ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ಹಾಗೂ ಅವುಗಳ ವಿಸ್ತರಣೆಗೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಮಂಗಳವಾರ ಆರು ತಿಂಗಳು ಪೂರ್ಣಗೊಳಿಸಿತು.

ಸಾಹಿತಿ ಸಾವಿತ್ರಿ ಮುಜುಮದಾರ ಮಾತನಾಡಿ ‘ಉರಿಯುತ್ತಿರುವ ಬಿರುಬಿಸಿಲಿಗೆ ಜನ, ಜಾನುವಾರು ಬಸವಳಿದು ಹೋಗಿವೆ. ನದಿ, ಹಳ್ಳ, ಕೆರೆ, ಕಟ್ಟೆ ಇವೆಲ್ಲವುಗಳು ನಾಡಿನ ಸಂಪತ್ತು. ಸಾರ್ವಜನಿಕ, ಸಮುದಾಯದ ಆಸ್ತಿ. ಇವುಗಳ ಮೇಲೆ ಗ್ರಾಮೀಣ ಜನರ ಸಂಪೂರ್ಣವಾದ ಹಕ್ಕು ಇದೆ. ಬಸಾಪುರ ಕೆರೆ ಸಮುದಾಯದ ಆಸ್ತಿ. ಸಾವಿರಾರು ಜಾನುವಾರು, ಕುರಿ, ಮೇಕೆ ಬೇಸಿಗೆಯ ನೀರಿನ ದಾಹಕ್ಕೆ ಬಾಯಿತೆರೆದಾಗಲೂ ಕಾರ್ಖಾನೆಯವರು ಕಾಂಪೌಂಡ್ ಕಟ್ಟಿ ಕೆರೆಯನ್ನು ಕಬ್ಜಾದಲ್ಲಿ ಇಟ್ಟುಕೊಂಡು ಮಾನವೀಯತೆ ಮರೆತಿರುವುದನ್ನು ಖಂಡಿಸೋಣ’ ಎಂದರು.

ಸಾಮಾಜಿಕ ಹೋರಾಟಗಾರ್ತಿ ಸರೋಜಾ ಬಾಕಳೆ ಮಾತನಾಡಿ ‘ಜೀವ, ಆರೋಗ್ಯ ಉಳಿಸಿಕೊಳ್ಳುವ ಈ ಹೋರಾಟಕ್ಕೆ ಸರ್ವ ಜನರು ಬೆಂಬಲಕ್ಕೆ ಬರಬೇಕು’ ಎಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಮಂಜುನಾಥ ಸಜ್ಜನ್, ಮಹಿಳಾ ನಾಯಕಿ ಕಾವ್ಯಾ ಗಡಾದ, ರಾಜ್ಯ ರೈತ ಸಂಘದ ಮುಖಂಡ ಭೀಮಸೇನ ಕಲಕೇರಿ, ಶಿವಪ್ಪ ದೇವರಮನಿ ಬಗನಾಳ, ಮಹೇಶ ವದ್ನಾಳ ಬಗನಾಳ, ಗವಿಸಿದ್ದಪ್ಪ ಪುಟಗಿ ಬಗನಾಳ, ಜಗದೀಶ ಕುಂಬಾರ ಬಗನಾಳ, ಗಣೇಶ ವಿಶ್ವಕರ್ಮ, ಕೊಟ್ರಪ್ಪ ಪಲ್ಲೇದ ಬಗನಾಳ, ದೇವಪ್ಪ ಬಗನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ರವಿ ಕಾಂತನವರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-35-401148815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.