ಕೊಪ್ಪಳ: ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ನಿರ್ವಾಹಕ ಟಿಕೆಟ್ ನೀಡುವ ಯಂತ್ರದಿಂದ ಹಲ್ಲೆ ಮಾಡಿದ್ದು ಮಹಿಳೆಗೆ ಗಾಯಗಳಾಗಿವೆ.

ತಾಲ್ಲೂಕಿನ ಬೆಟಗೇರಿ ಗ್ರಾಮದ ಮಲ್ಲಮ್ಮ ಎಂಬ ಮಹಿಳೆ ಗಾಯಗೊಂಡಿದ್ದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕುಕನೂರು ಬಳಿಯ ರಾಜೂರಿನಿಂದ ಕೊಪ್ಪಳಕ್ಕೆ ಬಂದು ಕೊಪ್ಪಳದಿಂದ ಬೆಟಗೇರಿಗೆ ಹೋಗಲು ಸಿದ್ಧವಾಗಿದ್ದ ಮಹಿಳೆ ಬಸ್ ನಿಲ್ದಾಣದಲ್ಲಿ ಬಸ್ ಮೆಟ್ಟಿಲು ಹತ್ತಿದ ನಂತರ ಸ್ಥಳದ ಖಾಲಿ ಜಾಗದಲ್ಲಿ ಮಲ್ಲಮ್ಮ ಹಾಗೂ ಇತರರು ಕುಳಿತಿದ್ದರು.

ಆಗ ನಿರ್ವಾಹಕ ಎದ್ದೇಳಿ ಎಂದು ಹೇಳಿದಾಗ ಮೊಮ್ಮಕ್ಕಳನ್ನು ಎತ್ತಿಕೊಂಡು ಎದ್ದೇಳುವಷ್ಟರಲ್ಲಿ ನಿರ್ವಾಹಕ ಹಲ್ಲೆ ಮಾಡಿದ್ದಾನೆ ಎಂದು ಮಲ್ಲಮ್ಮ ಆರೋಪಿಸಿದ್ದಾರೆ. ಬಲವಾಗಿ ಬಿದ್ದ ಪೆಟ್ಟಿಗೆ ಮಹಿಳೆಯ ಎಡಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿದ್ದು ಹೊಲಿಗೆ ಹಾಕಲಾಗಿದೆ.

ಘಟನೆ ಬಳಿಕ ನಮ್ಮ ಸಿಬ್ಬಂದಿ ಮಹಿಳೆ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಆಸ್ಪತ್ರೆಗೂ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಘಟನೆ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.