ಕುಷ್ಟಗಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ಬಸವ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕರಾದ ಕೆ.ಶರಣಪ್ಪ, ಅಮರೇಗೌಡ ಬಯ್ಯಾಪುರ, ಹಸನಸಾಬ್ ದೋಟಿಹಾಳ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ ಇತರರು ಉಪಸ್ಥಿತರಿರುವರು. ತಾಲ್ಲೂಕು ಕಸಾಪ ಅಧ್ಯಕ್ಷ ಲಂಕೆಪ್ಪ ವಾಲೀಕಾರ ಅಧ್ಯಕ್ಷತೆ ವಹಿಸುವರು.

ಸಂಸ್ಥಾಪನಾ ದಿನಾಚರಣೆಗೆ ಸಂಬಂಧಿಸಿದ ಆಮಂತ್ರಣ ಪತ್ರಿಕೆಯಲ್ಲಿ ಸುಮಾರು 60-70 ಅತಿಥಿಗಳ ಹೆಸರುಗಳು ಸೇರಿ ಸುಮಾರು ನೂರರಷ್ಟು ಹೆಸರುಗಳು ಇರುವುದು ಅಚ್ಚರಿಗೆ ಕಾರಣವಾಗಿದೆ. ಇಷ್ಟೊಂದು ದೊಡ್ಡ ಪಟ್ಟಿ ತಯಾರಿಸುವಲ್ಲಿ ಪರಿಷತ್ತು ಕಸರತ್ತು ನಡೆಸಿರುವಂತಿದೆ.

ಅಲ್ಲದೆ ಬಸವ ಭವನದ ವೇದಿಕೆ ತೀರಾ ಸಣ್ಣದಿದ್ದು ಸುಮಾರು ಹತ್ತು ಹದಿನೈದು ಜನರಿಗೆ ಮಾತ್ರ ಸ್ಥಳಾವಕಾಶವಾಗುತ್ತದೆ. ಹೀಗಿರುವಾಗ ಇಷ್ಟೆಲ್ಲ ಅತಿಥಿಗಳನ್ನು ಕಸಾಪ ಪದಾಧಿಕಾರಿಗಳು ಎಲ್ಲಿ ಕೂಡಿಸುತ್ತಾರೊ ಎನ್ನುವುದು ತಿಳಿದಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-35-2003076837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.