ಕುಷ್ಟಗಿ: ಪಟ್ಟಣದ ಸಮೀಪದಲ್ಲಿರುವ ನಿಡಶೇಸಿ ಕೆರೆ ಮತ್ತು ಸಾರ್ವಜನಿಕ ಉದ್ಯಾನ ಪುನಶ್ಚೇತನಕ್ಕೆ ಇಲ್ಲಿಯ ಸಮಾನ ಮನಸ್ಕ ಪರಿಸರ ಪ್ರೇಮಿಗಳು ಆಸಕ್ತಿ ವಹಿಸಿದ್ದು ವಿವಿಧ ಇಲಾಖೆಗಳೂ ಕೈಜೋಡಿಸಲು ಮುಂದಾಗಿದ್ದು ಇಡಿ ಪ್ರದೇಶವನ್ನು ಸುಂದರ ವಿಹಾರ ತಾಣವನ್ನಾಗಿಸಲು ಮುಂದಾಗಿದ್ದಾರೆ.

ಗಜೇಂದ್ರಗಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಉದ್ಯಾನ ಹಾಳು ಬಿದ್ದು ಜನ ಶಪಿಸುವಂತಾಗಿತ್ತು. ಕೆಲ ದಿನಗಳಿಂದಲೂ ಪಟ್ಟಣದ ಗೆಳೆಯರ ಬಳಗದವರು ಇಡಿ ಉದ್ಯಾನ ಸ್ವಚ್ಛಗೊಳಿಸಲು ಶ್ರಮದಾನ ನಡೆಸುತ್ತಿದ್ದಾರೆ. ಅದಕ್ಕೆ ಕೊರಡಕೇರಾ ಗ್ರಾಮ ಪಂಚಾಯಿತಿಯೂ ಕೈಜೋಡಿಸಿದೆ. ಅಷ್ಟೇ ಅಲ್ಲದೆ ಪರಿಸರ ಪ್ರಿಯರ ಆಸಕ್ತಿ, ಶ್ರಮದಾನ ನಡೆಸಿದ್ದನ್ನು ಗಮನಿಸಿದ ಸಣ್ಣ ನೀರಾವರಿ ಇಲಾಖೆ ಉದ್ಯಾನದ ಹೊರಗಿನ ಜಾಗದಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ಸ್ವಚ್ಛಗೊಳಿಸಿದೆ. ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆಲಸಗಳನ್ನು ನಿರ್ವಹಿಸುವ ಮೂಲಕ ಕೆರೆ ಪ್ರದೇಶ ಮತ್ತು ಉದ್ಯಾನ ಸಂರಕ್ಷಣೆ ಹಾಗೂ ಜನಾಕರ್ಷಣೆ ಕೇಂದ್ರವನ್ನಾಗಿಸಲು ಆಸಕ್ತಿ ವಹಿಸಿದ್ದಾರೆ.

ಈ ವಿಷಯ ತಿಳಿದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ್ ಅವರೂ ಮಂಗಳವಾರ ಶ್ರಮದಾನ ನಡೆಯುತ್ತಿದ್ದ ಉದ್ಯಾನ ಮತ್ತು ಕೆರೆಗೆ ಭೇಟಿ ನೀಡಿದ್ದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾದರಿಯಾಗಿರುವ ಯುವಕರು, ಗೆಳೆಯರ ಬಳಗ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ಶ್ರೀಶೈಲ ಪೊಲೀಸಿ ಅವರ ಕೆಲಸಕಾರ್ಯಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಮುದಾಯದ ಸಹಕಾರದೊಂದಿಗೆ ವಿವಿಧ ಇಲಾಖೆಗಳೂ ಕೈಜೋಡಿಸಿದರೆ ಉದ್ಯಾನ ಮತ್ತು ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಈ ವಿಷಯದಲ್ಲಿ ಜನರಲ್ಲಿ ಪರಿಸರ ಮತ್ತು ಜಲಸಂರಕ್ಷಣೆ ವಿಷಯದಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಮಾ.22ರಂದು ವಿಶ್ವ ಜಲ ದಿನ ಇದ್ದು ಮಾ.25ಕ್ಕೆ ಕೆರೆ ತಟದಲ್ಲಿಯೇ ಈ ವಿಷಯವಾಗಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ’ ಎಂದು ಸಲಹೆ ನೀಡಿದರು. ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಸಸಿಗಳನ್ನು ನಾಟಿ ಮಾಡುವುದಾಗಿ ಹೇಳಿದರು.

ಅಲ್ಲದೆ ಕೆರೆ ತುಂಬಿಸುವ ಯೋಜನೆಯಿಂದಾಗಿ ವರ್ಷಪೂರ್ತಿ ನಿಡಶೇಸಿ ಕೆರೆ ನೀರಿನಿಂದ ಭರ್ತಿಯಾಗಿರುತ್ತದೆ. ಹಾಗಾಗಿ ಇಲ್ಲಿ ದೋಣಿ ವಿಹಾರಕ್ಕೂ ವ್ಯವಸ್ಥೆ ಮಾಡುವುದು ಉತ್ತಮ. ಉದ್ಯಾನ ಪುನಶ್ಚೇತನಗೊಳಿಸಿದರೆ ಶಾಲಾ ಮಕ್ಕಳು, ಸಾರ್ವಜನಿಕರು, ಮಹಿಳೆಯರಿಗೆ ವಿಹರಿಸಲು ಅನುಕೂಲ ಕಲ್ಪಿಸುವ ವಿಚಾರವೂ ಈ ಸಂದರ್ಭದಲ್ಲಿ ಪ್ರಸ್ತಾಪವಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಸಿಪಿಐ ವಿಶ್ವನಾಥ ಹಿರೇಗೌಡರ ಸೇರಿದಂತೆ ಅರಣ್ಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪರಿಸರ ಪ್ರಿಯ ಗೆಳೆಯರ ಬಳಗದವರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-35-1077977309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.