ಕುಷ್ಟಗಿ: ನೈರ್ಮಲ್ಯ, ಪರಿಸರ ಸ್ವಚ್ಛತೆ ವಿಚಾರದಲ್ಲಿ ಮಾದರಿಯಾಗಬೇಕಿದ್ದ ಮಿನಿ ವಿಧಾನಸೌಧ ಮಾಲಿನ್ಯ ಮುಕ್ತ ಆಗದಿರುವುದು ಕಂಡುಬಂದಿದೆ.

ತಹಶೀಲ್ದಾರ್, ಕಂದಾಯ ಇಲಾಖೆ ಇತರೆ ಕಚೇರಿಗಳು, ಉಪ ಖಜಾನೆ, ಉಪ ನೋಂದಣಿ ಇತರೆ ಇಲಾಖೆಗಳನ್ನು ಒಳಗೊಂಡ ಸರ್ಕಾರಿ ಕಚೇರಿಗಳ ಸಂಕೀರ್ಣ ಇದಾಗಿದ್ದು ಒಳ ಮತ್ತು ಹೊರ ಆವರಣದಲ್ಲಿ ಕಸ ವಿವಿಧ ರೀತಿಯ ತ್ಯಾಜ್ಯ ಸಂಗ್ರಹಗೊಂಡು ಮಲೀನವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿವಿಧ ಇಲಾಖೆಗಳ ಕಚೇರಿ ಕೆಲಸಗಳಿಗಾಗಿ ನಿತ್ಯ ನೂರಾರು ಜನರು ಮಿನಿ ವಿಧಾನಸೌಧಕ್ಕೆ ಬಂದು ಹೋಗುತ್ತಾರೆ. ಜೊತೆಗೆ ಬಹಳಷ್ಟು ಸಂಖ್ಯೆ ಸರ್ಕಾರಿ ಸಿಬ್ಬಂದಿಯೂ ಇರುತ್ತಾರೆ. ಬಂದವರು ಕಚೇರಿಯಲ್ಲಿರುವವರೆಲ್ಲರೂ ಮಾಲಿನ್ಯ ಸಂಗ್ರಹಕ್ಕೆ ಕಾರಣರಾಗಿದ್ದಾರೆ. ಕಚೇರಿ ಒಳಗಿನ ತ್ಯಾಜ್ಯವನ್ನೆಲ್ಲ ತಂದು ಸೌಧದ ಮಧ್ಯೆ ಇರುವ ಖಾಲಿ ಜಾಗದಲ್ಲಿ ಚೆಲ್ಲುವುದು ಸಾಮಾನ್ಯ ಸಂಗತಿ. ಆದರೆ ಇಂಥ ಅವ್ಯವಸ್ಥೆ ಸರಿಪಡಿಸುವ ಬದಲು ಸಂಬಂಧಿಸಿದ ಅಧಿಕಾರಿಗಳು ನುಣುಚಿಕೊಳ್ಳುವುದೇ ಹೆಚ್ಚು ಎನ್ನಲಾಗಿದೆ.

ವಿವಿಧ ರೀತಿಯ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿರುವುದು ಕಣ್ಣಿಗೆ ರಾಚುತ್ತಿದೆ. ಜನರು, ಸಿಬ್ಬಂದಿ ಪಾನ್ಬೀಡಾ, ಗುಟ್ಕಾ ಖಾಲಿ ಚೀಟುಗಳನ್ನು ಬಿಸಾಡಿದ್ದಾರೆ. ಅಲ್ಲದೆ ಸಾರ್ವಜನಿಕರು ಉಗುಳಿರುವ ಕಲೆಗಳು ಕಂಡುಬರುತ್ತವೆ. ಕಚೇರಿಗಳ ಒಳ ಹೊರ ಆವರಣಗಳನ್ನು ಸ್ವಚ್ಛ ವಾಗಿರಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಗಮನಹರಿಸಿಲ್ಲ. ಕಸ ಹೆಚ್ಚಾದರೆ ಅಲ್ಲೆ ಬೆಂಕಿ ಹಚ್ಚುತ್ತಾರೆಯೆ ಹೊರತು ಅದನ್ನು ವಿಲೇವಾರಿ ಮಾಡುವುದಿಲ್ಲ ಎಂಬ ಆರೋಪ ಕೇಳಿಬಂದಿತು.

ಉಪ ನೋಂದಣಿ, ಆಧಾರ್ ನೋಂದಣಿ ಕೇಂದ್ರದ ಕೊಠಡಿಗಳ ಬಳಿಯಂತೂ ಇಡಿ ಕಟ್ಟಡ ಹೊಲಸಿನ ಆಗರವಾಗಿದೆ. ಸೌಧದ ಮೇಲೆ ಕಸ ಸಂಗ್ರಹವಾಗಿದ್ದು ಮಳೆ ನೀರು ಹರಿಯದೆ ಅಲ್ಲೇ ನಿಲ್ಲುತ್ತದೆ, ಇನ್ನು ವಿಧಾನಸೌಧದ ಮುಂದಿನ ರಸ್ತೆಯಲ್ಲಿ ಕಸ ಸಂಗ್ರಹವಾಗಿದ್ದರೂ ಪುರಸಭೆಯವರು ವಿಲೇವಾರಿ ಮಾಡದೆ ಬಿಟ್ಟಿದ್ದಾರೆ.ಮಿನಿವಿಧಾನ ಸೌಧದ ಸುತ್ತಲಿನ ಗೋಡೆಗಳೇ ಸಾರ್ವಜನಿಕರ ಮೂತ್ರ ವಿಸರ್ಜಿಸುವ ತಾಣಗಳಾಗಿದ್ದು ಮೂಗುಮುಚ್ಚಿಕೊಂಡು ಓಡಾಡುವಂತಾಗಿದ್ದರೂ ಕೇಳುವವರಿಲ್ಲ ಎಂದು ಸಾರ್ವಜನಿಕರಾದ ಬಸವರಾಜ ಮನ್ನಾಪುರ, ವೀರಭದ್ರಪ್ಪ ಇತರರು ಅತೃಪ್ತಿ ಹೊರಹಾಕಿದರು.

ತಾಲ್ಲೂಕು ಮಟ್ಟದ ಆಡಳಿತ ಸೌಧದ ಪರಿಸರವೇ ಹೊಲಸಿನ ಆಗರವಾಗಿದೆ. ಇನ್ನು ಅಧಿಕಾರಿಗಳು ಇತರೆ ಕಡೆಗಿನ ಸ್ವಚ್ಛತೆ ಬಗ್ಗೆ ಗಮನರಹರಿಸುತ್ತಾರೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವೆ?.

-ಹನುಮೇಶ ಶಾಖಾಪುರ,ರೈತ ಮುಖಂಡ

ಕಚೇರಿ ಸಂಕೀರ್ಣ ಅನಾಥ ಸೌಧ !

ಮಿನಿ ವಿಧಾನಸೌಧದ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಜವಾಬ್ದಾರಿ ಯಾರದು? ಈ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ. ಕಾರಣ ಇಷ್ಟೆ ಯಾರನ್ನೇ ಕೇಳಿದರೂ 'ಏ ಇಲ್ಲಬಿಡ್ರಿ ಅದು ನಮ್ಮ ಕಚೇರಿ ಮುಂದಿನದಲ್ಲ' ಎಂಬ ಸಿದ್ಧ ಉತ್ತರ ಬರುತ್ತದೆ.

ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಹೇಳಿದ್ದೂ ಅದನ್ನೇ. ಮಿನಿ ವಿಧಾನಸೌಧದಲ್ಲಿ ಅನೇಕ ಕಚೇರಿಗಳಿವೆ, ನಮ್ಮ ಕಚೇರಿ ಮುಂದೆ ಸ್ವಚ್ಛ ಇದೆ. ತಮ್ಮ ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವ ಜವಾಬ್ದಾರಿ ಇತರೆ ಕಚೇರಿಗಳಿಗೆ ಸೇರಿರುತ್ತದೆ ಎಂದು ಹೇಳಿ ಸಾಗಹಾಕಿದರು. ಕಚೇರಿ ಛಾವಣಿಯ ಮೇಲೆಯೂ ಕಸ ಸಂಗ್ರಹವಾಗಿದೆ. ನೀರು ನಿಂತು ಕಟ್ಟಡಕ್ಕೆ ಹಾನಿಯಾಗುತ್ತಿದ್ದರೂ ಯಾವೊಬ್ಬ ಇಲಾಖೆಯವರೂ ಗಮನಹರಿಸದಿರುವುದು ಅಚ್ಚರಿ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.