ಯಲಬುರ್ಗಾ: ತಾಲ್ಲೂಕಿನ ಮಕ್ಕಳ್ಳಿ ಗ್ರಾಮದ ಶಿವಾನಂದಮಠದ ಆವರಣದಲ್ಲಿ 80ನೇ ಮಾಸಿಕ ಶಿವಾನುಭವ ಹಾಗೂ ವಚನ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ವಚನಗಳು ಕೇವಲ ಸಾಹಿತ್ಯದ ಪ್ರಕಾರವಲ್ಲ. ಅವುಗಳು ಸಮಾಜದ ಸುಧಾರಣೆಗೆ, ಸಮುದಾಯಗಳ ಅಭ್ಯುದಯಕ್ಕಾಗಿ ರೂಪುಗೊಂಡ ತತ್ವ ಸಿದ್ಧಾಂತಗಳಾಗಿವೆ. ಅವುಗಳನ್ನು ಅಧ್ಯಯನ ಮಾಡಿ ಅವುಗಳಂತೆ ನಡೆದುಕೊಂಡಲ್ಲಿ, ನೆಮ್ಮದಿಯ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿಯೇ ವಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಗಣ್ಯರಾದ ನಿಂಗಪ್ಪ ಹಳ್ಳಿಕೇರಿ ಮಾತನಾಡಿ, ‘ಬಸವಣ್ಣನವರು ನಡೆ-ನುಡಿ ಹಾಗೂ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ’ ಎಂದರು.

ಶಿಕ್ಷಕ ನೀರುಪಾದಿ ಮನ್ನಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ವಚನ ಸಾಹಿತ್ಯದ ಕುರಿತ ಚಿಂತನೆಗಳು ಮತ್ತು ಶರಣ ಸಂಸ್ಕೃತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.

ಸೈನಿಕ ಹರ್ಷಾ ಕೋಗಿಲೆ, ಮಳಿಯಪ್ಪಯ್ಯ, ಶ್ರೀಕಾಂತಗೌಡ ಮಾಲಿಪಾಟೀಲ, ಈರಪ್ಪ ಕರೇಕುರಿ, ಬೆಟದಪ್ಪ ಸೂಜಿ, ಪಾಲಾಕ್ಷಿ ಪತ್ತಾರ, ಚಂದ್ರಶೇಖರ ಕೋಗಿಲೆ,ಶಂಕ್ರಪ್ಪ ಜವಳಗೇರಿ, ಅಲ್ಲೇಸಾಬ್ ನದಾಫ್, ದ್ಯಾಮಣ್ಣ ಕಮ್ಮಾರ, ಶರಣಪ್ಪ ಬಿಂಗಿ, ರುದ್ರಗೌಡ ಮಕ್ಕಳ್ಳಿ, ಶಂಕ್ರಪ್ಪ ಮೇಟಿ, ದೇವನಗೌಡ ಮಕ್ಕಳ್ಳಿ, ಶೇಖರಗೌಡ ಮಕ್ಕಳ್ಳಿ, ಶರಣಪ್ಪ ಹುಣಶಿಹಾಳ, ನಾಗನಗೌಡ ಮಾಲಿಪಾಟೀಲ್, ಮೇಘರಾಜ ತಳವಾರ ಸೇರಿ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-35-942337426

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.