ಕುಷ್ಟಗಿ: ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅನುಮತಿ ನೀಡದಿರುವ ಜಾಗದಲ್ಲಿ ಗುರುತಿಸಲಾಗಿರುವ ಅನಧಿಕೃತ ನಿವೇಶನಗಳಿಗೆ ಅಧಿಕೃತ ದಾಖಲೆ ನೀಡುವ ಮೂಲಕ ಇಲ್ಲಿಯ ಪುರಸಭೆ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂದು ದೂರಲಾಗಿದೆ.

ಈ ವಿಷಯ ಕುರಿತು ಪಟ್ಟಣದ ಕಾಂಗ್ರೆಸ್ ಮುಖಂಡ ಮಂಜುನಾಥ ಕಟ್ಟಿಮನಿ ಎಂಬುವವರು ಲೋಕಾಯುಕ್ತಕ್ಕೆ ಹಾಗೂ ಜಿಲ್ಲಾಧಿಕಾರಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ಅಕ್ರಮಕ್ಕೆ ನೆರವಾಗಿರುವ ಪುರಸಭೆಯ ಹಾಲಿ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಮತ್ತು ವಿಷಯ ನಿರ್ವಾಹಕ ಶಾಂತಪ್ಪ ಭೂ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಭ್ರಷ್ಟಾಚಾರ ನಡೆಸಿದ್ದು ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?: ಪಟ್ಟಣದ 5ನೇ ವಾರ್ಡ್ನಲ್ಲಿ ಸಿದ್ದಣ್ಣ ಪಟ್ಟಣಶೆಟ್ಟಿ ಎಂಬುವವರಿಗೆ ಸೇರಿದ 14/1 ಸರ್ವೆ ಸಂಖ್ಯೆಯಲ್ಲಿ 2 ಎಕರೆ 39 ಗುಂಟೆ ಪೈಕಿ 1.24 ಎಕರೆ ಗುಂಟೆ ಪ್ರದೇಶ ವಸತಿ ಉದ್ದೇಶಕ್ಕೆ ಪರಿವರ್ತನೆಗೊಂಡಿತ್ತು. ಈ ಪ್ರದೇಶದಲ್ಲಿ ರಚಿಸಲಾಗಿದ್ದ 34 ನಿವೇಶನಗಳಿಗೆ ಮಾತ್ರ ನಗರ ಮತ್ತು ಗ್ರಾಮಾಂತರ ಯೋಜನೆ ಸಹಾಯಕ ನಿರ್ದೇಶಕರು ಅನುಮೋದನೆ ನೀಡಿದ್ದರು. ಈ ವಸತಿ ವಿನ್ಯಾಸಕ್ಕೆ ಹೊಂದಿಕೊಂಡಿರುವ 1.15 ಎಕರೆ ಗುಂಟೆ ಜಮೀನನ್ನು ಉಳಿದ ಪ್ರದೇಶ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಗುರುತಿಸಿರುವುದು ನಕ್ಷೆಯಲ್ಲಿದೆ.

ಉಳಿದ ಪ್ರದೇಶದಲ್ಲಿ ನಿವೇಶನ ಮಾಲೀಕರು ಅನಧಿಕೃತವಾಗಿ 22 ನಿವೇಶನಗಳನ್ನು ಗುರುತಿಸಿದ್ದು, ಅವು ಪುರಸಭೆ ದಾಖಲೆಯಲ್ಲಿ ಸೇರ್ಪಡೆಯಾಗಿವೆ. ಆದರೆ ಅನುಮೋದನೆಗೊಳ್ಳದ ಮತ್ತು ಉಳಿದ ಪ್ರದೇಶ ಎನ್ನಲಾಗಿರುವ ಪ್ರದೇಶದಲ್ಲಿನ 22 ನಿವೇಶನಗಳು ಅಕ್ರಮವಾಗಿರುವುದು, ಒಟ್ಟು 56 ನಿವೇಶನಗಳಲ್ಲಿ 6 ನಿವೇಶನಗಳು ಉದ್ಯಾನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗದಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಹೀಗಿದ್ದರೂ ಮುಖ್ಯಾಧಿಕಾರಿ ಮತ್ತು ವಿಷಯ ನಿರ್ವಾಹಕ ಅಧಿಕೃತ ದಾಖಲೆ ನೀಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-35-901201302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.