ಕೊಪ್ಪಳ: ಅಂಗೈಯಲ್ಲಿ ಮೊಬೈಲ್ ಮೂಲಕವೇ ಜಗತ್ತಿನ ವಿದ್ಯಮಾನಗಳನ್ನು ಸುಲಭವಾಗಿ ತಿಳಿದುಕೊಳ್ಳುವಷ್ಟು ಮತ್ತು ಪುಸ್ತಕಗಳನ್ನು ಓದುವಷ್ಟು ಬೆಳೆದಿರುವ ತಂತ್ರಜ್ಞಾನದ ಈ ಕಾಲದಲ್ಲಿ ಪುಸ್ತಕ ಪ್ರೀತಿಯೂ ಹರಡಬೇಕು ಎನ್ನುವ ಕಾರಣಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿಯೂ ಅನುಷ್ಠಾನವಾಗಿದೆ. ಪ್ರಾಧಿಕಾರದ ಈ ಯೋಜನೆ ಜನರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸುವುದೇ ಎನ್ನುವುದು ಕುತೂಹಲ ಮೂಡಿಸಿದೆ.

2025ರ ಜನವರಿ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಕಿರು ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾಧಿಕಾರ ಆರಂಭಿಸಿತು. ರಾಜ್ಯದ ಎಲ್ಲ ಶಾಸಕರು ಹಾಗೂ ಸಂಸದರ ಮನೆಯಲ್ಲಿಯೂ ಇದನ್ನು ಅನುಷ್ಠಾನಕ್ಕೆ ಪ್ರಯತ್ನಿಸಿತು. ನಂತರ ಚಲನಚಿತ್ರ ನಟರು, ನಿರ್ಮಾಪಕರ ಮೂಲಕ ಅವರ ಅಭಿಮಾನಿಗಳಿಗೆ ಪುಸ್ತಕಗಳನ್ನು ಕೊಡಿಸಿ ಪುಸ್ತಕ ಪ್ರೀತಿ ಹರಿಡಿಸುವ ಪ್ರಯತ್ನ ಮಾಡಿತು. ಹಂತಹಂತವಾಗಿ ಈಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕವಿಗಳು, ಸಾಹಿತಿಗಳು, ಉಪನ್ಯಾಸಕರು, ಓದುವ ಆಸಕ್ತಿ ಉಳ್ಳವರ ಮನೆಗಳಲ್ಲಿ ‘ಮನೆಗೊಂದು ಗ್ರಂಥಾಲಯ’ ಆರಂಭಿಸಲಾಗಿದೆ.

ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ಜಿಲ್ಲೆಯಲ್ಲಿ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕನಿಷ್ಠ 50 ಮನೆಗಳಲ್ಲಿ ಈ ಪ್ರಯೋಗ ಮಾಡಲು ಮುಂದಾಗಿದ್ದು ಈಗಾಗಲೇ ಕುಷ್ಟಗಿಯಲ್ಲಿ ಐದು, ಕೊಪ್ಪಳದಲ್ಲಿ ಐದು, ಗಂಗಾವತಿಯಲ್ಲಿ ಎರಡು ಮತ್ತು ಕಾರಟಗಿ ತಾಲ್ಲೂಕಿನಲ್ಲಿ ನಾಲ್ಕು ಮನೆಗಳಲ್ಲಿ ಕಿರು ಗ್ರಂಥಾಲಯಗಳನ್ನು ಆರಂಭಿಸಲಾಗಿದೆ.

ಮನೆಮನೆಗಳಲ್ಲಿ ಗ್ರಂಥಾಲಯ ಆರಂಭಿಸುವುದರಿಂದ ಜನರಲ್ಲಿ ಓದುವ ಪ್ರೀತಿ ಹೆಚ್ಚಾಗುತ್ತದೆ. ಆ ಮನೆಯ ಸುತ್ತಮುತ್ತಲು ಇರುವ ಮಕ್ಕಳು, ವಯಸ್ಕರು ಹಾಗೂ ಹಿರಿಯರಲ್ಲಿ ಪುಸ್ತಕದ ಬಗ್ಗೆ ಒಲವು ಹೆಚ್ಚಾಗುತ್ತದೆ ಎನ್ನುವುದು ಪ್ರಾಧಿಕಾರದ ಆಶಯ. ಸರ್ಕಾರಿ ಕಾರ್ಯಕ್ರಮಗಳಲ್ಲಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಭೇಟಿಯಾದಾಗ ಅವರು ಹೂಗುಚ್ಛದ ಬದಲು ಪುಸ್ತಕಗಳನ್ನೇ ಕೊಡಬೇಕು ಎಂದು ಸರ್ಕಾರವೂ ಆದೇಶಿಸಿದೆ. ಇದು ಕೂಡ ಪುಸ್ತಕ ಓದುವ ಬಳ್ಳಿ ಹರಡಲು ಕಾರಣವಾಗುತ್ತದೆ.

‘ಮೊಬೈಲ್ ಹಾಗೂ ಸಾಮಾಜಿಕ ತಾಣಗಳ ಭರಾಟೆಯಿಂದಾಗಿ ಜನರಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಆದ್ದರಿಂದ ನಾನು ಎಲ್ಲಿಯೇ ಕಾರ್ಯಕ್ರಮಕ್ಕೆ ಹೋದಾಗ ಪುಸ್ತಕಗಳನ್ನು ಉಡುಗೊರೆ ನೀಡುತ್ತೇನೆ. ನನ್ನ ಸ್ನೇಹಿತರು ಹಾಗೂ ಆತ್ಮೀಯರು ಕಾರ್ಯಕ್ರಮ ಮಾಡಿದಾಗಲೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಹೇಳುತ್ತೇನೆ’ ಎಂದು ಮನೆಗೊಂದು ಗ್ರಂಥಾಲಯ ಆರಂಭಿಸಿರುವ ಕನ್ನಡ ಉಪನ್ಯಾಸಕ ಸಿದ್ದಲಿಂಗಪ್ಪ ಕೊಟ್ನೇಕಲ್ ಹೇಳಿದರು.

ಉತ್ತೇಜಿಸುವವರಿಗೆ ಸಿಗಲಿದೆ ಬಹುಮಾನ

ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಅದರ ಮಾಲೀಕನನ್ನು ಗೌರವಿಸಿ ಉತ್ತೇಜಿಸಲು ಪ್ರಾಧಿಕಾರವು ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಿಗೂ ನಾಲ್ಕು ಜನ ವಿದ್ವಾಂಸರ ಹೆಸರಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಸ್ಥಾಪಿಸಲು ಮುಂದಾಗಿದೆ.

ಕನ್ನಡದ ಮೊದಲ ಮಹಿಳಾ ಪ್ರಕಾಶಕಿ ನಂಜನಗೂಡು ತಿರುಮಲಾಂಬ, ಪುಸ್ತಕ ಪ್ರೀತಿಗೆ ಮತ್ತೊಂದು ಹೆಸರಾದ ಹಾ.ಮಾ. ನಾಯಕ, ಪುಸ್ತಕ ಪ್ರೇಮಿ ಪಿ.ಆರ್. ತಿಪ್ಪೇಸ್ವಾಮಿ ಮತ್ತು ತಲೆಮೇಲೆ ಹೊತ್ತುಕೊಂಡು ಮನೆಮನೆಗೆ ಪುಸ್ತಕಗಳನ್ನು ತಲುಪಿಸಿದ ಗಳಗನಾಥ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿಯನ್ನು ರಚಿಸಿದ್ದು ಅದರ ಸದಸ್ಯರೇ ನಿರ್ವಹಣೆ ನೋಡಿಕೊಳ್ಳುವರು.

ಮನೆಯಲ್ಲಿ ದೇವರ ಮನೆಗಳಿಗಿಂತ ಪುಸ್ತಕಾಲಯ ನಿರ್ಮಿಸಬೇಕು. ರಾಜ್ಯದಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
–ಮಾನಸ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ಆರಂಭಿಸಲಾಗಿದೆ. ಉಳಿದೆಡೆಯೂ ವಿಸ್ತರಿಸಿ ಒಟ್ಟು 50 ಮನೆಗಳಲ್ಲಿ ಗ್ರಂಥಾಲಯ ಮಾಡುವ ಗುರಿ ಇದೆ.
–ಜಿ.ಎಸ್.ಗೋನಾಳ, ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.