ಕೊಪ್ಪಳ: ‘ಯಾವುದನ್ನೂ ಮೋಸ ಮಾಡದ ಜೀವನ ಅತ್ಯಂತ ಮುಖ್ಯ. ಆದರೆ ಅದನ್ನು ಅನುಸರಿಸುವುದು ಕಷ್ಟ. ಬಸವಣ್ಣನವರು ತನು ವಂಚನೆ, ಮನ ವಂಚನೆ, ಧನ ವಂಚನೆ ಎಂಬ ಮೂರು ವಿಧದ ವಂಚನೆಗಳನ್ನು ಮಾಡಬಾರದೆಂದು ಹೇಳಿದ್ದಾರೆ’ ಎಂದು ಬೀದರಿನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರ ಟ್ರಸ್ಟ್ನ ಪ್ರವಚನ ಸೇವಾ ಸಮಿತಿಯು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬಸವ ಭಾಷೆ ಕುರಿತು ಪ್ರವಚನದಲ್ಲಿ ಭಾನುವಾರ ರಾತ್ರಿ ಮಾತನಾಡಿದ ಅವರು ‘ವಂಚನೆ ಎಂದರೆ ಮೋಸ ಅಥವಾ ಸ್ವಾರ್ಥಕ್ಕಾಗಿ ಏನನ್ನಾದರೂ ಕಾಯ್ದಿಡುವುದು. ಸೇವೆ ಮಾಡುವಾಗ ದೇಹವನ್ನು ತೊಡಗಿಸದೇ ಇರುವುದು ತನು ವಂಚನೆ. ಮನದಲ್ಲಿ ಶುದ್ಧತೆ ಇಲ್ಲದೇ ಇರುವಿಕೆ ಮನ ವಂಚನೆ. ದಾಸೋಹ ಮಾಡದೇ ಧನವನ್ನು ಉಳಿಸಿಕೊಳ್ಳುವುದು ಧನ ವಂಚನೆ ಎಂದರ್ಥ’ ಎಂದು ವ್ಯಾಖ್ಯಾನಿಸಿದರು.

‘ಇಂದಿನ ಜಗತ್ತಿನಲ್ಲಿ ಎಲ್ಲೆಡೆ ಮೋಸ ಹೆಚ್ಚಾಗಿದೆ. ಜನರು ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಾಗಿದ್ದಾರೆ. ಕೆಲವರು ಹಣಕ್ಕಾಗಿ ದೇಶದ ರಹಸ್ಯಗಳನ್ನೇ ಮಾರುವ ಮಟ್ಟಕ್ಕೆ ಹೋಗಿದ್ದಾರೆ. ಇದು ಅಪಾಯಕಾರಿ. ಎಲ್ಲರೂ ಪ್ರಾಮಾಣಿಕರಾಗಿದ್ದರೆ ಮಾತ್ರ ಸಮಸ್ಯೆಗಳು ಕಡಿಮೆಯಾಗುತ್ತವೆ. ಸಮಯ, ಶ್ರಮ ಉಳಿಯುತ್ತದೆ. ಕಚ್ಚಾಟ, ಮೋಸ, ವಂಚನೆ ಇಲ್ಲದ ನೆಮ್ಮದಿಯ ಜೀವನ ಸಿಗುತ್ತದೆ. ಮಾತಿನಲ್ಲಿ ಮಾತ್ರ ಭಕ್ತಿ ತೋರದೇ ನಿಜವಾದ ಭಕ್ತಿ ಹೊಂದಿರಬೇಕು. ಸ್ವಾರ್ಥವಿಲ್ಲದೆ ಸಮಾಜದ ಹಿತಕ್ಕಾಗಿ ಬದುಕುವುದು ಬಸವಾದಿ ಶರಣರ ಆಶಯವಾಗಿದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-35-374382235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.