ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಹೊರವಲಯದ ಭೋಗಾಪುರೇಶ(ಆಂಜನೇಯ) ದೇಗುಲದ ರಥೋತ್ಸವವು ಮಾ. 25ರಂದು ನಡೆಯಲಿದೆ. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸುಣ್ಣ–ಬಣ್ಣ ಬಳಿಯಲಾಗಿದೆ.

ಬೆಳಿಗ್ಗೆ ಅಭಿಷೇಕ, ಕುಂಕುಮಾರ್ಚನೆ, ಅನ್ನಬಲಿ, ರಥಾಂಗ ಹೋಮ, ಅನ್ನಸಂತರ್ಪಣೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ದೀವಟಗಿ ಬೆಳಕಿನಲ್ಲಿ ರಥೋತ್ಸವ ನಡೆಯಲಿದೆ.

ದೇವಸ್ಥಾನಕ್ಕೆ ವಿಶೇಷ ಐತಿಹ್ಯವಿದ್ದು, ದೇವಸ್ಥಾನದ ಗೋಪುರವನ್ನು 1,432ರಲ್ಲಿ ರಾಜಾ ಉಡಚಪ್ಪನಾಯಕ ನಿರ್ಮಸಿದ್ದು, ಅದು ಹಂಪಿಯ ವಿರೂಪಾಕ್ಷೇಶ್ವರ ಮತ್ತು ಕನಕಗಿರಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮಾದರಿಯಲ್ಲಿದೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಪ್ರತೀತಿ: ಹಲವು ವರ್ಷಗಳ ಹಿಂದೆ ಕಳ್ಳರು ನಿಧಿ ಆಸೆಗಾಗಿ ಭೋಗೇಶಪುರ ದೇವರ ವಿಗ್ರಹವನ್ನು ಛಿದ್ರಗೊಳಿಸಿ, ಹಳ್ಳಕ್ಕೆ ಎಸೆದಿದ್ದರು. ಇದರಿಂದಾಗಿ ಕಳ್ಳರು ತಮ್ಮ ಎರಡು ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ. ತಾವು ಮಾಡಿದ ತಪ್ಪಿಗೆ ಮರುಗಿ ಕಣ್ಣುಗಳನ್ನು ನೀಡುವಂತೆ ದೇವರಿಗೆ ಮೊರೆ ಹೋದಾಗ ಅವರಿಗೆ ದೃಷ್ಟಿ ಮರಳಿತು ಎಂಬ ಪ್ರತೀತಿಯಿದೆ.

ದೇವಸ್ಥಾನದೊಳಗಿರುವ ಭೋಗಾಪುರೇಶ ಉತ್ಸವ ಮೂರ್ತಿಯು ಭಗ್ನಗೊಂಡಿದೆ. ಭಾರತೀಯ ಸಂಪ್ರದಾಯದಲ್ಲಿ ಭಗ್ನವಾದ ದೇವರ ಮೂರ್ತಿಗೆ ಪೂಜೆ ಸಲ್ಲಿಸುವುದು ವಿರಳ. ಆದರೆ ಇಲ್ಲಿ ಭಗ್ನಗೊಂಡ ಭೋಗಾಪುರೇಶ ಮೂರ್ತಿಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭೋಗಾಪುರೇಶ ದೇವರಿಗೆ ತುಪ್ಪದ ದೀಪ ಮಾತ್ರ ಹಚ್ಚಲಾಗುತ್ತಿದೆ. ಪುರುಷರು ಸಿದ್ಧಪಡಿಸಿದ ನೈವೇದ್ಯ ಮಾತ್ರ ದೇವರಿಗೆ ಅರ್ಪಿಸಲಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷ ಎಂದು ಉಪನ್ಯಾಸಕ ಪವನಕುಮಾರ ಗುಂಡೂರು, ಸಂಶೋಧಕ ಚೆನ್ನಪ್ಪ ತಿಳಿಸಿದರು.

ಪ್ರಸಿದ್ಧ ಕಟ್ಟೆಗಳು: ಭೋಗಾಪುರೇಶ (ಆಂಜನೇಯ) ದೇವಸ್ಥಾನದ ಆವರಣದಲ್ಲಿ ಮಾಲಿಗೌಡರ ಕಟ್ಟೆ, ಪೊಲೀಸ್ ಗೌಡರ ಕಟ್ಟೆ, ಕುಲಕರ್ಣಿ ಕಟ್ಟೆ ಎಂದು ರಥ ಬೀದಿಯಲ್ಲಿ ನಿರ್ಮಿತ ವಾಗಿದ್ದು ಕಟ್ಟೆಗಳು ಇಂದಿಗೂ ಇವೆ.

ದೇವಸ್ಥಾನಕ್ಕೆ ಪೀಠಾಧಿಪತಿಗಳು, ದಾಸರು, ದಾರ್ಶನಿಕರು, ಸಾಧು ಸಂತರು ಭೇಟಿ ನೀಡಿದ್ದಾರೆ. ಪ್ರಭಾವಿ ಕ್ಷೇತ್ರವಾಗಿ ಭೋಗಾಪುರೇಶ ದೇವಾಲಯ ಭಕ್ತರ ಗಮನ ಸೆಳೆಯುತ್ತಿದೆ. ಹೊಸ ತೇರುಃ ನೂರಾರು ವರ್ಷಗಳಿಂದ ಎಳೆಯಲಾಗುತ್ತಿರುವ ತೇರು ತೀರ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಗಮನಿಸಿದ ಸ್ಥಳೀಯರು ಹಾಗೂ ದೇವರ ಭಕ್ತರು ಕೆಲ ವರ್ಷಗಳ ಹಿಂದೆ ನೂತನ ತೇರು ನಿರ್ಮಾಣಕ್ಕೆ ಸಿದ್ಧತೆ ಕೈಗೊಂಡು ಭಕ್ತರಿಂದ ಸಂಗ್ರಹಿಸಿದ ಅಂದಾಜು ₹40 ಲಕ್ಷ ಮೊತ್ತದಲ್ಲಿ 2020ರಲ್ಲಿ ಹೊಸ ತೇರು ನಿರ್ಮಾಣ ಮಾಡಲಾಗಿದೆ. ಕೊರೊನಾದಿಂದಾಗಿ ಎರಡು ವರ್ಷ ರಥೋತ್ಸವ ನಡೆದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.