ಕನಕಗಿರಿ: ಈ ಭಾಗದ ಜನರ ಬಹು ಬೇಡಿಕೆಯ ಕನಕಗಿರಿ ಉತ್ಸವ ಆಚರಣೆಗೆ ಸಚಿವ ಸಂಪುಟದ ವಿಸ್ತರಣೆ ಅಡ್ಡಿಯಾಗುವ ಆತಂಕ ತಲೆದೋರಿದೆ.

2010ರಲ್ಲಿ ಆರಂಭಗೊಂಡ ಕನಕಗಿರಿ ಉತ್ಸವ ಇಲ್ಲಿವರೆಗೆ (2013, 2015, 2024) ಒಟ್ಟು ನಾಲ್ಕು ಬಾರಿ ನಡೆದಿದೆ. 2025ರಲ್ಲಿ ಕನಕಾಚಲಪತಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕನಕಗಿರಿ ಉತ್ಸವ ಆಚರಣೆಗೆ ನಿರ್ಧರಿಸಿದ್ದ ತಂಗಡಗಿ ಅವರ ಯೋಚನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಆ ವರ್ಷ ಉತ್ಸವ ನಡೆಯಲಿಲ್ಲ.

2026ರ ಮಾರ್ಚ್ನಲ್ಲಿ ನಡೆದ ಕನಕಾಚಲಪತಿ ಜಾತ್ರಾ ಮಹೋತ್ಸವದ ಸಭೆ ಹಾಗೂ ಸಭೆಯ ನಂತರ ಸ್ಥಳೀಯರು ಉತ್ಸವ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು. ಪತ್ರಕರ್ತರ ಜತೆಗೆ ಮಾತನಾಡಿದ್ದ ಶಾಸಕ ತಂಗಡಗಿ ಅವರು ಉತ್ಸವಕ್ಕೆ ₹6 ಕೋಟಿ ಅನುದಾನ ಬಂದಿದೆ. ಮೇ 9 ಹಾಗೂ 10ರಂದು ಉತ್ಸವ ಮಾಡುವುದಾಗಿ ತಿಳಿಸಿದ್ದರು.

ಮೇ.21ರಂದು ಕನಕಾಚಲಪತಿ ದೇಗುಲದಲ್ಲಿ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು ಮೇ 9, 10ರಂದು ಗ್ರಾಮ ದೇವತೆಗಳ ಜಾತ್ರೆ ಇರುವ ಹಿನ್ನೆಲೆ ಸ್ಥಳೀಯರ ಕೋರಿಕೆ ಮೆರೆಗೆ ಮೇ 16 ಮತ್ತು 17ರಂದು ಉತ್ಸವ ನಡೆಸುವುದಾಗಿ ಘೋಷಣೆ ಮಾಡಿದ್ದರು.

ಅದ್ದೂರಿಯಾಗಿ ಉತ್ಸವ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ನೇತೃತ್ವದಲ್ಲಿ ಕನಕಗಿರಿಯಲ್ಲಿ ಎರಡು ಹಾಗೂ ಕೊಪ್ಪಳದಲ್ಲಿ ಒಂದು ಸಲ ಅಧಿಕಾರಿಗಳ ಸಭೆ ನಡೆಸಿ ಭರದ ಸಿದ್ದತೆ ನಡೆಸಲಾಗಿತ್ತು. ಉತ್ಸವದ ಲೋಗೊ ಹಾಗೂ ಆಮಂತ್ರಣ ಪತ್ರಿಕೆ ಸಹ ಬಿಡುಗಡೆಗೊಂಡಿತ್ತು. ವೇದಿಕೆ ನಿರ್ಮಾಣ, ಹೆಲಿಪ್ಯಾಡ್, ಅಡುಗೆ ಸಿದ್ದತೆಯೂ ಭರದಿಂದ ಸಾಗಿತ್ತು. ಕಲಾವಿದರು ಹಾಗೂ ವಿವಿಧ ಗೋಷ್ಠಿಗಳ ಯಾದಿ ಪ್ರಕಟಗೊಂಡಿದ್ದವು.

ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಮೇ 14 ಹಾಗೂ 15ರಂದು ಕ್ರೀಡಾಕೂಟ ನಡೆಸಲು ಯುವ ಸಬಲೀಕರಣ ಇಲಾಖೆ ಸಕಲ ಸಿದ್ದತೆ ನಡೆಸಿದ ಸಮಯದಲ್ಲಿಯೇ ಅಂದಿನ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಕಾರಣ ಉತ್ಸವವನ್ನು ಜೂ.10 ಹಾಗೂ 11ಕ್ಕೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆ ನೀಡಿ, ಸ್ಥಳೀಯರಲ್ಲಿ ನಿರಾಶೆ ಮೂಡಿಸಿದ್ದರು.

ಉತ್ಸವ ಇನ್ನೂ 10 ದಿನ ಬಾಕಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆನೀಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನಿಭಾಯಿಸಿದ ಶಿವರಾಜ ತಂಗಡಗಿ ಅವರು ಡಿಕೆ ಶಿವಕುಮಾರ ಅವರ ಸಚಿವ ಸಂಪುಟದ ಸಚಿವರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಯಾವ ಖಾತೆ ಎಂಬುದು ಸ್ಪಷ್ಟವಿಲ್ಲ. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾದ ನಂತರ ಉತ್ಸವ ನಡೆಯುತ್ತಾ ಅಥವಾ ಈಗಾಗಲೇ ನಿಗದಿ ಪಡಿಸಿದಂತೆ ಜೂ.10 ಹಾಗೂ 11ರಂದು ಆಚರಿಸಲಾಗುತ್ತಾ ಎಂಬುದು ಕಾದು ನೋಡಬೇಕಾಗಿದೆ.

ಉತ್ಸವಕ್ಕೆ ದಿನಗಣನೆ; ಕಾಣುತ್ತಿಲ್ಲ ಸಿದ್ದತೆ

ಉತ್ಸವಕ್ಕೆ ಹತ್ತು ದಿನಗಳು ಬಾಕಿ ಉಳಿದರೂ ಸಿದ್ದತೆ ಮಾತ್ರ ಕಾಣುತ್ತಿಲ್ಲ. ಮಳೆಗಾಲ ಆರಂಭಗೊಂಡಿರುವುದು ಉತ್ಸವ ನಡೆಯುವುದು ಅನುಮಾನವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜೂ.3ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಮೊದಲು ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ನಮೂದಿಸಲಾಗಿತ್ತು. ಈಗ ಸಹಜವಾಗಿ ಡಿ.ಕೆ ಶಿವಕುಮಾರ ಉದ್ಘಾಟಿಸುವರು ಎಂದು ಮರು ಮುದ್ರಣ ಮಾಡಬೇಕಿದೆ. ಹೀಗಾಗಿ ಆಮಂತ್ರಣ ಪತ್ರಿಕೆಯ ಸಹ ಬದಲಾವಣೆ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.