ಕುಷ್ಟಗಿ: ವಸತಿ ಬಡಾವಣೆ ಎಂದರೆ ಅಲ್ಲಿ ನೀರು, ನೈರ್ಮಲ್ಯ, ಉದ್ಯಾನ ಇತರೆ ಅಗತ್ಯ ಸೌಲಭ್ಯಗಳು ಇರಬೇಕು. ಭೂ ಪರಿವರ್ತಿಸಿದ ಮಾಲೀಕರು ಯಾವುದೇ ಅಭಿವೃದ್ಧಿ ನಿರ್ವಹಿಸದೆ ಬಡಾವಣೆ ನಿರ್ಮಿಸಿದ್ದಾರೆ. ಪುರಸಭೆಯವರೂ ಕಣ್ಣು ಹಾಯಿಸಿಲ್ಲ. ಹಾಗಾಗಿ ಸದರಿ ಪ್ರದೇಶದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದ್ದು ರೋಗರುಜಿನಗಳ ತಾಣವಾಗಿದೆ.

ಇದು ಪಟ್ಟಣದ 7ನೇ ವಾರ್ಡ್ನ ನಿರ್ಮಲಾ ಪಾಟೀಲ ಎಂಬುವವರ ಬಡಾವಣೆಯಲ್ಲಿ ಕಂಡುಬರುವ ದೃಶ್ಯ. ಪುರಸಭೆಯಿಂದ ಜಿಲ್ಲಾಡಳಿತದವರೆಗೂ ಪದೇಪದೇ ಮನವಿ ಸಲ್ಲಿಸುತ್ತ ಗೋಗರೆಯುತ್ತ ಬಂದಿದ್ದರೂ ಅಭಿವೃದ್ಧಿ ಕಂಡಿಲ್ಲ ಎಂಬ ಗೋಳು ಅಲ್ಲಿಯ ನಿವಾಸಿಗಳದ್ದು.

ಪಟ್ಟಣದ ಹೃದಯಭಾಗದಲ್ಲಿರುವ ಇಡೀ ಬಡಾವಣೆಯ ಈ ಪ್ರದೇಶದಲ್ಲಿ ಒಂದಿಂಚೂ ಜಾಗ ಇಲ್ಲದಂತೆ ಮನೆಗಳು ನಿರ್ಮಾಣಗೊಂಡಿವೆ. ಇಲ್ಲಿ ಮಣ್ಣಿನ ರಸ್ತೆಗಳೇ ಗತಿ. ಇನ್ನು ಚರಂಡಿಗಳಂತೂ ಇಲ್ಲವೇ ಇಲ್ಲ. ಬಚ್ಚಲು ನೀರು ರಸ್ತೆಯಲ್ಲೇ ನಿಲ್ಲುತ್ತದೆ. ಮಳೆ ಬಂದರಂತೂ ಸಮಸ್ಯೆ ಮಿತಿಮೀರುತ್ತದೆ. ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಪ್ರತಿಯೊಬ್ಬರೂ ಕೊಳಚೆಯಲ್ಲಿಯೇ ನಡೆದಾಡಬೇಕು. ವಾಹನಗಳೂ ಅದರಲ್ಲೇ ತಿರುಗಾಡಿ ಮತ್ತಷ್ಟೂ ಗಲೀಜಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರಾದ ಹನುಮೇಶ, ಬಸವರಾಜ ಇತರರು.

ಆಂಜನೇಯ ದೇವಸ್ಥಾನ ಒಳಗೊಂಡಂತೆ ಬಡಾವಣೆಯಲ್ಲಿ ಉದ್ಯಾನ, ನಾಗರಿಕ ಬಳಕೆ ಜಾಗ ಮೀಸಲಾಗಿದೆ. ಆದರೆ ದೇವಸ್ಥಾನದ ಸುತ್ತಲೂ ಕೆಲ ವ್ಯಕ್ತಿಗಳು ತಮ್ಮ ಇಷ್ಟದಂತೆಯೇ ದೇಣಿಗೆ ಸಂಗ್ರಹಿಸಿ ಉದ್ಯಾನ ಜಾಗದಲ್ಲಿಯೇ ಆವರಣಗೋಡೆಯನ್ನೂ ನಿರ್ಮಿಸಿದ್ದಾರೆ. ಹಾಗಾಗಿ ನೀರು ಹರಿದುಹೋಗುವುದಕ್ಕೆ ದಾರಿ ಇಲ್ಲದಂತಾಗಿದ್ದು ರಸ್ತೆಯಲ್ಲಿಯೇ ಮಡುಗಟ್ಟುತ್ತದೆ. ಸೊಳ್ಳೆಗಳ ಸಂತತಿ ಹೆಚ್ಚಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಅಳಲು ಅಲ್ಲಿಯ ನಿವಾಸಿಗಳ ಆರೋಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-35-1337230157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.