ಮುನಿರಾಬಾದ್: ಇಲ್ಲಿನ ಹುಲಿಗಿ-ಮುನಿರಾಬಾದ್ ರೈಲು ನಿಲ್ದಾಣ ಅಮೃತ ಭಾರತ್ ರೈಲು ನಿಲ್ದಾಣ ಯೋಜನೆಯ ಅಡಿ ಅಭಿವೃದ್ಧಿ ಹೊಂದಿದ್ದರೂ ಇನ್ನೂ ಕೆಲವು ಸಮಸ್ಯೆಗಳಿದ್ದು ಕ್ರಮ ಕೈಗೊಳ್ಳಲು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿಪೀಠ ಹುಲಿಗೆಮ್ಮ ದೇವಿಯ ದೇವಸ್ಥಾನ ಹೊಂದಿರುವ ಈ ಗ್ರಾಮಕ್ಕೆ ಸಾವಿರಾರು ಭಕ್ತರು ಶುಕ್ರವಾರ, ಮಂಗಳವಾರ, ಹುಣ್ಣಿಮೆ ಮತ್ತು ಜಾತ್ರೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದೇವಿಯ ದರ್ಶನಕ್ಕೆ ರೈಲಿನ ಮೂಲಕ ಬರುತ್ತಾರೆ.

ನಿಲ್ದಾಣ ಅಭಿವೃದ್ಧಿಗೊಂಡರೂ 1ನೇ ಪ್ಲಾಟ್ ಫಾರ್ಮ್ನಲ್ಲಿ ಪ್ರಯಾಣಿಕರಿಗೆ ಸಾಮಾನ್ಯ ಮೂತ್ರಾಲಯಗಳಿಲ್ಲ. 2ನೇ ಪ್ಲಾಟ್ ಫಾರ್ಮ್ನಲ್ಲಿ ಮೂತ್ರಾಲಯ, ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕೂಡ ಆಗಿಲ್ಲ.

ಇನ್ನು ಲಿಫ್ಟ್ ವ್ಯವಸ್ಥೆ ನಿರ್ಮಾಣವಾಗಿದ್ದರೂ ಇನ್ನು ಪ್ರಯಾಣಿಕರ ಬಳಕೆಗೆ ಸಿಗುತ್ತಿಲ್ಲ. ನಿಲ್ದಾಣದಲ್ಲಿ ಖಾಲಿ ಜನ ಆಸನಗಳ ಮೇಲೆ ಮಲಗಿಕೊಂಡಿರುತ್ತಾರೆ. ಇದರಿಂದ ರೈಲು ಪ್ರಯಾಣಿಕರಿಗೆ ಕೂಡಲು ಸ್ಥಳಾವಕಾಶ ದೊರೆಯುತ್ತಿಲ್ಲ, ಇದರ ನಿಯಂತ್ರಣಕ್ಕೆ ಕಾಯಂ ರೈಲ್ವೆ ಪೊಲೀಸರ ಅಗತ್ಯವಿದೆ ಎನ್ನುತ್ತಾರೆ ಗ್ರಾಮದ ರಾಘವೇಂದ್ರ ಕುಲಕರ್ಣಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-35-1839916451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.