ಕೊಪ್ಪಳ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತಾಲ್ಲೂಕು ಸಮಿತಿಯ ವತಿಯಿಂದ ನಗರದಲ್ಲಿ ಕಾರ್ಮಿಕರ ದಿನದ ಅಂಗವಾಗಿ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಮಂಡಿಸಿತು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮರು ಜಾರಿ ಮಾಡಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಲು ಹಾಗೂ ವೈಜ್ಞಾನಿಕವಾಗಿ ಕನಿಷ್ಠ ವೇತನ ಜಾರಿ ಮಾಡಬೇಕು, ಗುತ್ತಿಗೆ ಕಾರ್ಮಿಕರ ಕೆಲಸ ಕಾಯಂ ಮಾಡಬೇಕು, ಎಲ್ಲಾ ಮಹಿಳಾ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಮತ್ತು ಬದುಕಲು ಯೋಗ್ಯ ಕೂಲಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ, ಅಂಗನವಾಡಿ ಸಂಘದ ಅನ್ನಪೂರ್ಣಮ್ಮ ಬೃಹನ್ಮಠ, ಬಿಸಿಯೂಟ ಸಂಘಟನೆಯ ಶಂಕ್ರಮ್ಮ ಕಿನ್ನಾಳ, ಪಂಚಾಯಿತಿ ನೌಕರರ ಸಂಘದ ಅಮರೇಶ ಡಾಣಿ, ಕೊಟ್ರೇಶ್ ಕೊಪ್ಪಳ, ಕೃಷಿ ಕೂಲಿಕಾರರ ಸಂಘದ ಸುಂಕಪ್ಪ ಗದಗ, ಕಿರ್ಲೋಸ್ಕರ್ ಕಾರ್ಮಿಕ ಸಂಘದ ಕಂಠಿ ಬಸವರಾಜ, ಶರಣಪ್ಪ, ರವಿ ಜೋಶಿ, ರಾಮಕೃಷ್ಣ, ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಮುಖಂಡ ಗಾಳೆಪ್ಪ ಟಪಾಲ್, ಮಂಜುನಾಥ ಬಂಗಾಳಿ, ರಾಮಣ್ಣ, ಬಸವರಾಜ ಪೂಜಾರ, ಅಧ್ಯಕ್ಷ ಸೋಮಣ್ಣ ಬಿಸನಹಳ್ಳಿ. ಹುಸೇನಸಾಬ್ ನದಾಫ್, ಫಕೀರಮ್ಮ ಮಿರಗನತಂಡಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-35-1831389543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.