ಕುಷ್ಟಗಿ: ಅಧಿಕ ಬಡ್ಡಿ ಆಸೆ ತೋರಿಸಿ ಕೋಟ್ಯಂತರ ಠೇವಣಿ ಪಡೆದು ಜನರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಹಣ ಮರಳಿಸಲು ನೆರವಾಗಬೇಕು ಎಂದು ಜನರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ವಿಷಯ ಕುರಿತು ಶನಿವಾರ ಠಾಣೆಗೆ ಬಂದಿದ್ದ ಜನರು, ಸಿಪಿಐ ವಿಶ್ವನಾಥ ಹಿರೇಗೌಡರಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಗಿದ್ದೇನು: ಪಟ್ಟಣದ ಕೆಲವರು ಷೇರುಮಾರುಕಟ್ಟೆಗೆ ಸಂಬಂಧಿಸಿದಂತೆ ಯುವಜನರಿಗೆ ತರಬೇತಿ ನೀಡುವುದಾಗಿ ಪಟ್ಟಣದಲ್ಲಿ ಟ್ರೇಡಿಂಗ್ ಕಂಪೆನಿ ಹೆಸರಿನಲ್ಲಿ ತರಬೇತಿ ಕೇಂದ್ರ ತೆರೆದಿದ್ದಾರೆ. ಯುವಕರನ್ನು ಬಳಸಿ ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿದ್ದಾರೆ. ಹಣಕಾಸು ಅಕ್ರಮ ವ್ಯವಹಾರ ನಡೆಸಲಾಗುತ್ತಿದ್ದು, ಕೋಟ್ಯಂತರ ವ್ಯವಹಾರ ನಡೆಸಿದ್ದಾರೆ. ವಿಶ್ವಾಸ ಕಳೆದುಕೊಂಡ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಧಿಕ ಬಡ್ಡಿ: ₹ 1 ಲಕ್ಷ ಠೇವಣಿಗೆ ಪ್ರತಿ ತಿಂಗಳು ₹ 25 ಸಾವಿರ ಬಡ್ಡಿ ನೀಡಲಾಗುವುದು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ನೂರಾರು ಜನರು ಹಣ ತೊಡಗಿಸಿದ್ದಾರೆ. ಪ್ರಭಾವಿಗಳು, ಶಿಕ್ಷಕರು, ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರೂ ಇದ್ದಾರೆ ಎಂಬ ಮಾಹಿತಿಯಿದೆ. ಮೊದಲು ₹25 ಸಾವಿರ ಬಡ್ಡಿ ನೀಡುವುದಾಗಿ ಹಣ ಪಡೆದವರು ಈಗ ₹ 20 ಸಾವಿರ ನೀಡುವುದಾಗಿ ಹೇಳುತ್ತಿದ್ದಾರೆ. ಬಹಳಷ್ಟು ಜನರಿಗೆ ಬಡ್ಡಿ–ಅಸಲು ನೀಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಕೆಲವರು ತಿಳಿಸಿದರು.

ಒಂದು ವರ್ಷದಿಂದ ವ್ಯವಹಾರ ನಡೆದಿದ್ದು, ಹಣ ತೊಡಗಿಸಿದ ಕೆಲವರಿಗೆ ನಿಯತ್ತಾಗಿ ಬಡ್ಡಿ ಪಾವತಿಸಲಾಗಿದೆ. ಆದರೆ ಅನುಮಾನಗೊಂಡ ಕೆಲವರು, ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಕಳೆದ ವರ್ಷ ಪಟ್ಟಣದ ಮೂನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಹಣಕಾಸಿನ ಟ್ರೇಡಿಂಗ್ ನಡೆಸುತ್ತಿದ್ದ ಪ್ರಮುಖ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವುದು ಠೇವಣಿ ಇರಿಸಿದವರನ್ನು ಕಂಗಾಲಾಗಿಸಿದೆ. ಇಷ್ಟೊಂದು ಹೆಚ್ಚಿನ ಬಡ್ಡಿ ಹೇಗೆ ನೀಡುತ್ತೀರಿ ಎಂದು ಠೇವಣಿದಾರರು ಕೇಳಿದ್ದಕ್ಕೆ ‘ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ತೊಡಗಿಸಲಾಗಿದ್ದು, ಅತ್ಯಧಿಕ ಲಾಭ ಬರುತ್ತದೆ. ಅದನ್ನೇ ನಿಮಗೆ ವರ್ಗಾಯಿಸುತ್ತಿದ್ದೇವೆ’ ಎಂದು ಹೇಳಿ ನಂಬಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಇಲ್ಲಿಯ ಪೊಲೀಸರು ಶನಿವಾರ ತರಬೇತಿ ಹೆಸರಿನಲ್ಲಿ ಅಧಿಕ ಬಡ್ಡಿ ನೀಡುವ ಪಕ್ಕಾ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಠೇವಣಿ ಇರಿಸಿದ ಮತ್ತು ಹಣ ಕಳೆದುಕೊಂಡ ಬಹಳಷ್ಟು ಜನರು ಶನಿವಾರ ಸಂಜೆ ಪೊಲೀಸ್ ಠಾಣೆಗೆ ಬಂದಿದ್ದು ಪೊಲೀಸರು ಅವರಿಂದಲೂ ಮಾಹಿತಿ ಸಂಗ್ರಹಿಸಿದರು.

ಅದೇ ರೀತಿ ಪಟ್ಟಣದಲ್ಲಿ ಇನ್ನೂ ಕೆಲವರು ಅಧಿಕ ಬಡ್ಡಿ ಆಸೆ ತೋರಿಸಿ ಕೆಲವೇ ದಿನಗಳಲ್ಲಿ ಹಣ ದ್ವಿಗೂಳಿಸುವುದಾಗಿ ನಂಬಿಸಿ ಇದೇ ರೀತಿ ವ್ಯವಹಾರಕ್ಕೆ ನಡೆಸುತ್ತಿದ್ದು, ಕೋಟ್ಯಂತರ ಹಣ ಸಂಗ್ರಹಿಸಿದ್ದಾರೆ. ಆದರೆ ಠೇವಣಿ ಇರಿಸಿದವರ ಬಳಿ ಅಧಿಕೃತ ದಾಖಲೆಗಳು ಇಲ್ಲ. ಅವರ ವಿರುದ್ಧ ದೂರು ಬಂದಿಲ್ಲ ಎನ್ನಲಾಗಿದೆ.

ಹಣ ದ್ವಿಗುಣ ಮತ್ತು ಅತ್ಯಧಿಕ ಬಡ್ಡಿ ನೀಡುವ ನೆಪದಲ್ಲಿ ಕೆಲ ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದಿದ್ದ ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಬಹಳಷ್ಟು ಅಮಾಯಕರು ಹಣ ಕಳೆದುಕೊಂಡಿರುವ ಘಟನೆಗಳು ನಡೆದಿದ್ದರೂ ಅಂಥದ್ದೇ ಪ್ರಕರಣಗಳು ಮತ್ತೆ ಮುಂದುವರಿದಿದ್ದರೂ ಕಡಿವಾಣ ಬಿದ್ದಿಲ್ಲ ಎಂಬುದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪಿಎಸ್ಐ ಹನುಮಂತಪ್ಪ ತಳವಾರ, ‘ಹಣ ಕಳೆದುಕೊಂಡಿರುವುದಾಗಿ ಹೇಳಿದ ಕೆಲವರು ಶನಿವಾರ ಠಾಣೆಗೆ ಬಂದಿದ್ದು, ಭಾನುವಾರ ದಾಖಲೆಗಳೊಂದಿಗೆ ಪುನಃ ಬರುತ್ತೇವೆ ಎಂದು ಹೋಗಿದ್ದಾರೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-35-1303208462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.