ಕುಕನೂರು: ಪಟ್ಟಣ ಪಂಚಾಯಿತಿಯ ಆಡಳಿತ ವೈಫಲ್ಯ, ಸ್ಮಶಾನ ಭೂಮಿಯ ತೀವ್ರ ಕೊರತೆ ಹಾಗೂ ದೂಳು ಮುಕ್ತ ರಸ್ತೆ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಕುರಿತು ಕುಕನೂರು ಪಟ್ಟಣ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಸಂಚಾಲಕ ರವಿ ಜಕ್ಕ ಮಾತನಾಡಿ, ‘ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳ ಗೈರುಹಾಜರಿ ಹಾಗೂ ನಿರ್ಲಕ್ಷ್ಯದಿಂದ ಸಾರ್ವಜನಿಕ ಸೇವೆಗಳಿಗೆ ಹಿನ್ನಡೆಯಾಗುತ್ತಿದೆ. ಅಲ್ಲದೆ, ಪೌರಕಾರ್ಮಿಕರನ್ನು ಕಚೇರಿ ಕೆಲಸಗಳಿಗೆ ಬಳಸುತ್ತಿರುವುದರಿಂದ ಸ್ವಚ್ಛತೆ ಸೇರಿದಂತೆ ಮೂಲಭೂತ ಸೇವೆಗಳು ಕೂಡ ಅಸ್ತವ್ಯಸ್ತವಾಗಿವೆ’ ಎಂದು ಆರೋಪಿಸಿದರು.

ಸಮಿತಿಯ ಸದಸ್ಯ ಅಂದಪ್ಪ ಜವಳಿ ಮಾತನಾಡಿ, ‘ಪಟ್ಟಣದಲ್ಲಿ ಸ್ಮಶಾನ ಭೂಮಿಯ ಕೊರತೆ ಗಂಭೀರ ಸಮಸ್ಯೆಯಾಗಿದೆ. ರೈಲ್ವೆ ಕಾಮಗಾರಿಯಿಂದ ಹಳೆಯ ಸ್ಮಶಾನಗಳು ಬಳಕೆಗೆ ಅನರ್ಹವಾಗಿದ್ದು, ನಾಗರಿಕರಿಗೆ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಭೂಮಿ ಖರೀದಿಸಿ ಆಧುನಿಕ ಸೌಲಭ್ಯ ಗಳೊಂದಿಗೆ ರುದ್ರಭೂಮಿ ನಿರ್ಮಿಸಿಕೊಡಬೇಕು’ ಎಂದರು.

ಸಮಿತಿಯ ಸಹ ಸಂಚಾಲಕ ಮಂಜುನಾಥ ನಾಡಗೌಡ್ರ ಮಾತನಾಡಿ, ‘ಅಂಬೇಡ್ಕರ್ ವೃತ್ತದಿಂದ ಗುರುಕುಲದವರೆಗಿನ ರಸ್ತೆಯಲ್ಲಿ ಉಂಟಾಗುತ್ತಿರುವ ಭಾರಿ ದೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ತಕ್ಷಣವೇ ಈ ರಸ್ತೆಗೆ ಡಾಂಬರು ಹಾಸಿ ಧೂಳು ಮುಕ್ತಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಳಕೇಶ್ ಹತ್ತಿಕಟಗಿ, ದೇವಪ್ಪ ರಾಟಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-35-905680457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.