ಕಾರಟಗಿ: ‘ಪ್ರತಿ ಅಭಿವೃದ್ಧಿಯ ಹಿಂದೆ ಕಾರ್ಮಿಕರ ಪರಿಶ್ರಮ ಸಾಕಷ್ಟಿರುತ್ತದೆ. ಕಾರ್ಮಿಕರಿಗೆ ಸುರಕ್ಷತೆ, ಸರ್ಕಾರದ ಪ್ರೋತ್ಸಾಹಕರ ಯೋಜನೆಗಳು ಅಗತ್ಯ. ಅವರಿಗೂ ಮಾನಸಿಕ ಒತ್ತಡ ಸಾಕಷ್ಟಿರುತ್ತದೆ. ಪರಿಶ್ರಮ ಜೀವಿಗಳು ಒತ್ತಡದ ಕೆಲಸದ ಮಧ್ಯೆ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳಿಗೆ ಕೆಲ ಸಮಯ ಮೀಸಲಿಟ್ಟು ಮಾನಸಿಕ, ದೈಹಿಕ ಆರೋಗ್ಯದತ್ತ ಗಮನ ಹರಿಸಬೇಕು’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ರೇಖಾ ಹೇಳಿದರು.

ಶುಕ್ರವಾರ ಬ್ರಹ್ಮಕುಮಾರಿ ಸೇವಾ ಕೇಂದ್ರದಲ್ಲಿ ಕಾರ್ಮಿಕರ ದಿನಾಚರಣೆಯ ನಿಮಿತ್ತ ತಾಲ್ಲೂಕಿನ ಬೂದಗುಂಪಾ ಗ್ರಾ.ಪಂ. ಕಾರ್ಮಿಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೂದಗುಂಪಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಮಾತನಾಡಿ, ‘ಕಾರ್ಮಿಕರ ಹಿತರಕ್ಷಣೆಗೆ ಕಾರ್ಮಿಕ ಸಂಘಟನೆಗಳು ಹುಟ್ಟಿವೆ. ಅಧಿಕಾರಿಗಳು ಸರ್ಕಾರದ ಅನೇಕ ಸೌಲಭ್ಯಗಳನ್ನು ಒದಗಿಸಲು ಯತ್ನಿಸುತ್ತಿದ್ದೇವೆ. ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ, ಇಂದು ಗ್ರಾಮ, ಪಟ್ಟಣದ ಸ್ವಚ್ಛತೆ ಕಾಪಾಡುತ್ತ ಜನರ ಆರೋಗ್ಯ ರಕ್ಷಣೆಯಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಏನೇ ಗೌರವ ಕೊಟ್ಟರೂ ಸಾಲದು. ಕಾರ್ಮಿಕರನ್ನು ಎಲ್ಲರೂ ಗೌರವಿಸುತ್ತ, ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ನಿವೃತ್ತ ಕೃಷಿ ಅಧಿಕಾರಿ ರೇವಣಸಿದ್ದಪ್ಪ ಕೋಲ್ಕಾರ ಮಾತನಾಡಿ, ‘ಪ್ರತಿ ಕಾರ್ಯದ ಯಶಸ್ಸಿನ ಹಿಂದೆ ಕಾರ್ಮಿಕರ ಪರಿಶ್ರಮ ಇರುತ್ತದೆ’ ಎಂದರು.

ಎಂಜಿನಿಯರ್ ನರೇಂದ್ರ, ರವಿ ಯರಡೋಣ, ಅನೇಕ ಸಾಧಕರು, ಅಭಿಮಾನಿಗಳು ಉಪಸ್ಥಿತರಿದ್ದರು. ಬೂದಗುಂಪಾ ಗ್ರಾ.ಪಂ ಕಾರ್ಮಿಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಬ್ರಹ್ಮಕುಮಾರಿ ಶಿವಲೀಲಾ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-35-2139173353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.