ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ವೇದಿಕೆಯಲ್ಲಿ ಭಾನುವಾರ ಬಾಬು ಜಗಜೀವನರಾಂ ಅವರ ಸ್ಮರಣೆ ಮಾಡಲಾಯಿತು.

ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಧರಣಿಯ 157ನೇ ದಿನ ಕಟ್ಟಡ ಕಾರ್ಮಿಕರ ಕೇಂದ್ರ ಸಂಘಟನೆ ಬೆಂಬಲ ನೀಡಿತು.

ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ ‘ದಲಿತೋದ್ಧಾರಕ ಬಾಬು ಜಗಜೀವನರಾಂ ಅವರ ಆಶಯ ಈಗ ಮಣ್ಣುಪಾಲಾಗುತ್ತಿದ್ದು, ರೈತರ ಕಣ್ಣಲ್ಲಿ ರಕ್ತ ಹರಿಯುವಂತಾಗಿದೆ. ನಮ್ಮೂರನ್ನು ಹಸಿರು ಕ್ರಾಂತಿಯ ಬದಲಿಗೆ ಕಪ್ಪು ಬೂದಿ, ಹೊಗೆ ತುಂಬಿದ ಪರಿಸರವನ್ನಾಗಿ ಮಾಡಿ ಲಕ್ಷಾಂತರ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ಯಾರನ್ನೂ ಕೇಳದೆ ಗ್ರಾಮಗಳ ನಡುವೆ ಕಾರ್ಖಾನೆ ತಂದಿಡುವ ಕೆಲಸ ಮಾಡುತ್ತಿರುವ ಯಾರೇ ಆದರೂ ಅದು ತಪ್ಪು’ ಎಂದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಬಿ.ಜಿ.ಕರಿಗಾರ, ಬಸವರಾಜ ಪೂಜಾರ, ರವಿ ಕಾಂತನವರ, ಯೂಟ್ಯೂಬರ್ ಸಲ್ಮಾನ್ ಖಾನ್, ಹನುಮೇಶ ಎಂ, ಯಮನೂರ ಜಿ, ನಿಂಗನಗೌಡ, ಕುಮಾರ್ ಕಿನ್ನಾಳ, ಆನಂದ ಕಿನ್ನಾಳ, ಮಂಜುನಾಥ ಗೌಡ, ಶಿವಪ್ಪ ಜಲ್ಲಿ, ರತ್ನಮ್ಮ, ಭಾಷಾ ಮೇಸ್ತ್ರಿ, ಭೀಮಪ್ಪ, ಡಿ.ಎಚ್. ಪೂಜಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-35-351960813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.