ಕೊಪ್ಪಳ: ’ಜನ ಸದಾಕಾಲ ಟಿ.ವಿ. ಮುಂದೆಯೇ ಕುಳಿತುಕೊಳ್ಳುವ ಬದಲು ಕಲೆ, ಸಾಹಿತ್ಯ, ಸಂಗೀತದಂತ ಅಭಿರುಚಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ಲಭಿಸುತ್ತದೆ’ ಎಂದು ನಿವೃತ್ತ ಲೋಕಾಯುಕ್ತ ಅಧಿಕಾರಿ ರಾಮಣ್ಣ ಬನ್ನಿಗೋಳ ಹೇಳಿದರು.

ತಾಲ್ಲೂಕಿನ ಹಿರೇಬಗನಾಳದ ಪಂಡಿತ್ ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 112ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಥೆಯ 19ನೇ ವರ್ಷದ ವಾರ್ಷಿಕೋತ್ಸವ, ಗುರುನಮನ ಸಂಗೀತ ಸಂಭ್ರಮ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಜನರ ಕೊರತೆಯ ನಡುವೆಯೂ ಮಹಾಂತಯ್ಯ ಶಾಸ್ತ್ರಿ ಹಿರೇಮಠ ಅವರು ಸಂಗೀತ ಕಾರ್ಯಕ್ರಮ ನಡೆಸುತ್ತಿರುವ ಶ್ಲಾಘನೀಯ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣ ಕುಮಾರ್ ಮಾತನಾಡಿ ‘ಕಲಾ ಸಂಘಗಳು ಸಾಂಸ್ಕೃತಿಕ ಪೋಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಾವೆಲ್ಲ ಕಳೆದು ಹೋಗಿದ್ದೇವೆ. ಜನರಿಗೆ ಡಿಸ್ಕೊ ಡ್ಯಾನ್ಸ್ಗಳ ಬಗ್ಗೆ ಇರುವ ಪ್ರೀತಿ ಸಂಗೀತ ಕಾರ್ಯಕ್ರಮಗಳ ಬಗ್ಗೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ರವೀಂದ್ರ ರೆಡ್ಡಿ (ಪತ್ರಿಕೋದ್ಯಮ), ಗವಿಸಿದ್ಧಯ್ಯ ಎಸ್. ಲಿಂಗಬಸಯ್ಯನಮಠ (ಬ್ಯಾಂಕಿಂಗ್), ಶ್ರೀಶೈಲ ಚಿಕ್ಕಮಠ ಕುದರಿ ಸಾಲವಾಡಗಿ (ಸುಗಮ ಸಂಗೀತ), ಶಕುಂತಲಾ ಬೆನ್ನಾಳ (ಸಂಗೀತ), ಈಶ್ವರಯ್ಯ ಬ. ಹಲಸಿನಮರದ (ಶಿಕ್ಷಣ), ರೇವಣಸಿದ್ದಸಾ ಸೋ ಶಿದ್ಲಿಂಗ (ಕಂಪ್ಯೂಟರ್) ಅವರನ್ನು ಸನ್ಮಾನಿಸಲಾಯಿತು.

ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಬಿಟಿ ಪಾಟೀಲ ನಗರದ ಹಿರಿಯರಾದ ಮಲ್ಲಿಕಾರ್ಜುನ ಕೋಣಿ, ಕಲಾವಿದರಾದ ಯಮನೂರಪ್ಪ ಬಿ., ಚೆನ್ನಯ್ಯ ರ್ಯಾವಣಕಿ, ಕೃಷ್ಣ ಸೊರಟೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-35-1838721639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.