ಕನಕಗಿರಿ: ಕಳೆದ ವರ್ಷ ಕನಕಾಚಲಪತಿ ದೇಗುಲದ ತೆಂಗಿನಕಾಯಿ ಹಾಗೂ ವಾರದ ಸಂತೆಯ ಹರಾಜು ಟೆಂಡರ್ ಪಡೆದವರು ಬಾಕಿ ಹಣ ನೀಡದಿರುವ ವಿಷಯ ಪ್ರಸ್ತಾಪಗೊಂಡ ಹಿನ್ನೆಲೆ ಭಕ್ತರು ಹಾಗೂ ಟೆಂಡರ್ದಾರರ ಮಧ್ಯೆ ವಾದ–ವಿವಾದ ನಡೆದ ಪರಿಣಾಮ ಪ್ರಸಕ್ತ ಸಾಲಿನ ಹರಾಜು ಪ್ರಕಿಯೆ ಮುಂದೂಡಿದ ಘಟನೆ ಸೋಮವಾರ ನಡೆಯಿತು.

ಇಲ್ಲಿನ ಕನಕಾಚಲಪತಿ ದೇವಸ್ಥಾನದ 2025-26ನೇ ಸಾಲಿನ ತೆಂಗಿನಕಾಯಿ ಹರಾಜು ಪ್ರಕಾಶ ಸಂಗಪ್ಪ ಗುಗ್ಗಳಶೆಟ್ರ ಎಂಬುವವರು ಪಡೆದುಕೊಂಡಿದ್ದರು. ಎರಡು ಕಾಯಿಗೆ ₹60ರಂತೆ ಕನಕಾಚಲಪತಿ ದೇಗುಲದಿಂದ ವಾಲ್ಮೀಕಿ ವೃತ್ತದ ವರೆಗೆ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಿ ಒಟ್ಟು ₹29 ಲಕ್ಷಕ್ಕೆ ಟೆಂಡರ್ ನೀಡಲಾಗಿತ್ತು. ಟೆಂಡರ್ದಾರರು ಕೂಡ ಆದೇಶ ಪ್ರತಿ ಪಡೆದುಕೊಂಡಿದ್ದರು.

ಟೆಂಡರ್ದಾರರು ಹಾಗೂ ಕಾಯಿ ಮಾರಾಟಗಾರರ ನಡುವೆ ತೆಂಗಿನಕಾಯಿ ಗುಣಮಟ್ಟದಲ್ಲಿ ಹೊಂದಾಣಿಕೆಯಾಗದ ಪರಿಣಾಮ ಟೆಂಡರ್ದಾರರು ₹29 ಲಕ್ಷ ಬದಲಾಗಿ ₹22.50 ಲಕ್ಷ ಪಾವತಿ ಮಾಡುವುದಾಗಿ ದೇವಸ್ಥಾನ ಸಮಿತಿ ಬಳಿ ಕೋರಿಕೊಂಡಿದ್ದು ಸೋಮವಾರ ಹರಾಜು ಪ್ರಕ್ರಿಯೆ ಸ್ಥಗಿತವಾಗಲು ಕಾರಣವಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ಟೆಂಡರ್ ಹಣ ಕಡಿಮೆ ಮಾಡುವಂತೆ ಕೋರಿಕೊಂಡ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು, ಒಮ್ಮೆ ಟೆಂಡರ್ ಆದ ಹಣವನ್ನು ಕಡಿಮೆ ಮಾಡಲು ಬರುವುದಿಲ್ಲ ಎಂದು ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಬಾಕಿ ₹7.50 ಲಕ್ಷ ಪಾವತಿ ಮಾಡಬೇಕು ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ವಾರದ ಸಂತೆ ಹಣ ವಾರ್ಷಿಕವಾಗಿ ಒಟ್ಟು ₹7.5 ಲಕ್ಷ ಹರಾಜು ಆಗಿತ್ತು. ಕೃಷ್ಣ ಎಂಬುವವರು ಟೆಂಡರ್ ಪಡೆದುಕೊಂಡಿದ್ದು ₹85 ಸಾವಿರ ಜಮಾವಣೆ ಮಾಡಿದ್ದಾರೆ. ಉಳಿದ ಹಣ ಕೇಳಿದರೆ ತೆಂಗಿನಕಾಯಿ ಹರಾಜು ಪಡೆದುಕೊಂಡವರ ಬಾಕಿ ಹಣ ಪಾವತಿಸಿದ ಕ್ಷಣಾರ್ಧದಲ್ಲಿ ತಮ್ಮ ಪಾಲಿನ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಹರಾಜು ಹಣ ನೀಡದ ಇಬ್ಬರ ವಿರುದ್ದವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಟೆಂಡರ್ದಾರರು ಹೆಚ್ಚಿನ ಬೆಲೆಗೆ ಕಾಯಿ ಮಾರಾಟ ಹಾಗೂ ಬಾಕಿ ಹಣ ವಸೂಲಿ ವಿಳಂಬ ಸೇರಿ ಕೆಲ ಷರತ್ತು ಉಲ್ಲಂಘನೆ ಮಾಡಿದರೂ ತಾವೇಕೆ ಮೌನವಹಿಸಿದ್ದೀರಿ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ ಸೇರಿದಂತೆ ಕೆಲವರು ದೇಗುಲ ಸಮಿತಿ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ ಅವರನ್ನು ಈ ಸಮಯದಲ್ಲಿ ತರಾಟೆಗೆ ತೆಗೆದುಕೊಂಡರು.

ದೇವಸ್ಥಾನದ ಜಾಗದಲ್ಲಿ ಮಾತ್ರ ಕಾಯಿ ಮಾರಾಟ ಹಾಗೂ ವಾರದ ಸಂತೆಯನ್ನು ಮಾಡಬೇಕು. ದೇವಸ್ಥಾದ ಜಾಗವನ್ನು ಸರ್ವೆ ಮಾಡಿ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಭಕ್ತರು ಆಗ್ರಹಿಸಿದರು.

ಗ್ರೇಡ್-2 ತಹಶೀಲ್ದಾರ್ ಮುರುಡಿ, ಪ್ರಮುಖರಾದ ಮಹಾಂತಗೌಡ ಪಾಟೀಲ, ಟೆಂಡರ್ದಾರರಾದ ಪ್ರಕಾಶ ಗುಗ್ಗಳಶೆಟ್ರ, ಕೃಷ್ಣಾ, ನರಸಪ್ಪ ನಾಯಕ, ಯಂಕಾರೆಡ್ಡಿ ಓಣಿಮನಿ, ವೆಂಕೋಬ ಭೋವಿ, ಜಯಪ್ರಕಾಶರೆಡ್ಡಿ ಮಾದಿನಾಳ, ಕರಬಸಪ್ಪ ಉಡುಮಕಲ್, ಅಯ್ಯನಗೌಡ, ರಾಜು ಬೆಲ್ಲಂಕೊಂಡಿಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-35-920057556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.