ಮುನಿರಾಬಾದ್: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮುನಿರಾಬಾದ್-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಹಿಟ್ನಾಳ ಕ್ರಾಸ್ ಹತ್ತಿರ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಬದಲಾವಣೆಯ ಮಾಹಿತಿಯ ಫಲಕಗಳಿಲ್ಲದೆ ಪ್ರವಾಸಿಗರು ಮತ್ತು ನಾಗರಿಕರು ಪರದಾಡುವಂತಾಗಿದೆ.

ಮೇಲ್ಸೇತುವೆ ಕಾಮಗಾರಿಯ ಕಾರಣ ಮುನಿರಾಬಾದ್-ಗಂಗಾವತಿ ರಾಜ್ಯ ಹೆದ್ದಾರಿಯ ಹಿಟ್ನಾಳ ಕ್ರಾಸ್ನಿಂದ ಹೊಸಹಳ್ಳಿಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ ಈ ಬಗ್ಗೆ ಮಾಹಿತಿ ಫಲಕ ಹಾಕದ ಕಾರಣ, ಗದಗ, ಕೊಪ್ಪಳ, ಬಾಗಲಕೋಟೆ, ಕುಷ್ಟಗಿಯ ಕಡೆಯಿಂದ ಹಾಗೂ ಬಳ್ಳಾರಿ, ಹೊಸಪೇಟೆ ಭಾಗದಿಂದ ಬಂದು ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ಹೋಗುವ ಭಕ್ತರು ಹಾಗೂ ಸಾರ್ವಜನಿಕರು ಮಾರ್ಗ ಬದಲಾವಣೆಯ ಮಾಹಿತಿ ಇಲ್ಲದೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಗುತ್ತಿಗೆದಾರರನ್ನು ಶಪಿಸುತ್ತ ವಾಪಸ್ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಸ್ತುತ ಹುಲಿಗೆಮ್ಮದೇವಿ ದೇವಸ್ಥಾನ, ಅಂಜನಾದ್ರಿ ಬೆಟ್ಟ, ಗಂಗಾವತಿಯ ಕಡೆ ಹೋಗುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಹಿಟ್ನಾಳ ಟೋಲ್ ಗೇಟ್ ಬಳಿ ಎಡಕ್ಕೆ ತಿರುಗಿ, ಹಿಟ್ನಾಳ ಗ್ರಾಮದ ಮೂಲಕ ಮುನಿರಾಬಾದ್-ಗಂಗಾವತಿ ರಾಜ್ಯ ಹೆದ್ದಾರಿ ತಲುಪಬಹುದಾಗಿದೆ.

ದಾರಿ ತಪ್ಪಿಸುತ್ತಿರುವ ಮಾಹಿತಿ ಫಲಕ: ಆದರೆ ಮಾಹಿತಿಯ ಕೊರತೆಯಿಂದ ಹಳೆಯ ರಸ್ತೆಯ ಮೂಲಕ ಚಲಿಸುವ ಸರಕು ಸಾಗಣೆ ಲಾರಿಗಳು, ಕಾರು ಸಹಿತ ಲಘು ವಾಹನಗಳು, ಬೈಕ್ ಸವಾರರು ಕಾಮಗಾರಿ ಸ್ಥಳಕ್ಕೆ ತೆರಳಿ ಗೊಂದಲಕ್ಕೊಳಗಾಗುತ್ತಿದ್ದಾರೆ. ಹಿಟ್ನಾಳ ಟೋಲ್ ಗೇಟ್ ಮುಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಕಿರುವ ‘ಅಂಜನಾದ್ರಿ ಬೆಟ್ಟ, ಗಂಗಾವತಿ, ಹುಲಿಗೆಮ್ಮ ದೇವಿ ದೇವಸ್ಥಾನ’ ಎಂಬ ಫಲಕ ಪ್ರವಾಸಿಗರನ್ನು ದಾರಿ ತಪ್ಪಿಸುತ್ತಿದೆ. ಸದ್ಯ ಇರುವ ಫಲಕದಿಂದಾಗಿ ದಾರಿ ತಪ್ಪುತ್ತಿದ್ದು, ಅದನ್ನು ತೆಗೆದು ತಾತ್ಕಾಲಿಕ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾರ್ಗ ಬದಲಾವಣೆ ಮಾಹಿತಿ ಅವಶ್ಯ: ಹಿಟ್ನಾಳ ಟೋಲ್ ಗೇಟ್ ಬಳಿ ಒಂದು ಮಾಹಿತಿ ಫಲಕ, ಬಳ್ಳಾರಿ, ಹೊಸಪೇಟೆ ಕಡೆಯಿಂದ ಅಂಜನಾದ್ರಿ ಆನೆಗೊಂದಿ, ಗಂಗಾವತಿಗೆ ಹೋಗುವ ವಾಹನಗಳಿಗೆ ಹೊಸಹಳ್ಳಿ ಕ್ರಾಸ್ ಹತ್ತಿರ ಮಾರ್ಗ ಬದಲಾವಣೆಯ ಮಾಹಿತಿ ಫಲಕ ಅಗತ್ಯವಾಗಿದೆ. ಇದರಿಂದ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಸುತ್ತು ಬಳಸಿ ಹೋಗುವ ತಾಪತ್ರಯ ತಪ್ಪುತ್ತದೆ. ಜಿಲ್ಲಾ ಆಡಳಿತ ಅಥವಾ ಕಾಮಗಾರಿಯ ಗುತ್ತಿಗೆದಾರರು ಮಾರ್ಗ ಬದಲಾವಣೆಯ ಮಾಹಿತಿ ಫಲಕ ಹಾಕಲು ಮುಂದೆ ಬರಬೇಕು ಎಂದು ಹೊಸಹಳ್ಳಿ ಗ್ರಾಮದ ನರಸಿಂಹ ಶೆಟ್ಟಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-35-1583476173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.