ಕೊಪ್ಪಳ: ಎರಡು ತಿಂಗಳುಗಳ ಬಿರುಬಿಸಿಲಿನ ಬೇಗೆ ಕಳೆದು ಮಳೆಗಾಲದ ಲಕ್ಷಣಗಳು ಆರಂಭವಾಗಿದ್ದು, ಸ್ಥಳೀಯ ಆಡಳಿತ ಈಗ ಚರಂಡಿಗಳ ಸ್ವಚ್ಛತೆ ಹಾಗೂ ರಾಜಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯವನ್ನು ಹೊರಹಾಕುವ ಕೆಲಸ ಆರಂಭಿಸಿದೆ. ಇದಕ್ಕೆ ವೇಗ ಲಭಿಸಬೇಕಿದೆ.

ನಗರ ಪೊಲೀಸ್ ಠಾಣೆಯ ಪಕ್ಕದಲ್ಲಿ ಹಾದು ಹೋಗಿರುವ ಬೃಹತ್ ರಾಜಕಾಲುವೆಯಲ್ಲಿ ತುಂಬಿರುವ ತ್ಯಾಜ್ಯವನ್ನು ಹೊರ ತೆಗೆಯಲಾಗುತ್ತಿದ್ದು, ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ವ್ಯಾಪಕವಾಗಿ ತುಂಬಿಕೊಂಡಿದೆ. ಅಕ್ಕಪಕ್ಕದಲ್ಲಿರುವ ಅಂಗಡಿಗಳು, ಬಾರ್ಗಳು ಚರಂಡಿಯಲ್ಲಿ ತ್ಯಾಜ್ಯ ಸುರಿದರೂ ಕಣ್ಣುಮುಚ್ಚಿಕೊಂಡು ಕುಳಿತ ಸ್ಥಳೀಯ ಆಡಳಿತದ ಅಧಿಕಾರಿಗಳು ಮಳೆಗಾಲ ಬಂದ ಬಳಿಕ ಎಚ್ಚೆತ್ತುಕೊಳ್ಳುವುದು ಪ್ರತಿವರ್ಷವೂ ನಡೆದುಕೊಂಡು ಬಂದ ಸಾಮಾನ್ಯ ಸಂಗತಿ.

ಜಿಲ್ಲಾ ಕೇಂದ್ರದ ಪದಕಿ ಲೇಔಟ್, ಕೊಳೆಗೇರಿ ಬಡಾವಣೆಗಳು, ಹಮಾಲರ ಕಾಲೊನಿ, ಶಿವಗಂಗಾ ನಗರ, ಗಡಿಯಾರ ಕಂಬದ ಸುತ್ತಮುತ್ತಲಿನ ಬಡಾವಣೆಗಳು, ಹಳೆ ಜಿಲ್ಲಾಸ್ಪತ್ರೆಯ ಸಮೀಪ ಹೀಗೆ ಅನೇಕ ಕಡೆಗಳಲ್ಲಿ ಚರಂಡಿಯ ವ್ಯವಸ್ಥೆಯಿದ್ದರೂ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ. ನಗರಸಭೆ ವತಿಯಿಂದ ಅಲ್ಲಲ್ಲಿ ಚರಂಡಿ ಮೇಲೆ ಕಾಂಕ್ರೀಟ್ನಿಂದ ಮುಚ್ಚಲಾಗಿದ್ದರೂ ತ್ಯಾಜ್ಯ ತುಂಬಿ ಸಮಸ್ಯೆಯಾದಾಗ ಪರಿಹರಿಸಲು ಅಲ್ಲಲ್ಲಿ ಜಾಗ ಬಿಡಲಾಗಿದೆ. ಈ ಕಿರು ಕಿಂಡಿಯಲ್ಲಿ ಜನ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ನೀರು ಸುಲಭವಾಗಿ ಹರಿಯುವುದಿಲ್ಲ.

ಪ್ರತಿವರ್ಷ ಮಳೆ ಬಂದಾಗ ಗಣೇಶ ತೆಗ್ಗಿನಲ್ಲಿ ಸಮಸ್ಯೆಯಾಗುತ್ತದೆ. ತೆಗ್ಗಿನಲ್ಲಿ ಈ ಬಡಾವಣೆಯಿರುವ ಕಾರಣ ನೀರು ಹಿಂದೆ ಎರಡೂ ವರ್ಷವೂ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು. ಸಮಸ್ಯೆಯಾದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸ್ಥಳೀಯ ಆಡಳಿತದ ಅದಕ್ಕೆ ಕಾಯಂ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ. ಮಾಡಿದರೂ ಅದು ಅನುಷ್ಠಾನಕ್ಕೆ ಬರುತ್ತಿಲ್ಲ.

ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚು: ನಗರದ ರಾಜಕಾಲುವೆಗಳಲ್ಲಿ ನಗರಸಭೆ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ತ್ಯಾಜ್ಯಗಳನ್ನು ಹೊರಹಾಕುವ ಕೆಲಸ ಮಾಡುತ್ತಿದ್ದು, ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚಾಗಿದೆ. ನಗರದ ವಿವಿಧ ಬಡಾವಣೆಗಳ ಚರಂಡಿಯಿಂದ ಬರುವ ನೀರು ರಾಜಕಾಲುವೆಯನ್ನು ಸೇರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ರಾಜಕಾಲುವೆಯಲ್ಲಿ ತುಂಬಿ ಅಲ್ಲೇ ಕೊಳೆತು ಹೋಗುತ್ತಿದೆ. ಪ್ರತಿ ಮಳೆಗಾಲ ಬಂದಾಗ ಸ್ಥಳೀಯ ಆಡಳಿತ ಆ ತ್ಯಾಜ್ಯ ಸ್ವಚ್ಛಮಾಡುತ್ತದೆ. ಇದರ ಬದಲು ತ್ಯಾಜ್ಯ ಎಸೆಯುವವರ ಮೇಲೆ ಕಣ್ಗಾವಲು ವಹಿಸಬೇಕಾಗಿದೆ. ಪ್ರತಿಬಾರಿ ಹೂಳೆತ್ತುವ ಬದಲು ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆ ಯಾವಾಗ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸ್ವಚ್ಛತೆ ಸಮಸ್ಯೆ; ಸರ್ವೆಯಲ್ಲಿ ಬಹಿರಂಗ

ಕೊಪ್ಪಳ ನಗರಸಭೆ ವತಿಯಿಂದ ನಗರದ ಸ್ವಚ್ಛಗೊಳಿಸುವ ನಿರ್ವಹಣೆ ಹೇಗೆ ಮಾಡಲಾಗುತ್ತಿದೆ? ಎನ್ನುವ ಕುರಿತು ಇಲಾಖೆಯ ವತಿಯಿಂದ ಮನೆ ಮನೆ ಸರ್ವೆ ಮಾಡಲಾಗುತ್ತಿದೆ.

ನಿತ್ಯ ಕಸ ವಿಲೇವಾರಿಗೆ ವಾಹನಗಳು ಬರುತ್ತಿವೆಯೇ?, ಚರಂಡಿ ಸ್ವಚ್ಛತೆ, ಮೂಲದಲ್ಲಿಯೇ ಹಸಿಒಣ ಕಸ ವಿಂಗಡಣೆ ಆಗುತ್ತಿದೆಯೇ? ಹೀಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸರ್ವೆ ಮಾಡುವ ಸಿಬ್ಬಂದಿ ಪ್ರಶ್ನಿಸಿ ಅದನ್ನು ಆನ್ಲೈನ್ನಲ್ಲಿ ದಾಖಲಿಸುತ್ತಿದ್ದಾರೆ.

ಸ್ವಚ್ಛತೆ ಸರ್ವೆ ಮಾಡುತ್ತಿರುವ ಸಿಬ್ಬಂದಿಯನ್ನೇ ಈ ಕುರಿತು ಪ್ರಶ್ನಿಸಿದರೆ ‘ನಗರದ ಸ್ವಚ್ಛತೆ ಬಗ್ಗೆ ಜನರಿಂದ ಮಾಹಿತಿ ದಾಖಲೀಕರಣ ಮಾಡಲಾಗುತ್ತಿದೆ. ಕಸ ವಿಲೇವಾರಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದರೆ, ಚರಂಡಿ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಇವೆ. ನಿಯಮಿತವಾಗಿ ಈ ಕೆಲಸವಾಗುತ್ತಿಲ್ಲ ಎಂದು ಸಾರ್ವಜನಿಕರು ಸಮಸ್ಯೆ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಪೌರಕಾರ್ಮಿಕರ ಕೊರತೆ; ಹೆಚ್ಚಿದ ಸಮಸ್ಯೆ

ನಗರದ ಜನಸಂಖ್ಯೆಗೆ ತಕ್ಕಂತೆ ಪೌರ ಕಾರ್ಮಿಕರು ಇಲ್ಲದಿರುವುದು ಕೂಡ ಸ್ವಚ್ಛತೆ ಮೇಲೆ ಪರಿಣಾಮ ಬೀರುತ್ತಿದೆ. 2011ರ ಜನಗಣತಿ ಪ್ರಕಾರ ಕೊಪ್ಪಳ ನಗರ 72ರಿಂದ 74 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಇತ್ತೀಚೆಗೆ ಸಂಗ್ರಹಿಸಿದ ಮಾಹಿತಿಯಿಂದ ಅಂದಾಜು 90 ಸಾವಿರದಿಂದ ಒಂದು ಲಕ್ಷದ ತನಕ ಇದೆ ಎಂದು ನಗರಸಭೆ ಲೆಕ್ಕಾಚಾರ ಹಾಕಿದೆ. ಇಷ್ಟೊಂದು ಜನಸಂಖ್ಯೆ ಲೆಕ್ಕಾಚಾರದಲ್ಲಿ ಇನ್ನೂ 60 ಜನ ಪೌರ ಕಾರ್ಮಿಕರು ಬೇಕಿದೆ. ಸರ್ಕಾರದ ಲೆಕ್ಕದ ಪ್ರಕಾರ 700 ಜನರಿಗೆ ಒಬ್ಬ ಪೌರ ಕಾರ್ಮಿಕ ಇರಬೇಕು.

‘ಶಿಕ್ಷಣ, ಉದ್ಯೋಗ ಹೀಗೆ ವಿವಿಧ ಕಾರಣಗಳಿಗಾಗಿ ನಗರಕ್ಕೆ ಬಂದು ನೆಲಸುವವರು ಹಾಗೂ ವಾಪಸ್ ಹಳ್ಳಿಗಳಿಗೆ ಹೋಗುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಪೌರ ಕಾರ್ಮಿಕರು ಇಲ್ಲ. ಆದ್ದರಿಂದ ಈಗ ಬೇಕಿರುವ ಪೌರ ಕಾರ್ಮಿಕರ ಸಂಖ್ಯೆಯಲ್ಲಿ ಶೇ. 50ರಷ್ಟು ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೂ ಆದ ಮಂಜುನಾಥ ಗುಂಡೂರು ತಿಳಿಸಿದರು.

ಮಳೆಗಾಲ ಸಮೀಪಿಸಿರುವ ಕಾರಣ ಕೊಪ್ಪಳದಲ್ಲಿ ರಾಜಕಾಲುವೆ ಸ್ವಚ್ಛಗೊಳಿಸಿ ಸಹಾಯವಾಣಿ ಆರಂಭಿಸಲಾಗಿದೆ. ತಗ್ಗು ಪ್ರದೇಶದಲ್ಲಿ ಚರಂಡಿ ಸ್ವಚ್ಛಮಾಡಲಾಗುತ್ತಿದೆ. ಸ್ವಚ್ಛತೆ ಕೆಲಸಕ್ಕೆ ವೇಗ ನೀಡಲಾಗುವುದು.
– ಮಂಜುನಾಥ ಗುಂಡೂರು, ಕೊಪ್ಪಳ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.