ಕೊಪ್ಪಳ: ಪರಿಸರ ಮಲಿನಗೊಳಿಸುತ್ತಿರುವ ಕಾರ್ಖಾನೆಗಳು ಹೊರಹೊಮ್ಮಿಸುತ್ತಿರುವ ಕಪ್ಪುಕಣಗಳ ದೂಳಿನಿಂದ ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದು, ಗುರುವಾರ ಆ ದೂಳನ್ನು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರಿಗೂ ತೋರಿಸಿದರು.

ಸ್ಪಾಂಜ್ ಹಾಗೂ ಐರನ್ ಕಾರ್ಖಾನೆಗಳಿಂದ ಮಾಲಿನ್ಯ ಹೆಚ್ಚಾಗಿರುವ ಬಗ್ಗೆ ಜನರಿಂದ ವ್ಯಾಪಕವಾಗಿ ದೂರುಗಳು ಬಂದಿದ್ದರಿಂದ ಜಿಲ್ಲಾಧಿಕಾರಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಹಿರೇಬಗನಾಳಕ್ಕೆ ಭೇಟಿ ನೀಡಿದರು. ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದಾಗ ವಿದ್ಯಾರ್ಥಿಗಳು ನಿತ್ಯ ತಾವು ಕುಳಿತುಕೊಳ್ಳುವ ಮೇಜಿನ ಮೇಲೆ ಅಂಟಿಕೊಳ್ಳುವ ಕಪ್ಪುಕಣಗಳ ದೂಳನ್ನು ತೋರಿಸಿದರು.

ಬಳಿಕ ಗ್ರಾಮಸ್ಥರ ಜೊತೆ ನಡೆದ ಮುಕ್ತ ಸಭೆಯಲ್ಲಿ ಮಾಲಿನ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜನರು, ‘ಕಾರ್ಖಾನೆಗಳನ್ನು ಬಂದ್ ಮಾಡಿಸಿ; ಇಲ್ಲವೇ ನಮ್ಮ ಗ್ರಾಮವನ್ನೇ ಸ್ಥಳಾಂತರಿಸಿ’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ಜಾರಿ ಮಾಡಲಾಗುವುದು. ಗ್ರಾಮಸ್ಥರ ನೋವಿಗೆ ಸ್ಪಂದಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.