ಕೊಪ್ಪಳ: ‘ಜನ ಗಳಿಸಿ ಕೂಡಿಡುವರು. ವಜ್ರವೈಢೂರ್ಯ ಚಿನ್ನಾಭರಣಗಳನ್ನು ಕಾಣದಂತೆ ಮುಚ್ಚಿಡುವರು. ನಿರೀಕ್ಷೆಗೂ ಮೀರಿ ಹಣದ ನೋಟುಗಳನ್ನು ಇಡಬಾರದ ಸ್ಥಳಗಳಲ್ಲಿ ಕೂಡಿಡುವರು. ರೈತ ಹಗೆಯಲ್ಲಿ ಹೇರಳವಾಗಿ ಜೋಳ ದವಸಧಾನ್ಯಗಳನ್ನು ಸಂಗ್ರಹಿಸುವನು. ಆದರೆ ಹಸಿದು ಬಂದವರಿಗೆ ಅನ್ನ ನೀಡುವುದಿಲ್ಲ. ಕಲ್ಲಿಗೆ ಹಾಲನ್ನು ಎರೆಯುತ್ತಾರೆ’ ಎಂದು ಬೀದರ್ನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಬಸವ ಜಯಂತಿ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಮಾತನಾಡಿ ‘ಬದುಕು ನೀರ ಮೇಲಿನ ಗುಳ್ಳೆಯಂತೆ, ಗಾಳಿಗಿಟ್ಟ ದೀಪದಂತೆ ಕ್ಷಣಿಕ. ಇದನ್ನರಿಯದ ಮನುಜರು ಇಂದೇನುಣ್ಣಲಿ, ನಾಳಿಗೇನುಣ್ಣಲಿ ಎಂದು ಭಕ್ಷ್ಯ ಭೋಜನಗಳ ಭೋಗದ ಮಾತುಗಳಲ್ಲಿ ವೃಥಾ ವಿಲಾಸ ವೈಭೋಗಗಳಲ್ಲಿ ಮೈಮರೆಯುತ್ತಿರುವರು. ಕಾಡಿಚ್ಚಿನಲ್ಲಿ ಸಿಲುಕಿ ಮೈ ಸುಟ್ಟುಕೊಂಡ ನರಿ ನೋವಿನಿಂದ ಊಳಿಡುವಂತೆ, ಸಾವು ಧುತ್ತೆಂದು ಬಂದುನಿಂತಾಗ ದುಃಖಿಸುತ್ತಾ ಪಾರಾಗುವ ದಾರಿ ಹುಡುಕುತ್ತಾ ಅಲೆಯುತ್ತಾರೆ’ ಎಂದರು.

‘ಜೀವನದಲ್ಲಿ ಸಮಯ ಮುಖ್ಯಅಂಶ. ಮರುಭೂಮಿಯಲ್ಲಿ ನಡೆದು ನಡೆದು ಬಾಯಾರಿ ಬಸವಳಿದು, ನೀರಿಗಾಗಿ, ಅಸುನೀಗುವಂತಾಗಿ, ಪರಿತಪಿಸುತ್ತಿರುವವರಿಗೆ ಯಾರಾದರೂ ಒಂದು ಲೋಟ ನೀರು ಕೊಡುವಂತಾದರೆ, ತನ್ನೆಲ್ಲ ಆಸ್ತಿ ನೀಡಲು ಸಿದ್ಧನಾಗುವನಲ್ಲವೇ ? ಆಪತ್ತಿನ ಸಮಯದಲ್ಲಿ ದೊರೆತ ಸಹಾಯಕ್ಕೆ ಮೌಲ್ಯ ಕಟ್ಟಲಾಗುವುದಿಲ್ಲ. ಆ ತಕ್ಷಣದ ಅವಶ್ಯಕತೆ ಪೂರೈಕೆಯಿಂದ ಒಬ್ಬರ ಪ್ರಾಣ ಉಳಿಯಬಹುದು’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-35-1950118251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.