ಕುಷ್ಟಗಿ: ಹೊಂಡದಲ್ಲಿ ಈಜಲು ಹೋಗಿದ್ದ ಬಾಲಕ ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ವಣಗೇರಿ ಸೀಮಾಂತರದಲ್ಲಿ ಭಾನುವಾರ ನಡೆದಿದೆ.

ಕೆಲ ಯುವಕರೊಂದಿಗೆ ತಾಲ್ಲೂಕಿನ ಬೋದೂರು ಗ್ರಾಮದ ಹನುಮಂತ ಬಸವರಾಜ ಅಪ್ಪಾಜಿಗೌಡ (17) ಸಹ ಈಜಲು ಹೋಗಿದ್ದರು. ಆದರೆ ನೀರಿಗಿಳಿದ ಹನುಮಂತ ಮತ್ತೆ ಕಾಣಿಸಿಕೊಳ್ಳಲಿಲ್ಲ. ಈ ವಿಷಯವನ್ನು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಠಾಣೆ ಸಿಬ್ಬಂದಿ ನಾಪತ್ತೆಯಾಗಿದ್ದ ಬಾಲಕನ ಹುಡುಕಾಟ ನಡೆಸಿದ್ದರು. ಆದರೆ ಕತ್ತಲಾದರೂ ಯುವಕ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

ಕೆರೆ ಅಲ್ಲ: ಗದಗ-ವಾಡಿ ರೈಲು ಮಾರ್ಗಕ್ಕೆ ಮುರಂ ಅಗತ್ಯ ಪೂರೈಸುವ ಸಲುವಾಗಿ ಗುತ್ತಿಗೆದಾರರೊಬ್ಬರು ಏಳು ಎಕರೆ ಕೃಷಿ ಭೂಮಿಯನ್ನು ಖರೀದಿಸಿ ಅದರಲ್ಲಿ ಆಳದವರೆಗೂ ಮಣ್ಣು ತೆಗೆದಿದ್ದಾರೆ. ಅದರಿಂದ ಕೃತಕ ಹೊಂಡ ನಿರ್ಮಾಣಗೊಂಡಿದೆ. ಹಾಗಾಗಿ ಬಹುಶಃ ಬಾಲಕ ಕೆಸರಿನಲ್ಲಿ ಸಿಲುಕಿರಬಹುದು ಎನ್ನಲಾಗುತ್ತಿದೆ. ಅಲ್ಲದೆ ಹೊಂಡದ ಸುತ್ತ ರಕ್ಷಣೆಗಾಗಿ ತಂತಿ ಬೇಲಿ ಅಳವಡಿಸಿದ್ದರೂ ಯುವಕರು ಹೊಂಡದಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-35-1309459334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.