ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ನಗರ ಅಭಿವೃದ್ಧಿಗೆ ಯೋಜನೆ: ಶಾಸಕ ರಾಘವೇಂದ್ರ ಹಿಟ್ನಾಳ

₹5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ
Last Updated 7 ಏಪ್ರಿಲ್ 2022, 4:18 IST
ಅಕ್ಷರ ಗಾತ್ರ

ಕೊಪ್ಪಳ: ಅವಳಿ ನಗರಗಳಾದ ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ಬುಧವಾರ ಭಾಗ್ಯನಗರ ಪಟ್ಟಣದಲ್ಲಿ ವಿವಿಧ ಯೋಜನೆಯಡಿಯಲ್ಲಿ ₹5 ಕೋಟಿವೆಚ್ಚದ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ, ಬಾಲಕಿಯರ ವಸತಿ ನಿಲಯ, ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡ್ ಹಾಗೂ ಡಿಸ್ಟ್ರಿಕ್ ಅರ್ಲಿ ಇನ್ವೇನ್ಷನ್ ಸೆಂಟರ್ ಕಟ್ಟಡದ ಭೂಮಿಪೂಜೆ ಮತ್ತು ಗಂಗಾ ಕಲ್ಯಾಣ ಯೋಜನೆ ಅಡಿ 35 ಅರ್ಹ ಫಲಾನುಭವಿಗಳಿಗೆ ಪಂಪಸೆಟ್ ಮೋಟಾರು ಹಾಗೂ ಪೂರಕ ವಸ್ತುಗಳನ್ನು ವಿತರಿಸಿ ಮಾತನಾಡಿದರು.

ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ನಗರ ಹಾಗೂ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೇಸಿಗೆ ಪ್ರಾರಂಭಗೊಂಡಿದ್ದು ಯಾವುದೇ ಕಾರಣಕ್ಕೆ ನೀರಿನ ಅಭಾವ ಉಂಟಾಗದಂತೆ ನಗರಸಭೆ ಹಾಗೂ ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅವಶ್ಯಕತೆವಿದ್ದಲ್ಲೆ ತ್ವರಿತವಾಗಿ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆಗೆ ವಿಷೇಶ ಅನುದಾನ ಕಲ್ಪಿಸಲಾಗಿದೆ ಎಂದರು.

ನಗರ ಹಾಗೂ ಪಟ್ಟಣ ಸೌಂದರ್ಯಿಕರಣಕ್ಕೆ ವಿಷೇಶ ಅನುದಾನದಡಿಯಲ್ಲಿ ಕಾಮಗಾರಿ ಕೈಗೆತ್ತಿ ಕೊಂಡು ಶೀಘ್ರವಾಗಿ ಬೆಳೆಯುತ್ತಿರುವ ಪಟ್ಟಣವನ್ನು ಜನಸಂಖ್ಯೆ ಅನುಗುಣವಾಗಿ ಹೆಚ್ಚು ಅನುದಾನ ನೀಡಿ ತ್ವರಿತಗತಿಲ್ಲಿ ಅಭಿವೃದ್ಧಿ ಕಾಮಾಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಸರ್ಕಾರ ಎಲ್ಲ ವರ್ಗದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದು ಇದರ ಸದುಪಯೋಗ ಪಡೆದುಕೊಂಡು ತಮಗೆ ನೀಡಿರುವ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಮುಖಂಡರಾದಶಾಂತಣ್ಣ ಮುದಗಲ್, ಎಸ್.ಬಿ.ನಾಗರಳ್ಳಿ, ಜುಲ್ಲುಖಾದ್ರಿ, ಯಮನೂರಪ್ಪ ಕಬ್ಬೇರ, ಕಾಟನ್ ಪಾಷಾ, ಪ್ರಸನ್ನ ಗಡಾದ, ಉಮಾ ಜಿ. ಪಾಟೀಲ್, ಅಶೋಕ ಗೋರಂಟ್ಲಿ, ಮುಖಂಡರಾದ ಶ್ರೀನಿವಾಸ ಗುಪ್ತಾ, ಹೊನ್ನೂರು ಸಾಬ್, ಕೃಷ್ಣ ಇಟ್ಟಂಗಿ, ಮೆಹಬೂಬ್ ಅರಗಂಜಿ, ಅಜೀಮ್ ಅತ್ತರ್, ಬಸಯ್ಯ, ಶಿವರೆಡ್ಡಿ ಭೂಮಕ್ಕನವರ, ಜಾಕೀರ್ ಕಿಲ್ಲೆದಾರ, ಗವಿಸಿದ್ದಯ್ಯ ಹಿರೇಮಠ, ಎಂ.ಡಿ ಜಹೀರ್ ಅಲಿ, ಶಿವಕುಮಾರ ಪಾವಲಿಶೆಟ್ರ, ವಕ್ತಾರ ಅಕ್ಬರ್ ಪಾಷ ಪಲ್ಟನ್ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT