ಕಾರಟಗಿ: ಕ್ಷೇತ್ರದ ಎಲ್ಲಾ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಸಮುದಾಯ ಭವನ ನಿರ್ಮಾಣದಿಂದ ಆ ಸಮುದಾಯದ ಸರ್ವ ಶುಭ ಕಾರ್ಯಗಳಿಗೆ ಅನುಕೂಲವಾಗುವುದು. ಸಮುದಾಯ ಭವನಗಳಿಗೆ ₹ 50 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ರೈಲು ನಿಲ್ದಾಣ ರಸ್ತೆಯ ತಿರುವಿನಲ್ಲಿಯ ವೆಂಕಟೇಶ ಈಡಿಗೇರ ಲೇಔಟ್ನಲ್ಲಿ ಉಪ್ಪಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಇಂದು ಉಪ್ಪಾರ, ಗಾಣಿಗ ಹಾಗೂ ಹಡಪದ ಸಮಾಜದ ಸಮುದಾಯ ಭವನಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದು, ಈಗಾಗಲೇ ಪಂಚಮಸಾಲಿ ಸಮುದಾಯ ಭವನ, ಮುಸ್ಲಿಂ ಸಮಾಜದ ಶಾದಿ ಮಹಲ್ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಕುರುಬ, ವಾಲ್ಮೀಕಿ, ಭಜಂತ್ರಿ, ಜಂಗಮ ಸಮಾಜದ ಸಮುದಾಯ ಭವನಗಳ ನಿರ್ಮಾಣಕ್ಕೂ ಭೂಮಿ ಪೂಜೆ ನೆರವೇರಿಸಬೇಕಾಗಿದೆ. ಕ್ಷೇತ್ರದ ಕಾರಟಗಿ, ಕನಕಗಿರಿ, ನವಲಿ, ಮರಳಿ ಹೀಗೆ ಎಲ್ಲಾ ಭಾಗಗಳ ಬಹುದಿನಗಳ ಸಮುದಾಯ ಭವನದ ಬೇಡಿಕೆಯ ಕನಸು, ನನಸಾಗಲಿದೆ’ ಎಂದರು.

‘ಕಸ ವಿಲೇವಾರಿ ಘಟಕಕ್ಕೆ ₹ 3 ಕೋಟಿ ಮತ್ತು ₹1 ಕೋಟಿ ವೆಚ್ಚದಲ್ಲಿ ಆವರಣಗೋಡೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಈಗಾಗಲೇ ನವಲಿ ರಸ್ತೆಯಲ್ಲಿ ಬೀದಿದೀಪಗಳನ್ನು ಅಳವಡಿಸಲಾಗಿದೆ. ಬೂದುಗುಂಪಾ ರಸ್ತೆ ಕಾಮಗಾರಿ ಮತ್ತು ಪನ್ನಾಪುರ ಸಿಸಿ ರಸ್ತೆ ಆರಂಭವಾಗಿದೆ. ಎಲ್ಲವೂ ಮುಗಿದ ಬಳಿಕ ರಸ್ತೆಗಳಿಗೆ ಬೀದಿದೀಪಗಳ ವ್ಯವಸ್ಥೆ ಮಾಡಲಾಗುವುದು’ ಎಂದರು.

ಕಾಮಗಾರಿಗಳಿಗೆ ಚಾಲನೆ: ಗಾಣಿಗ ಸಮುದಾಯ ಭವನಕ್ಕೆ ₹ 50 ಲಕ್ಷ, ಹಡಪದ ಅಪ್ಪಣ್ಣ ಸಮಾಜಕ್ಕೆ ₹25 ಲಕ್ಷ, ಭಗೀರಥ ಸಮುದಾಯ ಭವನಕ್ಕೆ ₹50 ಲಕ್ಷ, ಬೂದುಗುಂಪಾ ಗ್ರಾಮದ ಶರಣ ಬಸವೇಶ್ವರ ಸೇವಾಸಮಿತಿ ಸಮುದಾಯ ಭವನಕ್ಕೆ ₹30 ಲಕ್ಷ ಸೇರಿ ಒಟ್ಟು ₹1. 55 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ, ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಮುಖಂಡರಾದ ಚನ್ನಬಸಪ್ಪ ಸುಂಕದ, ಶರಣಪ್ಪ ಪರಕಿ, ಬೂದಿ ಗಿರಿಯಪ್ಪ, ತಾ.ಪಂ ಮಾಜಿ ಅಧ್ಯಕ್ಷ ಮಹಮದ್ ರಫಿ, ಪ್ರಮುಖರಾದ ಉದಯ ಈಡಿಗೇರ, ನಾಗರಾಜ್ ಈಡಿಗೇರ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ವೀರೇಶ ಮುದುಗಲ್, ಶೇಖರಪ್ಪ ಗ್ಯಾರೇಜ್, ಮಾಜಿ ಸದಸ್ಯ ಮಾರುತಿ ಉಪ್ಪಾರ, ಉಪ್ಪಾರ ಸಮಾಜದ ತಾಲ್ಲೂಕಾಧ್ಯಕ್ಷ ಮೂರ್ತೆಪ್ಪ ಉಪ್ಪಾರ, ಗೌರವಾಧ್ಯಕ್ಷ ಅಮರೇಶಪ್ಪ ಉಪ್ಪಾರ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-35-1905677146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.