ಕೊಪ್ಪಳ: ‘ಹೋರಾಟಕ್ಕೆ ಸಂದ ಜಯವೇ ಕಾರ್ಮಿಕರ ದಿನಾಚರಣೆ ಸಂಭ್ರಮಕ್ಕೆ ಕಾರಣ’ ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ ಶೀಲವಂತರ ಹೇಳಿದರು.

ತಾಲ್ಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಗರದ ಶಾರದಾ ಟಾಕೀಸ್ ಹಿಂದಿನ ರಸ್ತೆಯಲ್ಲಿರುವ ತನ್ನ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಕಾರ್ಮಿಕ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಾರ್ಮಿಕರ ಹೋರಾಟ 1880ರಲ್ಲಿ ಒಂದು ಕಡೆ ಕೆನಡಾ ಮತ್ತೊಂದು ಕಡೆ ಚಿಕಾಗೊದಲ್ಲಿ ತೀವ್ರತೆ ಪಡೆದುಕೊಂಡಿತ್ತು. ಚಿಕಾಗೊದಲ್ಲಿ ನಡೆದ ಹೋರಾಟ ಹಿಂಸಾತ್ಮಕವಾಗಿ ಪರಿವರ್ತನೆ ಆಯಿತು. ಅದರಲ್ಲಿ ಸಾಕಷ್ಟು ಕಾರ್ಮಿಕರು ಬಲಿಯಾಗಿ ರಕ್ತದ ಕೋಡಿಯೇ ಹರಿಯಿತು’ ಎಂದು ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು.

ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ಮಾತನಾಡಿದರು.

ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್.ಎ.ಗಫಾರ್, ಸಂಘದ ಅಧ್ಯಕ್ಷ ಮಹೆಬೂಬ್ ಎಸ್.ಮಣ್ಣೂರ, ಪ್ರಮುಖರಾದ ಶಹಾಬುದ್ದೀನ್ ಜವಳಗೇರ, ಜಾಫರ್ ಕುರಿ, ಉಪಾಧ್ಯಕ್ಷ ರಾಮಣ್ಣ ಬಣಕಾರ, ಸಿದ್ದಲಿಂಗಪ್ಪ ಪಲ್ಲೇದ, ಮೌಲಾ ಹುಸೇನ್ ಹಣಗಿ, ಮಹೆಬೂಬ್ ಬಾಳೆಹಣ್ಣು, ದೇವಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-35-328634116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.