ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಶುಕ್ರವಾರ 148 ದಿನಗಳನ್ನು ಪೂರ್ಣಗೊಳಿಸಿತು.

ಇದೇ ವೇಳೆ ಸಂಘಟಕರು ಬಾಧಿತ ಹಳ್ಳಿಯ ಜನರ ಜೀವ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ಜಲಾಶಯ ನದಿ ನೀರು ವಿಷಗೊಳಿಸಿದ ಕಾರ್ಖಾನೆಗಳನ್ನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ ಲಾಂಚನ ಅನಾವರಣ ಮಾಡಿದರು.

ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ‘ಕಾರ್ಖಾನೆ ಮಾಲಿನ್ಯದಿಂದ ಬಾಧಿತವಾದ 22 ಹಳ್ಳಿಗಳಲ್ಲಿ ಮಾಲಿನ್ಯ ನಿಯಂತ್ರಣ ಮಾಡಬೇಕು, ಇಲ್ಲವಾದರೆ ಕಾರ್ಖಾನೆಗಳನ್ನು ಸ್ಥಳಾಂತರಿಸಬೇಕು. ನಮ್ಮ ಪರಿಸರ ಹಾಳು ಮಾಡಿ ನಮ್ಮ ಜನರ ಮೇಲೆ ಹಲ್ಲೆ ನಡೆಸಿದರೆ ತಕ್ಕ ಉತ್ತರವನ್ನು ಚಳವಳಿಯಿಂದ ಕೊಡೋಣ’ ಎಂದು ಹೇಳಿದರು.

ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಮುಖರಾದ ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಸೌಮ್ಯ ನಾಲ್ವಾಡ, ಅಕ್ಷರ ಎಂ. ಗೊಂಡಬಾಳ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಪಿ. ಅಕ್ಕಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಗವಿಸಿದ್ದಪ್ಪ ಪುಟಗಿ ಹಿರೇಬಗನಾಳ, ಗಣೇಶ ವಿಶ್ವಕರ್ಮ ಹಿರೇಬಗನಾಳ, ಕಾಸನಕಂಡಿ ಗ್ರಾಮದ ಫಕೀರಗೌಡ ಗೊಂದಿಹೊಸಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-35-1593011459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.