ಕೊಪ್ಪಳ: ಒಂಬತ್ತು ತಿಂಗಳು ಹೊತ್ತು ಹೆತ್ತ ಬಳಿಕ ನವಜಾತ ಶಿಶುವನ್ನು ಎಲ್ಲೆಂದರಲ್ಲಿ ಬೀಸಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದು, ಈಗ ಪತ್ತೆಯಾದ ಮತ್ತೊಂದು ಇಂಥದ್ದೇ ಪ್ರಕರಣದಲ್ಲಿ ಶಿಶುವಿನ ಮೃತದೇಹದ ಅಂತಿಮ ಸಂಸ್ಕಾರ ಮಾಡಿ ಮಾನವೀಯತೆ ಮೆರೆದವರು ಕಾನೂನು ಮರೆತರೇ ಎನ್ನುವುದು ಚರ್ಚೆಗೆ ಕಾರಣವಾಗಿದೆ.

ತಾಲ್ಲೂಕಿನ ಮುನಿರಾ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಗ್ರಾಮದ ಡ್ಯಾಂ ಬಾಬು ಅವರ ಗದ್ದೆಯ ತುಂಗಭದ್ರಾ ಕಿರು ನಾಲೆಯ ಸಮೀಪದಲ್ಲಿ ಏ. 4ರಂದು ನವಜಾತ ಗಂಡು ಶಿಶು ನೀರಿನಲ್ಲಿ ಹರಿದುಕೊಂಡು ಬಂದಿತ್ತು. ಮೃತಪಟ್ಟಿದ್ದ ಶಿಶುವಿನ ಮೃತದೇಹ ನೋಡಿದವರು ಅದೇ ದಿನ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಅಂತಿಮ ಸಂಸ್ಕಾರ ಮಾಡಿದ್ದಾರೆ. ಆದರೆ ಗೊತ್ತಿಲ್ಲದ ಶಿಶು ಸಿಕ್ಕಾಗ ಅದರ ಬಗ್ಗೆ ಪೊಲೀಸರಿಗೆ ಅಥವಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕಾಗಿತ್ತು. ಹೀಗಾಗಿ ಗುರುತು ಮರೆ ಮಾಚುವ ಉದ್ದೇಶದಿಂದ ನವಜಾತ ಶಿಶುವನ್ನು ಬಿಟ್ಟವರು ಹಾಗೂ ಮಗುವಿನ ಅಂತಿಮ ಸಂಸ್ಕಾರ ಮಾಡಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ರಕ್ಷಣಾ ಘಟಕದ ಪ್ರಶಾಂತರೆಡ್ಡಿ ನೀಡಿದ ದೂರಿನ ಮೇರೆಗೆ ಮುನಿರಾಬಾದ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಾಗಿದೆ.

ಅನಾಥವಾಗಿ ಸಿಕ್ಕಿದ್ದ ಮೃತ ಶಿಶು ಪ್ರಾಣಿಪಕ್ಷಿಗಳ ಆಹಾರವಾಗಬಾರದು, ಬೀದಿನಾಯಿಗಳ ಕೈಗೆ ಸಿಗಬಾರದು ಎನ್ನುವ ಮಾನವೀಯತೆಯಿಂದ ಅಂತಿಮ ಸಂಸ್ಕಾರ ಮಾಡಿದರೇ? ಅಥವಾ ಹೆತ್ತವರೇ ಈ ಕೃತ್ಯ ಎಸಗಿದ್ದಾರೆಯೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ 2015ರಿಂದ 2025ರ ತನಕದ ಅವಧಿಯಲ್ಲಿ ಪೋಷಕರಿಗೆ ಬೇಡವಾದ 71 ಮಕ್ಕಳು ಸಿಕ್ಕಿದ್ದು, ಇದರಲ್ಲಿ ಕೆಲವರು ಹೆತ್ತವರೇ ತಮ್ಮ ಮಕ್ಕಳನ್ನು ಮಕ್ಕಳ ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇನ್ನೂ ಕೆಲವರು ಮಕ್ಕಳ ಸಮಿತಿಗೆ ನೀಡಿದ್ದಾರೆ. ಕಾನೂನುಬದ್ಧವಾಗಿಯೇ ಮಕ್ಕಳ ದಾಖಲಾತಿ ಮಾಡಿಕೊಂಡು ಅವರ ಲಾಲನೆ-ಪಾಲನೆ ಸರ್ಕಾರದ ವತಿಯಿಂದ ಮಾಡಲಾಗಿದೆ. ಆದರೆ ಹೆತ್ತವರಿಗೆ ಬೇಡವಾದ ಮಗು ಹೀಗೆ ಬೀದಿಪಾಲಾಗುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ. ಇದೇ ವರ್ಷದ ಜನವರಿಯಲ್ಲಿ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ನವಜಾತು ಹೆಣ್ಣು ಶಿಶು ಪತ್ತೆಯಾಗಿತ್ತು.

ಬಾಲ್ಯವಿವಾಹ ತಡೆಗೆ ಸೂಚನೆ

ಕೊಪ್ಪಳ: ಏಪ್ರಿಲ್ 20ರ ಅಕ್ಷಯ ತೃತೀಯ ದಿನದಂದು ಸಾಮೂಹಿಕ ಹಾಗೂ ವೈಯಕ್ತಿಕ ವಿವಾಹಗಳು ಹೆಚ್ಚಾಗಿ ಆಯೋಜನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಮಕ್ಕಳ ಮದುವೆ ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸಂಬಂಧಿಸಿದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ಸೂಚಿಸಿದ್ದಾರೆ.

ಮದುವೆಯ ಹೆಸರಿನಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಬಾಲ್ಯ ವಿವಾಹ ಮುಕ್ತ ನಗರವನ್ನಾಗಿಸಲು ಎಲ್ಲಾ ಹಂತಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅರಿವು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಆಯೋಜಿಸುವ ವಿವಾಹಗಳ ಬಗ್ಗೆ ಕಣ್ಗಾವಲು ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಮದುವೆಗೆ ಮುನ್ನಾದಿನ ಬಿತ್ತು ಬಾಲ್ಯವಿವಾಹಕ್ಕೆ ಕಡಿವಾಣ

ಕೊಪ್ಪಳ: ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲ್ಯವಿವಾಹಕ್ಕೆ ಸಿದ್ಧವಾಗಿದ್ದ ಬಾಲಕಿಯ ದಾಖಲೆಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದ್ದರಿಂದ ಮದುವೆಗೆ ಒಂದು ದಿನ ಮೊದಲು ಬಾಲ್ಯವಿವಾಹಕ್ಕೆ ಕಡಿವಾಣ ಬಿದ್ದಿದೆ.

ಆಧಾರ್ ಕಾರ್ಡ್ ನಂಬಿಕೊಂಡು ಕುಟುಂಬ ಮಗಳಿಗೆ 19 ವರ್ಷ ಆಗಿದೆ ಎಂದು ವ್ಯಕ್ತಿಯೊಬ್ಬರಿಗೆ ತಿಳಿಸಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಶಾಮಿಯಾನ ಹಾಕಿಸಿ ಮನೆಯ ಮುಂದೆ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ವಧುವಿಗೆ ಕಾನೂನಿನ ಪ್ರಕಾರ 18 ವರ್ಷ ಪೂರ್ಣಗೊಂಡಿರುವುದು ಅನುಮಾನ ಎಂದು ಮಕ್ಕಳ ಸಹಾಯವಾಣಿ 1098ಗೆ ಬಂದ ಕರೆ ಆಧರಿಸಿ ಬಾಲಕಿ ದಾಖಲೆ ಪರಿಶೀಲಿಸಿದಾಗ ಮೊದಲು ಆಧಾರ್ ಕಾರ್ಡ್ ತೋರಿಸಿದ್ದು ಅದರಲ್ಲಿ 19 ವರ್ಷ ಆಗಿರುವುದು ಕಂಡುಬಂದಿದೆ. ಬಾಲಕಿಯ ವಯೋಮಿತಿ ಖಾತ್ರಿಪಡಿಸಿಕೊಳ್ಳಲು ಜನನ ಪ್ರಮಾಣ ಪತ್ರ, ಶಾಲಾ ದೃಢೀಕರಣ ಪರಿಶೀಲಿಸಿದಾಗ ಬಾಲಕಿಗೆ 17 ವರ್ಷವಷ್ಟೇ ಆಗಿರುವುದು ಖಾತ್ರಿಯಾಗಿದ್ದು ಈ ಪ್ರಕ್ರಿಯೆಗಳ ಪೂರ್ಣಗೊಳ್ಳುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಯಾಗಿದೆ. ಗಾಬರಿಯಾಗಿ ಕುಟುಂಬದವರು ಮೊದಲು ಬಾಲಕಿಯನ್ನು ಬೇರೆಡೆಗೆ ಕಳುಹಿಸಿದ್ದರು. ಬಳಿಕ ಮಕ್ಕಳ ರಕ್ಷಣಾ ತಂಡ ಬಾಲಕಿಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಮಗುವಿನ ಮುಂದಿನ ಪೋಷಣೆ ಮತ್ತು ರಕ್ಷಣೆಗಾಗಿ ಹಾಜರುಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.