ಮುನಿರಾಬಾದ್: ಸಮೀಪದ ಹೊಸಲಿಂಗಾಪುರ ಗ್ರಾಮದ ಗುಡ್ ಶೆಫರ್ಡ್ ಎಜಿ ಚರ್ಚ್ನಲ್ಲಿ ಭಾನುವಾರ ಈಸ್ಟರ್ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು.

ಕಳೆದ ಶುಕ್ರವಾರ (ಏಪ್ರಿಲ್ 3) ಏಸುಕ್ರಿಸ್ತ ನಮ್ಮೆಲ್ಲರ ಪಾಪದ ಪ್ರಾಯಶ್ಚಿತವಾಗಿ ಶಿಲುಬೆಗೆ ಏರಿದ ದಿನವನ್ನು ಕ್ರಿಶ್ಚಿಯನ್ನರು ಗುಡ್ ಫ್ರೈಡೆ ಎಂದು ಆಚರಿಸಿದರು. ಶಿಲುಬೆಗೆ ಏರಿದ ಮೂರನೇ ದಿನ ಭಾನುವಾರ ಯೇಸು ಕ್ರಿಸ್ತನ ಪುನರುತ್ಥಾನ ಅಥವಾ ಪುನರ್ಜನ್ಮ ಎಂದು ನಂಬುತ್ತಾರೆ.

ಪುನರುತ್ಥಾನದ ಸ್ಮರಣಾರ್ಥ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಇದು ಪಾಪ, ಮರಣ ಮತ್ತು ಕತ್ತಲೆಯ ಮೇಲೆ ಜಯದ ಸಂಕೇತವಾಗಿದೆ. ಹಳೆಯ ಪಾಪ ತ್ಯಜಿಸಿ ಹೊಸ ಜೀವನ ಆರಂಭಿಸಬೇಕು, ದೇವರ ಮೇಲೆ ವಿಶ್ವಾಸವಿಡಬೇಕು, ಕಷ್ಟಗಳ ಮೇಲೆ ದೇವರ ಸಹಾಯದಿಂದ ಜಯ ಸಾಧಿಸಬಹುದು ಎಂದು ಫಾಸ್ಟರ್ ಎಂ. ದೇವಕುಮಾರ್ ಹೇಳಿದರು.

ಸ್ಥಳೀಯ ಕ್ರಿಶ್ಚಿಯನ್ನರು ಹಾಗೂ ದೇವಾಲಯದ ಶಾಖೆಗಳಾದ ಗಿಣಿಗೇರಾ, ನಾಗೇಶನಹಳ್ಳಿ, ಮುನಿರಾಬಾದ್ ಹಾಗೂ ಕೊಪ್ಪಳದಿಂದ ಬಂದ ಹಲವರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-35-1711647374

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.