ಕೊಪ್ಪಳ: ಇದೇ 16 ಹಾಗೂ 17ರಂದು ನಿಗದಿಯಾಗಿದ್ದ ಕನಕಗಿರಿ ಉತ್ಸವವನ್ನು ಏಕಾಏಕಿ ಮುಂದೂಡಿದ್ದರಿಂದ ಈಗಾಗಲೇ ಸಿದ್ಧಗೊಂಡಿರುವ ಬ್ಯಾನರ್ಗಳು ಹಾಗೂ ಆಹ್ವಾನ ಪತ್ರಿಕೆಗಳು ವ್ಯರ್ಥವಾಗುತ್ತಿವೆ.

ಉತ್ಸವಕ್ಕೆ ವ್ಯಾಪಕ ಪ್ರಚಾರ ನೀಡಲು ಜಿಲ್ಲಾಕೇಂದ್ರ ಹಾಗೂ ಜಿಲ್ಲೆಯ ವಿವಿಧೆಡೆ ಹೆಚ್ಚು ಜನ ಸೇರುವ ಜಾಗಗಳಲ್ಲಿ ದೊಡ್ಡ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ. ಬಸ್ಗಳ ಮೇಲೂ ಪೋಸ್ಟರ್ ಅಂಟಿಸಿ ಪ್ರಚಾರ ಮಾಡಲಾಗಿದೆ. ಜಿಲ್ಲಾಡಳಿತ ಭವನ, ನಗರಸಭೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಉತ್ಸವದ ಮಾಹಿತಿ ನೀಡಲಾಗಿದೆ. ಸಾಕಷ್ಟು ಹಣ ಖರ್ಚು ಮಾಡಿ ಆಹ್ವಾನ ಪತ್ರಿಕೆ ಯನ್ನೂ ಮುದ್ರಿಸಲಾಗಿದ್ದು ಅವುಗಳು ವ್ಯರ್ಥವಾಗುತ್ತಿವೆ.

ರಾಜ್ಯ ಸರ್ಕಾರ ಕನಕಗಿರಿ ಉತ್ಸವಕ್ಕಾಗಿ ಈಗಾಗಲೇ ₹6 ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಒಂದಷ್ಟು ಹಣ ಈಗಾಗಲೇ ಪ್ರಚಾರ ಹಾಗೂ ಆಹ್ವಾನ ಪತ್ರಿಕೆ ಮುದ್ರಣಕ್ಕಾಗಿ ಖರ್ಚು ಮಾಡಲಾಗಿದೆ.

ಉತ್ಸವವನ್ನು ಮುಂದೂಡಿದ್ದರಿಂದ ಆರ್ಥಿಕ ನಷ್ಟವಾಗುವುದಿಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ‘ಸಚಿವ ಶಿವರಾಜ ತಂಗಡಗಿ ಅವರ ಸೂಚನೆ ಮೇರೆಗೆ ಜೂನ್ 10 ಹಾಗೂ 11ಕ್ಕೆ ಉತ್ಸವ ಮುಂದೂಡಲಾಗಿದೆ. ಈಗಾಗಲೇ ಹಾಕಿರುವ ಬ್ಯಾನರ್ಗಳ ಮೇಲೆ ದಿನಾಂಕ ಮಾತ್ರ ಬದಲಿಸಲಾ ಗುವುದು. ಸರ್ಕಾರಕ್ಕೆ ಆರ್ಥಿಕ ನಷ್ಟ ವಾಗದ ರೀತಿ ಇರುವ ಮೊತ್ತದಲ್ಲಿಯೇ ಉತ್ಸವದ ಖರ್ಚು ವೆಚ್ಚ ನಿರ್ವಹಣೆ ಮಾಡಲಾಗುವುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-35-1685124379

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.