ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಮತ್ತು ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳ ನಡೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಭಾನುವಾರ 150 ದಿನಗಳನ್ನು ಪೂರೈಸಿತು. ಅಶೋಕ ವೃತ್ತದಲ್ಲಿ ಬಸಾಪುರ ಕೆರೆ ಪರಭಾರೆಯನ್ನು ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಸಾಹಿತಿ ಹುಬ್ಬಳ್ಳಿಯ ಶ್ಯಾಮಸುಂದರ ಬಿದರಕುಂದಿ ಅವರು ಬಾಧಿತ ಗ್ರಾಮಗಳಿಗೆ ಭೇಟಿ ಮಾಡಿ ಬಂದು ವೇದಿಕೆಯಲ್ಲಿ ಮಾತನಾಡಿ ‘ಒಂದು ಗಂಟೆ ಈ ಗ್ರಾಮಗಳಲ್ಲಿ ಓಡಾಡಲು ಕಷ್ಟವಾಯಿತು. ಇಡೀ ಬದುಕನ್ನು ಅವರು ಅಲ್ಲಿ ಹೇಗೆ ಕಳೆಯುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಜನಪ್ರತಿನಿಧಿಗಳು, ಸರ್ಕಾರ ಅವರನ್ನು ಮತ್ತು ಮುಂದೆ ಅಂತದ್ದೇ ಪರಿಸ್ಥಿತಿಗೆ ಒಳಗಾಗುವ ಕೊಪ್ಪಳ ಹಾಗೂ ಭಾಗ್ಯನಗರದ ಜನರನ್ನು ಮತದಾರರು, ಬೆಂಬಲಿಗರು ಎಂದು ಭಾವಿಸದೆ ಮನುಷ್ಯರೆಂದು ತಿಳಿಯಬೇಕು’ ಎಂದರು.

ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ಹೋರಾಟ ಎಷ್ಟೇ ದಿನ ನಡೆದರೂ ಮುನ್ನಡೆಸಲು ಸಿದ್ಧರಿದ್ದೇವೆ ಆದರೆ ಸರ್ಕಾರ ಬೇಗ ಜನರ ಗೋಳು ಅರಿಯಬೇಕು’ ಎಂದು ಆಗ್ರಹಿಸಿದರು.

ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ, ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಮುಖರಾದ ಡಾ. ಮಂಜುನಾಥ ಸಜ್ಜನ್, ಸಂತೋಷ ದೇಶಪಾಂಡೆ, ರಮೇಶ ತುಪ್ಪದ, ಶರಣು ಡೊಳ್ಳಿನ, ಶಿವಕುಮಾರ ಕುಕನೂರು, ಬಿ.ಕೆ. ಪಟ್ಟಣಶೆಟ್ಟಿ, ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ, ಸರೋಜಾ ಬಾಕಳೆ, ಕಾವ್ಯಾ ಗಡಾದ, ಗ್ಯಾನೇಶ ಹ್ಯಾಟಿ, ರಾಜೇಶ ಸಸಿಮಠ, ಜಿ.ಎಸ್.ಕಡೇಮನಿ, ಗುಡದಪ್ಪ ಹಡಪದ, ನಾಗರಾಜ ಕುಷ್ಟಗಿ, ವೈ.ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ, ಮಹಾಂತೇಶ ಕೊತಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

‘ಬಸಾಪುರ ಕೆರೆ ಕುರಿತು ಜಿಲ್ಲಾಧಿಕಾರಿ ಹೇಳಿಕೆ ಸರಿಯಲ್ಲ’

ಕೊಪ್ಪಳ ತಾಲ್ಲೂಕಿನ ಬಸಾಪುರ ಕೆರೆ ಸುಪ್ರೀಂ ಕೋರ್ಟ್ ಆದೇಶದಂತೆ ಬಲ್ಡೋಟ ಕಾರ್ಖಾನೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಸುಪ್ರೀಂ ಕೋರ್ಟ್ ಆದೇಶದಲ್ಲಿ ಒಂದೇ ಒಂದು ಶಬ್ದದ ಉಲ್ಲೇಖ ಇಲ್ಲದಿದ್ದರೂ ಅವರು ಈ ಹೇಳಿಕೆ ನೀಡಿದ್ದಲ್ಲದೆ ಕೆರೆ ಸಾರ್ವಜನಿಕರಿಗೆ ಬೇಕೆಂದು ಹೋರಾಟ ಮಾಡುವವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. 2022ರ ಜ. 5ರಂದು ಹೈಕೋರ್ಟ್ ಆದೇಶ ಮಾಡಿರುವಂತೆ ಕೆರೆಯ ಸುತ್ತಲಿನ ಗ್ರಾಮಗಳ ಜನ ಜಾನುವಾರುಗಳು ನೀರು ಕುಡಿಯಲು ಮುಕ್ತವಾಗಿಡಬೇಕು ಎಂದು ಹೇಳಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿ ‘ಬಸಾಪುರ ಕೆರೆ ಕಾರ್ಖಾನೆ ವ್ಯಾಪ್ತಿಗೆ ಒಳಪಟ್ಟಿರುವ ಅಂಶ ಸುಪ್ರೀಂಕೋರ್ಟ್ ಆದೇಶದಲ್ಲಿದೆ. ಕೆರೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿರಬೇಕು ಎಂದು ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕಾರ್ಖಾನೆಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೆಐಡಿಬಿ ಮೂಲಕ ಕಾರ್ಖಾನೆಗೆ ನೀಡಲಾಗಿದ್ದ 1038 ಎಕರೆ ಪ್ರದೇಶದಲ್ಲಿ ಕೆರೆಯೂ ಕಾರ್ಖಾನೆಗೆ ಮೀಸಲಾಗಿದೆ. ಈ ಬಗ್ಗೆ ಗೊಂದಲಗಳಿದ್ದರೆ ವಿಚಾರಣೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂಬ ಅಂಶವೂ ಆದೇಶದಲ್ಲಿದೆ’ ಎಂದು ದಾಖಲೆಗಳನ್ನು ಉಲ್ಲೇಖಿಸಿ ಹೇಳಿದ್ದರು.

ಮನುಕುಲದ ಸಂಕಟ ನಿವಾರಣೆಗೆ ಈ ಹೋರಾಟ ನಡೆಯುತ್ತಿದೆ. ಕರುಳಿನ ಕರೆಗೆ ಓಗೊಟ್ಟು ನಡೆಯುತ್ತಿರುವ ಈ ಹೋರಾಟದ 200ನೇ ದಿನಕ್ಕೆ ಪತ್ನಿ ಸಮೇತ ಬರುತ್ತೇನೆ
ಶ್ಯಾಮಸುಂದರ ಬಿದರಕುಂದಿ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.