ಕಾರಟಗಿ: ‘ತಾಲ್ಲೂಕಿನ ಸರ್ಕಾರಿ ನೌಕರರಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕೊಕ್ಕೊ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಾಕ್ಷಿಯಾಗಿದೆ. ರಾಜ್ಯಮಟ್ಟದಲ್ಲೂ ಅವರು ವಿಜೇತರಾಗಿ ಜಿಲ್ಲೆಯ, ತಾಲ್ಲೂಕಿನ ಕೀರ್ತಿ ಹೆಚ್ಚಿಸಬೇಕು’ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ ಹೇಳಿದರು.

ಪಟ್ಟಣದ ಕೆಪಿಎಸ್ ಪ್ರೌಢಶಾಲೆಯ ಸಿದ್ದೇಶ್ವರ ರಂಗಮಂದಿರದ ಆವರಣದಲ್ಲಿ ಸೋಮವಾರ ಮರ್ಲಾನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ, ಯುವ ಮುಖಂಡ ಸಿ.ಎಚ್. ರವಿನಂದ ಅವರು, ಕ್ರೀಡಾಪಟುಗಳಿಗೆ ನೀಡಿದ್ದ ಜೆರ್ಸಿಗಳನ್ನು ವಿತರಿಸಿ ಮಾತನಾಡಿದರು.

‘ಮೇ 23, 24 ಮತ್ತು 25ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳು ನಡೆಯಲಿವೆ. ನಮ್ಮ ತಾಲ್ಲೂಕಿನ ನೌಕರರು ಮತ್ತಷ್ಟು ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿಯೂ ಜಯ ಸಾಧಿಸಲಿ. ಅವರಿಗೆ ಬೇಕಾದ ಸಹಾಯ, ಸಹಕಾರವನ್ನು ತಾಲ್ಲೂಕು ನೌಕರರ ಸಂಘದಿಂದ ನೀಡಲಾಗುವುದು’ ಎಂದು ಹೇಳಿದರು.

ಜೆರ್ಸಿ ಕೊಡುಗೆಯಾಗಿ ನೀಡಿದ ಯುವ ಮುಖಂಡ ಸಿ.ಎಚ್. ರವಿನಂದ ಮಾತನಾಡಿ, ಅಧಿಕ ಕೆಲಸದ ಒತ್ತಡದ ಮಧ್ಯೆಯೂ ಸರ್ಕಾರಿ ನೌಕರರು ಆಟೋಟಗಳಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ. ಆರೋಗ್ಯದ ದೃಷ್ಟಿಯಿಂದ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಬಹುಮುಖ್ಯವಾದ ಹವ್ಯಾಸ. ನಮ್ಮಲ್ಲಿಯ ಪ್ರತಿಭೆಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಕಾರಟಗಿಯ ಕೀರ್ತಿ ಹೆಚ್ಚಿಸಬೇಕು. ಅವರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ 50 ಕ್ರೀಡಾಪಟುಗಳಿಗೆ ಜೆರ್ಸಿಗಳನ್ನು ವಿತರಿಸಲಾಯಿತು. ದಾನಿ ಸಿ.ಎಚ್. ರವಿನಂದ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಂಜುನಾಥಸ್ವಾಮಿ ಹಿರೇಮಠ, ಗೌರವಾಧ್ಯಕ್ಷ ಬಸವರಾಜ್ ರ್ಯಾವಳದ, ಉಪಾಧ್ಯಕ್ಷ ತಿಮ್ಮಣ್ಣ ನಾಯಕ ನಿರ್ದೇಶಕ ಗುರುಪ್ರಸಾದ, ಮಲ್ಲೇಶಿ, ಅಮರೇಶ ಮೈಲಾಪುರ, ಮಂಗಳಮ್ಮ, ಬಸವರಾಜಸ್ವಾಮಿ, ಬಸವರಾಜ ನಾಯಕ, ವೈ.ಐ.ಹನುಮೇಶ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶರಣಪ್ಪ ಸೋಮಲಾಪುರ, ರಾಘವೇಂದ್ರ ಕಂಠಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಜಿಪಿಟಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮೈಲಾಪುರ, ಸಮಾಜ ಕಲ್ಯಾಣ ಇಲಾಖೆ ಗಂಗಪ್ಪ, ಕೊಕ್ಕೊ ತಂಡದ ನಾಯಕ ಸಂಗಪ್ಪ, ಆಟಗಾರರಾದ ಅಮರಮ್ಮ, ಸವಿತಾ ಚೋರಗಿ, ನಾಗರತ್ನ, ರತ್ನ, ಗಿರಿಜಾ, ರೇಣುಕಮ್ಮ, ಶ್ರೀದೇವಿ, ಬಸವರಾಜೇಶ್ವರಿ, ಚೈತ್ರಾಂಜಲಿ, ರೇಣುಕಾ, ಶಾರದಾ, ಜ್ಯೋತಿ, ಅಂಬಿಕಾ, ಅನಿತಾ ಸಹಿತ ಇತರ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-35-961617220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.