ಕುಕನೂರು: ತಾಲ್ಲೂಕಿನ ವಟಪರವಿ ಗ್ರಾಮದ ಲಚಮಪ್ಪ ರಾಠೋಡ ತನ್ನ ಸ್ವಂತ 10 ಎಕರೆ ಜಮೀನಿನಲ್ಲಿ ಆರು ಕೊಳವೆಬಾವಿ ಮೂಲಕ ದ್ರಾಕ್ಷಿ, ಕಲ್ಲಂಗಡಿ, ಸೀಡ್ಸ್ ಹೀಗೆ ಮಿಶ್ರಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸುತ್ತಲಿನ ಗ್ರಾಮದ ಯುವ ರೈತರಿಗೆ ಮಾದರಿಯಾಗಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದಿದ್ದು ಪ್ರತಿವರ್ಷ ₹4 ಲಕ್ಷದಿಂದ ₹5 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಅಲ್ಲದೆ ಕಲ್ಲಂಗಡಿ, ಮೆಕ್ಕೆಜೋಳ ಹೀಗೆ ಮಿಶ್ರ ಬೆಳೆ ಬೆಳೆದು ಲಾಭದಾಯಕ ಜೀವನ ನಡೆಸುತ್ತಿದ್ದಾರೆ. ಸಾವಯವ ಗೊಬ್ಬರ ಮತ್ತು ಹನಿ ನೀರಾವರಿಯ ಮೂಲಕ ಕಡಿಮೆ ಖರ್ಚಿನಲ್ಲಿ ಸಮೃದ್ಧ ಮಿಶ್ರ ಬೆಳೆ ಬೆಳೆದು ಇತರೆ ಮಾದರಿಯಾಗಿದ್ದಾರೆ.

ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೇ ಕೇವಲ ಪಾರಂಪರಿಕ ನೈಸರ್ಗಿಕ ಪದ್ಧತಿಯಲ್ಲಿ ಪ್ರತಿವರ್ಷ ಹೆಸರು, ಶೇಂಗಾ, ಮೆಣಸಿನಕಾಯಿ, ಹತ್ತಿ, ಕಲ್ಲಂಗಡಿ, ಕಡಲೆ, ಗೋಧಿ ಬೆಳೆದು ವಾರ್ಷಿಕ ₹6 ಲಕ್ಷದಿಂದ ₹8 ಲಕ್ಷ ಆದಾಯ ಗಳಿಸುತ್ತಿದ್ದಾರೆ.

‘ಪ್ರಾರಂಭದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲು ಪ್ರತಿ ಎಕರೆಗೆ ಸುಮಾರು ₹60 ಸಾವಿರ ಖರ್ಚು ಮಾಡಿದ್ದು, ಮೊದಲ ಫಸಲಿನಲ್ಲಿ ಪ್ರತಿ ಎಕೆರೆಗೆ ₹2 ಲಕ್ಷ ಆದಾಯ ಪಡೆದಿದ್ದೇನೆ. ಈಗ ಆದಾಯ ಹೆಚ್ಚಾಗಿದೆ. ದ್ರಾಕ್ಷಿಯನ್ನು ಮಾರುಕಟ್ಟೆಗೆ ಕಳುಹಿಸುವುದರ ಜೊತೆಗೆ ಒಣ ದ್ರಾಕ್ಷಿ ಮಾಡಲು ತೋಟದಲ್ಲಿ ಒಣದ್ರಾಕ್ಷಿ ತಯಾರಿಕೆ ಶೆಡ್ ನಿರ್ಮಿಸಿದ್ದು. ಒಣದ್ರಾಕ್ಷಿ ತಯಾರಿಸಿ ಮಾರುಕಟ್ಟೆಗೆ ಕಳಿಹಿಸುತ್ತೇನೆ’ ಎನ್ನುತ್ತಾರೆ ರೈತ ಲಚಮಪ್ಪ.

‘ಹೊಲದಲ್ಲಿ ನಾಲ್ಕು ದೇಸಿ ಆಕಳು, 2 ಎತ್ತುಗಳಿಂದ ದೊರೆಯುವ ಸಗಣಿಯಿಂದ ಕೊಟ್ಟಿಗೆ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳುತ್ತಿದ್ದೇನೆ. ತೋಟಗಾರಿಕೆ ಇಲಾಖೆ ಸಹಕಾರದಿಂದ ಹನಿನೀರಾವರಿ ಅಳವಡಿಸಿ ದ್ರಾಕ್ಷಿ ಬೆಳೆದಿದ್ದೇನೆ’ ಎಂದರು.

ಲಚಮಪ್ಪ ಅವರ ಯಶಸ್ವಿ ಕೃಷಿ ಜೀವನಕ್ಕೆ ಅವರ ಪತ್ನಿ ಸೋನಮ್ಮ ಹಾಗೂ ಮಕ್ಕಳು ಸಹಕಾರ ನೀಡಿದ್ದಾರೆ. ಹೊಲದಲ್ಲಿ ಪ್ರತಿನಿತ್ಯ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಾಥ್ ನೀಡುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-35-1597360980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.