಹಾತಲಗೇರಿ, ಹುಲಿಗಿ ಅಂಚೆ ಕಚೇರಿ ಸಿಬ್ಬಂದಿ ಅಶೋಕ ಗೋಟೂರ, ಪ್ರದೀಪ ಪ್ರಮುಖರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-35-670343769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.