ಕೊಪ್ಪಳ: 'ಲಿಂಗಾರ್ಪಿತವಾದುದು ಪ್ರಸಾದವಾದರೆ, ಲಿಂಗಾರ್ಪಿತ ವಲ್ಲದುದು ಅನ್ನವಾಗುತ್ತದೆ. ಪ್ರಸಾದವನುಂಡವರ ಬಾಳು ಪ್ರಸನ್ನ. ಬದುಕೆಲ್ಲ ಬಂಗಾರ. ಹರುಷದ ಹೊನಲು. ಲಿಂಗಾರ್ಪಿತ ತತ್ವವು ಮಾನವನ ಅಹಂಕಾರ ನಿರಸನಗೊಳಿಸುವ ಮಂತ್ರವೂ ಹೌದು’ ಎಂದು ಬೀದರ್ನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಮಾತನಾಡಿದ ಅವರು ‘ವ್ಯಷ್ಟಿ-ಸಮಷ್ಟಿಯ ಸುಂದರ ಬದುಕಿಗೆ ಸತ್ಯಶುದ್ಧ ಕಾಯಕ, ಅಗತ್ಯಕ್ಕೆ ತಕ್ಕಂತೆ ಗಳಿಕೆ, ಗಳಿಸಿದುದೆಲ್ಲ ಲಿಂಗಾರ್ಪಣೆ, ಜಂಗಮ ದಾಸೋಹ, ಉಳಿದದ್ದು ಪ್ರಸಾದ ಇದು ಬಸವ ಬಾಳಿನ ಸೂತ್ರವಾಗಿದೆ’ ಎಂದರು.

‘ಬಸವಣ್ಣನವರ ವಿಶಿಷ್ಟ ಕೊಡುಗೆ ಕಾಯಕ ಸಿದ್ದಾಂತ. ವ್ಯಕ್ತಿಯ ಅಂತರಂಗ-ಬಹಿರಂಗ ಶುದ್ಧಿಗೆ ಇದು ಪೂರಕ, ವ್ಯಕ್ತಿಯ ಉನ್ನತಿ ಜೊತೆಗೆ ಸಮಾಜದ ಅಭಿವೃದ್ಧಿಗೆ ತಾರಕ ಮಂತ್ರ. ನಾನೇ ಮಾಡಿದೆ ನಾನೇ ಗಳಿಸಿದೆ, ನನ್ನಿಂದಲೇ ಎಲ್ಲ ಎಂಬ ಅಹಂ ನಿವಾರಣೆಗೆ ಕಾಯಕದಿಂದ ಬಂದದ್ದು ಲಿಂಗಾರ್ಪಿತವ ಮಾಡಿ ಬಳಸಬೇಕು.

ಕಾಯಕ-ಅರ್ಪಣೆ-ಅನುಭಾವ-ಆನಂದದ ಸರಪಳಿ ಬಹುದೊಡ್ಡ ಗಣಿತ. ಎಲ್ಲೇ ಕಿಂಚಿತ್ ತಪ್ಪಿದರೂ ಫಲಿತಾಂಶ ಏರುಪೇರು. ಅತ್ಯಂತ ಅವಧಾನದ ಪ್ರಕ್ರಿಯೆ ಇದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-35-2063085372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.