ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಮತ್ತು ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳ ನಡೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಧರಣಿ ಶುಕ್ರವಾರ 155 ದಿನಗಳನ್ನು ಪೂರ್ಣಗೊಳಿಸಿತು. ‘ಗುಡ್ ಫ್ರೈಡೇ’ ಅಂಗವಾಗಿ ಧರಣಿ ವೇದಿಕೆಯಲ್ಲಿ ಯೇಸುಕ್ರಿಸ್ತನ ಸ್ಮರಣೆ ಮಾಡಲಾಯಿತು.

ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ ಮಾತನಾಡಿ ‘ಯೇಸುಕ್ರಿಸ್ತ ಜಗತ್ತಿಗೆ ಶಾಂತಿ ಸಾರಿದ ಕ್ಷಮಾಗುಣಿ. ಆತನು ಶಿಲುಬೆಗೆ ಏರಿ ಶಿಲುಬೆಗೇರಿಸಿದವರನ್ನೇ ಕ್ಷಮಿಸು ಎಂದು ಹೇಳಿದ ದಿನವಿದು‘ ಎಂದು ಸ್ಮರಿಸಿಕೊಂಡರು. ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸೊಸೈಟಿ ವತಿಯಿಂದ ಧರಣಿ ನಿರತರಿಗೆ ಮಜ್ಜಿಗೆ ಹಂಚಲಾಯಿತು.

‘ಯೇಸುವಿನ ಮರಣವನ್ನು ಪಾಪದ ಮೇಲಿನ ವಿಜಯ, ಮಾನವ ಕುಲಕ್ಕೆ ಶಾಶ್ವತ ಜೀವನ ನೀಡುವ ತ್ಯಾಗ ಎಂದು ಭಾವಿಸಿ ಹಣ್ಣು ಹಾಲು ಮಜ್ಜಿಗೆ ಸಿಹಿ ಹಂಚಿ ನೆರೆಯವರನ್ನು ಪ್ರೀತಿಸು ಎಂದು ಹೇಳುವುದು ಇವರ ಆದರ್ಶವಾಗಿದೆ’ ಎಂದು ಹೇಳಿದರು.

ಧರಣಿಯಲ್ಲಿ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ವಿ.ಬಿ.ರಡ್ಡೇರ, ಬಸವರಾಜ ಪೂಜಾರ, ಬಿ.ಜಿ. ಕರಿಗಾರ, ಎಂ.ಎಸ್. ಗಂಟಿ, ದೊಡ್ಡಬಸಪ್ಪ ಅಂಗಡಿ, ರಾಜಶೇಖರ ಏಳುಬಾವಿ, ಫಾಸ್ಟರ್ ಪೀಟರ್ ಪಾಲ್, ಕಿಟ್ಟು ಪ್ಯಾಟ್ರೋಟಿಕ್, ಪ್ರಕಾಶ ದೇವರಮನೆ, ಸಂಗಮ್ಮ ರೇವಣಕಿ, ತುಕಾರಾಮ ಪಾತ್ರೋಟಿ, ಚನ್ನವೀರಯ್ಯ ಹಿರೇಮಠ, ಪಂಪಣ್ಣ ಚಿಂತಪಲ್ಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರೈತ ಸಂಘಕ್ಕೆ ಚಾಲನೆ: ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ, ಹಸಿರು ಶಾಲು ದೀಕ್ಷೆ, ಬೋರ್ಡ್ ಅನಾವರಣ, ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಲಿನ್ಯದ ವಿರುದ್ಧದ ಹೋರಾಟಕ್ಕೆ ಏಕರೂಪ ಮತ್ತು ತೀವ್ರಸ್ವರೂಪ ನೀಡಲು 22 ಗ್ರಾಮಗಳಲ್ಲಿ ರೈತ ಸಂಘ ಸ್ಥಾಪಿಸುವ ಕಾರ್ಯ ನಡೆದಿದೆ.

ಹಾಲವರ್ತಿ ಗ್ರಾಮದಲ್ಲಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು ‘ರೈತರು ಹೆದರದೇ ಜೀವಿಸುವ ಮತ್ತು ಪಟ್ಟಭದ್ರರನ್ನು ಎದುರಿಸುವ ಶಕ್ತಿ ಮೈಗೂಡಿಸಿಕೊಂಡು ಸಾಗಬೇಕು. ವೇದಿಕೆ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ. ಕಂಪನಿಗಳ ಗೂಂಡಾಗಿರಿ, ದಬ್ಬಾಳಿಕೆ, ಕಪಟತನ ಇನ್ನು ಮುಂದೆ ನಡೆಯುವುದಿಲ್ಲ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-35-1640257632

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.